ಸತ್ತ ಅಪ್ಪನೊಂದಿಗೆ ಸಂಭಾಷಣೆಯೇ ಸಾವಿಗೆ ಮೂಲ


Team Udayavani, Jul 4, 2018, 11:49 AM IST

sattha.jpg

ನವದೆಹಲಿ: ಉತ್ತರ ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಲು ಆ ಕುಟುಂಬದ ಸದಸ್ಯನೊಬ್ಬನ ಸತ್ತ ಅಪ್ಪನೊಂದಿಗೆ ನಡೆಸುತ್ತಿದ್ದ ಸಂಭಾಷಣೆಯೇ ಕಾರಣ ಎಂದು ತಿಳಿದುಬಂದಿದೆ. ಆತನ ಹೇಳಿಕೆಯನ್ನು ನಂಬಿ ಇಡೀ ಕುಟುಂಬವೇ “ಸಾಮೂಹಿಕ ಮತಿಭ್ರಮಣೆ’ಗೆ ಒಳಗಾಗಿ ಈ ಕೃತ್ಯವೆಸಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕುಟುಂಬದ ಸದಸ್ಯನಾದ ಲಲಿತ್‌ ಭಾಟಿಯಾ(45) ತಾವು ಎಷ್ಟೋ ವರ್ಷಗಳ ಹಿಂದೆ ಮೃತಪಟ್ಟಿರುವ ಅಪ್ಪನೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ, ಅಪ್ಪ ನನಗೆ ಪ್ರತಿಯೊಂದು ವಿಚಾರದಲ್ಲೂ ಸೂಚನೆ ನೀಡುತ್ತಿದ್ದಾರೆ ಎಂದೇ ನಂಬಿದ್ದ. ಅದನ್ನೇ ಕುಟುಂಬ ಸದಸ್ಯರಿಗೂ ಹೇಳಿದ್ದ. ಹಿಂದೊಮ್ಮೆ ಆದ ಅಪಘಾತದಲ್ಲಿ ತಾನು ಮಾತು ಕಳೆದುಕೊಂಡಿದ್ದೆನಾದರೂ, ನಂತರ ನನಗೆ ಹಠಾತ್ತಾಗಿ ಮಾತು ಬರಲು ಅಪ್ಪನ ಆತ್ಮ ನನ್ನಲ್ಲಿ ಸೇರಿದ್ದೇ ಕಾರಣ ಎಂದೂ ಹೇಳಿಕೊಂಡಿದ್ದ.

ಜತೆಗೆ, ಕುಟುಂಬ, ಉದ್ದಿಮೆ, ಆಹಾರ ಸೇರಿದಂತೆ ಎಲ್ಲ ವಿಷಯಗಳ ಆಯ್ಕೆಯಲ್ಲೂ ನನಗೆ ಮೃತ ತಂದೆ ಆದೇಶ ನೀಡುತ್ತಿದ್ದಾರೆ. ಎಲ್ಲದಕ್ಕೂ “ಮೇಲಿನಿಂದ ಆದೇಶ ಬಂದಿದೆ’ ಎನ್ನುತ್ತಿದ್ದ. ಈತನ ಹೇಳಿಕೆಗಳನ್ನು ಕುಟುಂಬದ ಎಲ್ಲ ಸದಸ್ಯರೂ ನಂಬಿದ್ದರು. ಹೀಗಾಗಿ, ಇದುವೇ ಅವರ ಸಾವಿಗೂ ಪ್ರೇರಣೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ದೇವರು ರಕ್ಷಿಸುತ್ತಾನೆ ಎಂದು ನಂಬಿದ್ದರು: ನೇಣು ಹಾಕಿಕೊಂಡರೂ ನಾವು ಸಾಯುವುದಿಲ್ಲ ಎಂದೇ ಕುಟುಂಬ ಸದಸ್ಯರು ನಂಬಿದ್ದರು ಎಂಬುದು ಅಲ್ಲಿ ಸಿಕ್ಕಿದ ಸಾಕ್ಷ್ಯಾಧಾರಗಳಿಂದ ಬಲವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯಲ್ಲಿ ಸಿಕ್ಕಿರುವ ಒಂದು ಪತ್ರದಲ್ಲಿ, “ಮೊದಲು ಎಲ್ಲರೂ ತಮ್ಮ ತಮ್ಮ ಕೈಗಳನ್ನು ಕಟ್ಟಿಕೊಳ್ಳಬೇಕು.

ಕ್ರಿಯೆ ಮುಗಿದ ಮೇಲೆ ಎಲ್ಲರೂ ಕೈಗಳ ಕಟ್ಟು ಬಿಚ್ಚಲು ಪರಸ್ಪರ ನೆರವಾಗಬೇಕು’ ಎಂದು ಬರೆಯಲಾಗಿದೆ. ಇದನ್ನು ನೋಡಿದರೆ, ಅವರು ಕ್ರಿಯೆ ಮುಗಿದ ನಂತರವೂ ತಾವು ಬದುಕುತ್ತೇವೆ ಎಂದು ನಂಬಿರುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ ಪೊಲೀಸರು. ಜತೆಗೆ, ಮೃತರ ಪೈಕಿ 10 ಮಂದಿ ನೇಣು ಹಾಕಿಕೊಳ್ಳಲು 5 ಸ್ಟೂಲ್‌ಗ‌ಳನ್ನು ಹಂಚಿಕೊಂಡಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಸಾವಿಗೆ ಹಿಂದೆ ಆಲದ ಮರ: ಒಂದು ಪತ್ರದಲ್ಲಿ ಆಲದಮರದ ಬೇರುಗಳನ್ನು ಪೂಜಿಸುವ(ವಟ ತಪಸ್ಯ) ಬಗ್ಗೆಯೂ ಉಲ್ಲೇಖೀಸಲಾಗಿದೆ. ಆಲದ ಮರದ ಬೇರುಗಳು ಹೇಗೆ ನೇತಾಡುತ್ತಿರುತ್ತವೆಯೋ, ಅದೇ ಮಾದರಿಯಲ್ಲಿ ಕುಟುಂಬ ಸದಸ್ಯರು ನೇಣಿನ ಕುಣಿಕೆಯಲ್ಲಿ ನೇತಾಡಿದ್ದಾರೆ. ಇದೂ ಒಂದು ತಪಸ್ಸು ಎಂದು ಅವರು ನಂಬಿದ್ದರು. ಇದೇ ವೇಳೆ, “ಚಿಂತೆ ಮಾಡಬೇಡಿ, ಚಿಂತನೆ ಮಾಡಿ. ಲಲಿತ್‌ನ ಅನಾರೋಗ್ಯದ ಬಗ್ಗೆ ಯೋಚಿಸಬೇಡಿ. ನನ್ನ ಆತ್ಮದ ಪ್ರವೇಶದಿಂದ ಆತನಿಗೆ ಸಮಸ್ಯೆ ಉಂಟಾಗಿರುವುದು’ ಎಂದೂ ಬರೆಯಲಾಗಿದೆ.

ಟಾಪ್ ನ್ಯೂಸ್

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.