Allu Arjun ಮನೆಗೆ ದಾಳಿ: ಕಾಂಗ್ರೆಸ್ ಕೈವಾಡ?
ದಾಳಿಕೋರರು ಕಾಂಗ್ರೆಸ್‌ನವರು ಸೇರಿದವರು: ಬಿಜೆಪಿ, ಬಿಆರೆಸ್
Team Udayavani, Dec 24, 2024, 1:00 AM IST
ಹೈದರಾಬಾದ್: “ಪುಷ್ಪ-2′ ನಟ ಅಲ್ಲು ಅರ್ಜುನ್ ಮನೆ ಹೊರಗೆ ಉಸ್ಮಾನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಜತೆ ಸಂಬಂಧ ಹೊಂದಿರುವ ಗುಂಪೊಂದು ನಡೆಸಿರುವ ದಾಂಧಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಘಟನೆ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಚರ್ಚೆ ನಡೆದಿತ್ತು. ಅದಕ್ಕೆ ಪೂರಕವಾಗಿ ವಿಪಕ್ಷಗಳಾಗಿರುವ ಬಿಜೆಪಿ, ಬಿಆರ್‌ಎಸ್, ನಟನ ಮನೆ ಮುಂದೆ ದಾಂಧಲೆ ನಡೆಸಿದವರು ಸಿಎಂ ರೇವಂತ್ ರೆಡ್ಡಿ ಕ್ಷೇತ್ರದವರು, ಕಾಂಗ್ರೆಸಿಗರು ಎಂದು ದೂರಿದ್ದಾರೆ. ಆದರೆ ಈ ಆರೋಪವನ್ನು ತೆಲಂಗಾಣ ಕಾಂಗ್ರೆಸ್ ತಳ್ಳಿ ಹಾಕಿದೆ. ನಮ್ಮ ಪಕ್ಷದವರೇ ಈ ಕೃತ್ಯ ಎಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಕ್ಷ ಹೇಳಿದೆ.
“ಪುಷ್ಪ-2′ ಚಿತ್ರ ಬಿಡುಗಡೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಮಗವೊಂದು ಗಾಯಗೊಂಡಿತ್ತು. ಈ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಗುಂಪೊಂದು ರವಿವಾರ ದಾಂಧಲೆ ನಡೆಸಿತ್ತು. ಮತ್ತೊಂದೆಡೆ, ಸಿಎಂ ರೇವಂತ್ ರೆಡ್ಡಿ ದಾಂಧಲೆ ಯನ್ನು ಖಂಡಿಸಿ, ಕ್ರಮ ಕೈಗೊಳ್ಳುವಂತೆ ಡಿಜಿಪಿ, ಹೈದ್ರಾಬಾದ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಇದೇ ವೇಳೆ, “ಪುಷ್ಪಾ -2′ ಚಿತ್ರ ನಿರ್ಮಾಣ ಸಂಸ್ಥೆ ಅಸುನೀಗಿದ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಚೆಕ್ ನೀಡಿದೆ. ಈ ಮಧ್ಯೆ, ಕಾಲು¤ಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್‌ಗೆ ನಾಳೆ ವಿಚಾ ರಣೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ ಬಿಜೆಪಿ
ದಾಂಧಲೆ ನಡೆಸಿದವರ ಪೈಕಿ ಒಬ್ಬ ಸಿಎಂ ರೇವಂತ್ ರೆಡ್ಡಿ ಜತೆ ಇರುವ ಫೋಟೊ ವೊಂದನ್ನು ಬಿಜೆಪಿ ಟ್ವೀಟ್ ಮಾಡಿದೆ. ಜತೆಗೆ ಇದು ಸರಕಾರಿ ಪ್ರಾಯೋಜಿತ ದಾಂಧಲೆ ಎಂ ದು ಆರೋಪಿಸಿದೆ. ಬಿಆರ್‌ಎಸ್ ಶಾಸಕ ಹರೀಶ್ ರಾವ್, ಅಲ್ಲು ಅರ್ಜುನ್ ಮನೆ ಮೇಲಿ ದಾಳಿಯು ಆಡಳಿತದ ವೈಫಲ್ಯ ಎಂದಿದ್ದಾರೆ. ಆದರೆ ಆರೋಪ ತಳ್ಳಿ ಹಾಕಿರುವ ಕಾಂಗ್ರೆಸ್, ದಾಂಧಲೆ ನಡೆಸಿದವರು ಮತ್ತು ಕಾಂಗ್ರೆಸ್‌ಗೆ ಸಂಬಂಧವಿಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.