ನಕಲಿ ಮದ್ಯ ಕುಡಿದು 24 ಮಂದಿ ಸಾವು: ಮೂರು ತಂಡಗಳಿಂದ ತನಿಖೆ
Team Udayavani, Nov 5, 2021, 12:40 PM IST
ಗೋಪಾಲ್ ಗಂಜ್: ನಕಲಿ ಮದ್ಯ ಕುಡಿದು 24 ಮಂದಿ ಸಾವನ್ನಪ್ಪಿ, ಹಲವರು ಅಸ್ವಸ್ಥರಾಗಿರುವ ಘಟನೆ ಬಿಹಾರದ ಗೋಪಾಲಗಂಜ್ ಮತ್ತು ಚಂಪಾರನ್ ಜಿಲ್ಲೆಗಳಲ್ಲಿ ನಡೆದಿದೆ. ಕಳೆದೆರಡು ದಿನಗಳಲ್ಲಿ ಇಲ್ಲಿ ಮದ್ಯ ನಿಷೇಧ ಹೇರಲಾಗಿತ್ತು.
ಪಶ್ಚಿಮ ಚಂಪಾರಣ್ ಜಿಲ್ಲೆಯ ಮುಖ್ಯ ಕಛೇರಿ ಬೆಟ್ಟಿಯಾದಲ್ಲಿನ ತೆಲ್ಹುವಾ ಗ್ರಾಮದಲ್ಲಿ ಗುರುವಾರ ಎಂಟು ಜನರು ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದರೆ, ಗೋಪಾಲ್‌ಗಂಜ್‌ನಲ್ಲಿ ಶಂಕಿತ ನಕಲಿ ಮದ್ಯ ಸೇವನೆಯ ಮತ್ತೊಂದು ಘಟನೆಯಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ಉಭಯ ಜಿಲ್ಲೆಗಳ ಆಡಳಿತವು ಇದುವರೆಗೆ ಸಾವಿನ ಕಾರಣವನ್ನು ದೃಢಪಡಿಸಿಲ್ಲ. ತೆಲ್ಹುವಾ ಕಳ್ಳಭಟ್ಟಿ ದುರಂತವು ಕಳೆದ ಹತ್ತು ದಿನಗಳಲ್ಲಿ ಉತ್ತರ ಬಿಹಾರದಲ್ಲಿ ಸಂಭವಿಸಿದ ಮೂರನೇ ಘಟನೆಯಾಗಿದೆ.
ಇದನ್ನೂ ಓದಿ:ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು : ಕಂಬನಿ ಮಿಡಿದ ಸೂರ್ಯ
ಘಟನೆಯ ಬಳಿಕ ಬಿಹಾರ ಸಚಿವ ಜನಕ್ ರಾಮ್ ಗೋಪಾಲಗಂಜ್‌ಗೆ ಧಾವಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಮನೆಗಳಿಗೆ ಭೇಟಿ ನೀಡಿದ್ದೇನೆ. ಇದು ಎನ್‌ಡಿಎ ಸರ್ಕಾರದ ಮಾನಹಾನಿ ಮಾಡುವ ಪಿತೂರಿಯಾಗಿರಬಹುದು” ಎಂದಿದ್ದಾರೆ.
ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಮಾತನಾಡಿ, “ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಮುಹಮ್ಮದ್‌ಪುರ ಗ್ರಾಮದಲ್ಲಿ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶವಪರೀಕ್ಷೆ ವರದಿಗಳು ಇನ್ನೂ ಬರದ ಕಾರಣ ಅವರ ಸಾವಿಗೆ ಕಾರಣವನ್ನು ದೃಢೀಕರಿಸಲಾಗುವುದಿಲ್ಲ. ಮೂರು ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.