ದರ ಏರಿಕೆಯನ್ನು ನಿಯಂತ್ರಣ: ನುಚ್ಚು ಅಕ್ಕಿ ರಪ್ತು ನಿಷೇಧ
Team Udayavani, Sep 10, 2022, 7:25 AM IST
ನವದೆಹಲಿ: ದರ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಉತ್ಪನ್ನಗಳ ರಫ್ತಿಗೆ ನಿಷೇಧ ಹೇರಿರುವ ಕೇಂದ್ರ ಸರ್ಕಾರ, ಈಗ ನುಚ್ಚು ಅಕ್ಕಿಯ ರಫ್ತನ್ನೂ ನಿರ್ಬಂಧಿಸಿದೆ. ಇದರ ಚಿಲ್ಲರೆ ಮಾರಾಟ ದರ ಏರಿಕೆಯಾಗಿರುವ ಕಾರಣ, ದರ ಹೆಚ್ಚಳಕ್ಕೆ ಕಡಿವಾಣ ಹಾಕಿ, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸಕ್ತ ಮುಂಗಾರು ಋತುವಿನಲ್ಲಿ ದೇಶದ ಅಕ್ಕಿ ಉತ್ಪಾದನೆ 10-12 ದಶಲಕ್ಷ ಟನ್ ಕುಂಠಿತಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ರಫ್ತು ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಗುರುವಾರವಷ್ಟೇ ಬಾಸುಮತಿ ಮತ್ತು ಕುಚಲಕ್ಕಿ ಹೊರತುಪಡಿಸಿ ಇತರೆ ಅಕ್ಕಿಯ ರಫ್ತಿನ ಮೇಲೆ ಶೇ.20ರಷ್ಟು ಶುಲ್ಕವನ್ನೂ ಸರ್ಕಾರ ವಿಧಿಸಿದೆ. ಈಗ ನುಚ್ಚು ಅಕ್ಕಿಯ ರಫ್ತು ನೀತಿಯಲ್ಲಿ ತಿದ್ದುಪಡಿ ತಂದು, “ಮುಕ್ತ’ ಎಂಬುದನ್ನು “ನಿರ್ಬಂಧಿತ’ ಎಂದು ಬದಲಿಸಲಾಗಿದೆ. ಈ ಮೂಲಕ ನುಚ್ಚು ಮೇಲಿನ ರಫ್ತಿಗೆ ನಿಷೇಧ ಹೇರಲಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಚೀನಾದ ಬಳಿಕ ಜಗತ್ತಿನ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವೆಂದರೆ ಭಾರತ. 2021-22ರಲ್ಲಿ ಭಾರತವು 21.2 ದಶಲಕ್ಷ ಟನ್ ಅಕ್ಕಿಯನ್ನು ರಫ್ತು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…