‘2008 ಬಾಟ್ಲಾ ಹೌಸ್’ ಎನ್‍ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು
Team Udayavani, Mar 8, 2021, 7:25 PM IST
ನವದೆಹಲಿ : 2008ರ ಬಾಟ್ಲಾ ಹೌಸ್ ಎನ್‍ಕೌಂಟರ್ ಘಟನೆಯ ಆರೋಪಿ ಅರಿಜ್ ಖಾನ್ ಮೇಲಿನ ಆರೋಪ ಸಾಬೀತಾಗಿದೆ. ಇಂದು (ಮಾರ್ಚ್ 8) ವಿಚಾರಣೆ ಪೂರ್ಣಗೊಳಿಸಿದ ಸ್ಥಳೀಯ ನ್ಯಾಯಾಲಯ ಮುಂದಿನ ಸೋಮವಾರ ( ಮಾರ್ಚ್ 15) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
2008 ರಲ್ಲಿ ದೆಹಲಿಯ ಒಕ್ಲಾ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಭಯೋತ್ಪಾದಕರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಪ್ರಾಣ ಕಳೆದುಕೊಂಡಿದ್ದರು, ಮತ್ತೀಬ್ಬರು ಪೊಲೀಸರು ಗಾಯಗೊಂಡಿದ್ದರು.
ಉತ್ತರ ಪ್ರದೇಶದ ಅಜಮ್ಗರ್ ತಲೆ ಮರೆಸಿಕೊಂಡಿದ್ದ ಉಗ್ರ ಅರಿಜ್ ಖಾನ್ ನನ್ನು ದೆಹಲಿಯ ಪೊಲೀಸರು 2018 ರ ಫೆಬ್ರವರಿಯಲ್ಲಿ ಬಂಧಿಸಿ ಕೋರ್ಟ್ ಎದುರು ಹಾಜರು ಪಡಿಸಿದ್ದರು. ಇದೀಗ ವಿಚಾರಣೆ ಮುಕ್ತಾಯಗೊಂಡಿದ್ದು ಅರಿಜ್ ಖಾನ್ ಆರೋಪಿ ಎಂದು ನ್ಯಾಯಾಲಯ ಘೋಷಿಸಿದೆ. ದೆಹಲಿ , ರಾಜಸ್ಥಾನ ಗುಜರಾತ್ ಹಾಗೂ ಉತ್ತರ ಪ್ರದೇಶಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಈತನ ಕೈವಾಡ ಇದೆ ಎಂದು ಆರೋಪ ಇತ್ತು.
ಇನ್ನು ಬಾಟ್ಲಾ ಹೌಸ್ ಘಟನೆಯ ಪ್ರಮುಖ ಉಗ್ರರ ಪೈಕಿ ಶಾಹದ್ ಅಹ್ಮದ್ 2015 ರಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅತಿಫ್ ಅಮಿನ್ ಹಾಗೂ ಮೊಹಮ್ಮದ ಸಾಜಿದ್ ಹೆಸರಿನ ಉಗ್ರರು ಎನ್ ಕೌಂಟರ್ ವೇಳೆ ಹತರಾಗಿದ್ದರು. ಮತ್ತೊಮ್ಮ ಉಗ್ರ ಮೊಹಮ್ಮದ ಶಫಿ ಸ್ಥಳೀಯ ಪೊಲೀಸರಿಂದ ಬಂಧನವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
Scientists: ಕೋಳಿ ಮೊದಲಾ, ಮೊಟ್ಟೆ ಮೊದಲಾ?: ಇಲ್ಲಿದೆ ಉತ್ತರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.