ರಾಮಮಂದಿರ ನಿರ್ಮಾಣ ಆರಂಭ
Team Udayavani, Jan 20, 2021, 7:00 AM IST
ಅಯೋಧ್ಯೆ.: ಶ್ರೀ ರಾಮಮಂದಿರ ನಿರ್ಮಾಣದ ಕನಸಿಗೆ ರೆಕ್ಕೆ ಮೂಡಲಾರಂಭಿಸಿದೆ.
ಮಂಗಳವಾರದಿಂದ ಪಾಯ ಅಗೆಯುವ ಕೆಲಸ ಆರಂಭವಾಗಿದ್ದು, ಫೆಬ್ರವರಿಯಲ್ಲಿ ಕಂಬ ಅಳವಡಿಕೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಸಚಿವ ಚಂಪತರಾಯ್ ಹೇಳಿದ್ದಾರೆ. ಈಗಾಗಲೇ ರಾಮಜನ್ಮಭೂಮಿಯ ಮಣ್ಣಿನ ಪರೀಕ್ಷೆಯನ್ನು ಮೂರು ಬಾರಿ ನಡೆಸಲಾಗಿದ್ದು, ಪರಿಣತರು ಬುನಾದಿಗಾಗಿ ಅತ್ಯುತ್ತಮ ವಿನ್ಯಾಸ ರೂಪಿಸಿದ್ದಾರೆ.
ಚಂಪತ ರಾಯ್ ಪ್ರಕಾರ ಫೆಬ್ರವರ ಯಿಂದ ಮುಖ್ಯ ನಿರ್ಮಾಣ ಕಾಮಗಾರಿಆರಂಭವಾಗಲಿದ್ದು, 39 ತಿಂಗಳುಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ.
ನಿಧಿ ಸಂಗ್ರಹ: ಉತ್ತಮ ಸ್ಪಂದನೆ :
ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಭರದಿಂದ ಸಾಗಿದೆ. ವಿಹಿಂಪವು ಆರಂಭಿಸಿರುವ ಸಮರ್ಪಣ ನಿಧಿ ಅಭಿಯಾನ ಆರಂಭವಾಗಿ ಕೆಲವೇ ದಿನ ಆಗಿದ್ದರೂ ಅನೇಕ ನಗರಗಳಲ್ಲಿ 10 ರೂ., 100 ರೂ. ಮತ್ತು 1,000 ರೂ. ಕೂಪನ್ಗಳು ಖಾಲಿಯಾಗುತ್ತಿವೆ. 1,000 ರೂ.ಗಳಿಂದ ತೊಡಗಿ ಲಕ್ಷಾಂತರ ರೂ.ವರೆಗೆ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.
ಗುಜರಾತ್ನ ವಜ್ರದ ವ್ಯಾಪಾರಿ ಗೋವಿಂದಭಾಯ್ ಡೋಲಾಕಿಯಾ ಅವರು 11 ಕೋ. ರೂ. ದೇಣಿಗೆ ನೀಡಿ ರಾಮಭಕ್ತಿ ಮೆರೆದಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.