ಮಾಲಿನ್ಯ ನಿಯಂತ್ರಣಕ್ಕೆ ಮುಂದುವರಿದ ಕಸರತ್ತು
Team Udayavani, Nov 16, 2017, 12:05 PM IST
ನವದೆಹಲಿ: ವಾಯುಮಾಲಿನ್ಯದ ಸುಳಿಗೆ ಸಿಲುಕಿರುವ ರಾಷ್ಟ್ರರಾಜಧಾನಿಯನ್ನು ಪಾರು ಮಾಡುವ ಸಲುವಾಗಿ ಇದೀಗ ಕೇಂದ್ರ ಸರ್ಕಾರ ಸ್ವತ್ಛ ಇಂಧನದ ಮೊರೆ ಹೋಗಿದೆ. ಮುಂದಿನ ವರ್ಷದ ಏಪ್ರಿಲ್‌ನಿಂದಲೇ ಜಾರಿ ಯಾಗುವಂತೆ ದೆಹಲಿಯಲ್ಲಿ ಎಲ್ಲ ವಾಹನಗಳೂ ಬಿಎಸ್- 6 (ಅಲ್ಟ್ರಾ ಕ್ಲೀನ್ ಯೂರೋ-6 ಗ್ರೇಡ್ ಪೆಟ್ರೋಲ್ ಮತ್ತು ಡೀಸೆಲ್) ಇಂಗಾಲ ಹೊರಸೂಸುವಿಕೆ ಗುಣ ಮಟ್ಟ ಹೊಂದಿರಬೇಕಾದ್ದು ಕಡ್ಡಾಯ ಎಂದು ಘೋಷಿಸಿದೆ.
ಈಗಿರುವ ಭಾರತ್ ಸ್ಟೇಜ್ -4 ಗ್ರೇಡ್‌ನಿಂದ ಬಿಎಸ್-6ಗೆ ಏರಲು 2020ರ ಏಪ್ರಿಲ್‌ನ ಗಡುವನ್ನು ಈ ಹಿಂದೆ ಅಂದರೆ 2015ರಲ್ಲೇ ಸರ್ಕಾರ ವಿಧಿಸಿಕೊಂಡಿತ್ತು. ಅದರಂತೆ, ದೇಶಾದ್ಯಂತ ಇನ್ನೆರಡು ವರ್ಷಗಳ ಬಳಿಕ ಬಿಎಸ್-6 ಗ್ರೇಡ್ ಜಾರಿಗೆ ಬರಬೇಕಿತ್ತು. ಆದರೆ, ದೆಹಲಿ ವಾಯುಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು 2 ವರ್ಷ ಮುಂಚಿತವಾಗಿಯೇ ಅಂದರೆ 2018ರ ಏಪ್ರಿಲ್‌ನಿಂದಲೇ ಜಾರಿಯಾಗುವಂತೆ ಬುಧವಾರ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶಿಸಿದೆ.
ಇನ್ನು ದೆಹಲಿ ಸುತ್ತಮುತ್ತಲಿನ ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ, ಫರೀದಾಬಾದ್‌ಗಳಲ್ಲಿ 2019ರ ಏ.1ರಿಂದ ಇದು ಜಾರಿಯಾಗಲಿದೆ. ಈ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಇತರೆ ಭಾಗಗಳಲ್ಲಿ 2020ರ ಗಡುವೇ ಅನ್ವಯವಾಗಲಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಕೇಜ್ರಿ-ಖಟ್ಟರ್ ಮಾತುಕತೆ: ಏತನ್ಮಧ್ಯೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಬುಧವಾರ ಮಾತುಕತೆ ನಡೆಸಿದ್ದು, ಮಾಲಿನ್ಯವನ್ನು ನಿಯಂತ್ರಿಸಲು ಸುಸ್ಥಿರ ಪರಿಶ್ರಮ ಹಾಕುವುದಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ಜತೆಗೆ, 2018ರ ಚಳಿಗಾಲದ ಅವಧಿಯಲ್ಲಿ ರಾಜಧಾನಿಯಲ್ಲಿ ಹೊಗೆ ಆವರಿಸದಂತೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಚರ್ಚಿಸಿದ್ದಾರೆ. 90 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ವಾಯು ಮಾಲಿನ್ಯ ಮತ್ತು ಬೆಳೆ ತ್ಯಾಜ್ಯ ಸುಡುವ ವಿಚಾರ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ.
