![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, May 24, 2019, 1:31 PM IST
ನರೇಂದ್ರ ಮೋದಿ ಸುನಾಮಿ ಅಲೆಗೆ ದೇಶಾದ್ಯಂತ ಹೀನಾಯವಾಗಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ದೇವರ ನಾಡು ಎಂಬ ಖ್ಯಾತಿ ಪಡೆದಿರುವ ಕೇರಳ ಫಲಿ ತಾಂಶ ತುಸು ನಿರಾಳ ಮೂಡಿಸಿದೆ. 20 ಸಂಸತ್ ಸದಸ್ಯ ಬಲದ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿ ಎಫ್ 19 ಕ್ಷೇತ್ರಗಳಲ್ಲಿ ಗೆದ್ದಿದೆ. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಘಟನಾಘಟಿ ನಾಯಕರು ಈ ಚುನಾವಣೆಯಲ್ಲಿ ಪರಾಭವಗೊಂಡಿದ್ದರೆ, ಕೇರಳದಲ್ಲಿ ಮಾತ್ರ ದಶಕಗಳಿಂದ ತಳವೂರಿದ್ದ ಕೆಂಪು ಕೋಟೆಯನ್ನು ಕಾಂಗ್ರೆಸ್ ಅಭ್ಯರ್ಥಿಗಳು ಭೇದಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಫಲಿ ತಾಂಶ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಭಾರೀ ಮುಖಭಂಗ ಉಂಟುಮಾಡಿದೆ. ಸಿಪಿಎಂ ನೇತೃತ್ವದ ಆಡಳಿತರೂಢ ಎಲ್‌ಡಿಎಫ್ ಒಂದು ಸ್ಥಾನಕ್ಕೆ ಸೀಮಿತವಾಗಿ ಹೀನಾಯ ಸೋಲನ್ನಪ್ಪಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಯಿಂದ ವಯನಾಡು ತಾರಾ ಕ್ಷೇತ್ರವಾಗಿ ಮಾರ್ಪ ಟ್ಟಿತ್ತು. ಉತ್ತರಪ್ರದೇಶದ ಅಮೇಠಿಯಲ್ಲಿ ಸೋಲುವ ಭೀತಿಯಿಂದ ವೈನಾಡು ಕ್ಷೇತ್ರ ಆರಿಸಿಕೊಂಡಿದ್ದರು. ಸುಮಾರು 8 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಿರುವನಂತಪುರದಲ್ಲಿ ಶಶಿ ತರೂರ್ ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ಮೂರು ದಶಕದಿಂದ ಎಲ್‌ಡಿಎಫ್ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಯುಡಿಎಫ್ನ ರಾಜಮೋಹನ್ ಉಣ್ಣಿತ್ತಾನ್ ಜಯ ಸಾಧಿಸಿದ್ದಾರೆ.
ಗೆದ್ದ ಪ್ರಮುಖರು
ರಾಹುಲ್ ಗಾಂಧಿ (ಯುಡಿಎಫ್), ವಯನಾಡು
ಶಶಿ ತರೂರ್ (ಯುಡಿಎಫ್), ತಿರುವನಂತಪುರ
ರಾಜಮೋಹನ್ ಉನ್ನಿತ್ತನ್,
(ಯುಡಿಎಫ್), ಕಾಸರಗೋಡು
ಎನ್.ಕೆ.ಪ್ರೇಮಚಂದ್ರನ್,
(ಯುಡಿಎಫ್) ಕೊಲ್ಲಂ
ಎಡ್ವೊಕೇಟ್ ಎ.ಎಂ.ಆರಿಫ್
(ಎಲ್‌ಡಿಎಫ್) ಆಲಪ್ಪುಳ
ಸೋತ ಪ್ರಮುಖರು
ಕುಮ್ಮನಮ್ ರಾಜಶೇಖರನ್,
(ಬಿಜೆಪಿ), ತಿರುವನಂತಪುರ
ಪಿ.ಪಿ.ಸುನೀರ್, (ಎಲ್‌ಡಿಎಫ್), ವೈನಾಡು
ವಿ.ಪಿ.ಸಾನು, (ಎಲ್‌ಡಿಎಫ್),
ಮಲ್ಲಪುರಂ
ಸುರೇಶ್ ಗೋಪಿ, (ಬಿಜೆಪಿ) ಚಾಲಕ್ಕುಡಿ
ಡಾ| ಬಿ.ಕೆ.ಬಿಜು , (ಎಲ್‌ಡಿಎಫ್) ಅಲತ್ತೂರ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.