ಪಾರ್ಕಿಂಗ್ ಶುಲ್ಕ ಪರಿಶೀಲಿಸಿ: ಇದೇ ವೇಳೆ, ಮಾಲಿನ್ಯ ಹಿನ್ನೆಲೆಯಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಿದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಲೆಫ್ಟಿ ನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹೊÉàಟ್ ಪತ್ರ ಬರೆದಿದ್ದಾರೆ. ಮೆಟ್ರೋ ಸ್ಟೇಷನ್‌ನಲ್ಲಿ ವಾಹನ ಪಾರ್ಕ್ ಮಾಡಿ, ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಜನ ಈಗ ಪಾರ್ಕಿಂಗ್ ಶುಲ್ಕ ಹೆಚ್ಚಳದಿಂದಾಗಿ ಸ್ವಂತ ವಾಹನವನ್ನು ಬಳಸುತ್ತಿ ದ್ದಾರೆ. ಹೀಗಾಗಿ, ಈ ಕ್ರಮ ಹೆಚ್ಚಿನ ಪರಿಣಾಮ ಬೀರದಿರುವುದು ಸಾಬೀತಾಗಿದೆ ಎಂದಿದ್ದಾರೆ ಗೆಹೊÉàಟ್.
ದೆಹಲಿಗರಿಗೆ ನಗರ ತ್ಯಜಿಸಲು ಇಷ್ಟವಂತೆ
ವಾಯುಮಾಲಿನ್ಯ ವಿಪರೀತವಾಗಿರುವ ಹಿನ್ನೆಲೆಯಲ್ಲಿ ದೆಹಲಿಗರು ನಗರ ಬಿಟ್ಟು ತೆರಳಲು ಇಷ್ಟಪಡುತ್ತಾರೆ ಎಂಬ ಅಂಶ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಹಿಂದುಸ್ತಾನ್ ಟೈಮ್ಸ್ ನಡೆಸಿದ ಟ್ವಿಟರ್ ಸಮೀಕ್ಷೆಯಲ್ಲಿ ಶೇ.83ರಷ್ಟು ಮಂದಿ ದೆಹಲಿಯನ್ನು ತ್ಯಜಿಸಲು ಬಯಸುತ್ತೇವೆ ಎಂದಿದ್ದಾರೆ. ಒಟ್ಟು 844 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ.11 ಮಂದಿ ದೆಹಲಿ ಬಿಡಲ್ಲ ಎಂದಿದ್ದರೆ, ಶೇ.6ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.
787 ಕೋಟಿಯಲ್ಲಿ ಬಳಸಿದ್ದು 93 ಲಕ್ಷ!
ದೆಹಲಿ ಸರ್ಕಾರವು ಪರಿಸರ ಸೆಸ್ ರೂಪದಲ್ಲಿ ಒಟ್ಟು 787 ಕೋಟಿ ರೂ. ಸಂಗ್ರಹಿಸಿದ್ದರೂ, ಬಳಕೆ ಮಾಡಿದ್ದು ಕೇವಲ 93 ಲಕ್ಷ ರೂ. ಮಾತ್ರ ಎಂಬ ವಿಚಾರ ಬಹಿರಂಗವಾಗಿದೆ. ಆರ್‌ಟಿಐ ಮೂಲಕ ಪಡೆದ ಮಾಹಿತಿಯಲ್ಲಿ ಈ ಅಂಶ ಗೊತ್ತಾಗಿದೆ. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯು ಪರಿಸರ ಸೆಸ್ ಸಂಗ್ರಹಿಸು ತ್ತಿದ್ದು, ಆ ಮೊತ್ತವನ್ನು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಬಳಕೆ ಮಾಡಬೇಕಾಗುತ್ತದೆ. ಆದರೆ, ಈವರೆಗೆ ಸರ್ಕಾರ ಬಳಸಿದ್ದು 93 ಲಕ್ಷ ರೂ. ಮಾತ್ರ. ಈ ಬಗ್ಗೆ ಕೇಳಿದರೆ ಕೇಜ್ರಿವಾಲ್ ಸರ್ಕಾರವು, 786 ಕೋಟಿ ರೂ.ಗಳನ್ನು 500 ಎಲೆಕ್ಟ್ರಿಕ್ ಬಸ್, 2 ಸಾವಿರ ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳ ಖರೀದಿಗೆ ಬಳಸಲಿದ್ದೇವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.