ನಕಲಿ ರೋಗಿ ಕಂಡು ಬೆಚ್ಚಿ ಬಿದ್ದರು
ಸುಮ್ಮನೇ ಸವಾರಿ ಮಾಡುತ್ತಿದ್ದ ಯುವಕರಿಗೆ ಪಾಠ
Team Udayavani, Apr 25, 2020, 6:00 AM IST
ಲಾಕ್‌ಡೌನ್ ಇದ್ದರೂ ಅದನ್ನು ಉಲ್ಲಂಘಿಸಿ, ಮಾಸ್ಕ್ ಧರಿಸದೆ ಒಂದೇ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಯುವಕರಿಗೆ ಪಾಠ ಕಲಿಸುವ ಸಲುವಾಗಿ ಪೊಲೀಸರು, ನಕಲಿ ಕೋವಿಡ್-19 ರೋಗಿ ಇರುವ ಅಂಬ್ಯುಲೆನ್ಸ್ ಹತ್ತಿಸಿ, ಬುದ್ಧಿ ಕಲಿಸಿದ ಘಟನೆ ತಮಿಳುನಾಡಿನ ತಿರುಪ್ಪೂರ್‌ನಲ್ಲಿ ನಡೆದಿದೆ.
ಸದ್ಯಕ್ಕೆ ಈ ವಿಡಿಯೊ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೊಲೀಸರು ಆ ಯುವಕರಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೋವಿಡ್-19 ವೈರಸ್ ಹರಡುವುದನ್ನು ತಪ್ಪಿಸಲು ದೇಶವ್ಯಾಪ್ತಿ ಲಾಕ್‌ಡೌನ್ ಘೋಷಿಸಿದ್ದರೂ, ಅದನ್ನು ಲೆಕ್ಕಿಸದೆ, ಮುಖಕ್ಕೆ ಮಾಸ್ಕ್ ಕೂಡ ಧರಿಸದೆ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದರು.
ಅವರಿಗೆ ಪಾಠ ಕಲಿಸಲು ಅಂಬ್ಯುಲೆನ್ಸ್ ಹತ್ತಿ ಕೂರುವಂತೆ ಸೂಚಿಸಿದ್ದಾರೆ. ಗಾಬರಿಯಲ್ಲಿದ್ದ ಆ ಯುವಕರು ಅಂಬ್ಯುಲೆನ್ಸ್ ಪ್ರವೇಶಿಸಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಒಳಗೆ ಹೋಗುತ್ತಿದ್ದಂತೆಯೇ, ಆ ಮೂವರು ಯುವಕರಿಗೆ ಪೊಲೀಸರು ಒಳಗೆ ಕೋವಿಡ್-19 ವೈರಸ್ ತಗುಲಿರುವ ರೋಗಿ ಇದ್ದಾರೆ ಎಂದು ಹೇಳಿದ್ದಾರೆ.
ತಕ್ಷಣವೇ, ಹೆದರಿದ ಆ ಯುವಕರು, ಅಂಬ್ಯುಲೆನ್ಸ್ ನಿಂದ ಹೊರ ಜಿಗಿಯಲು ಪ್ರಯತ್ನಿಸಿದ್ದಾರೆ. ಒಳಗಿದ್ದ ನಕಲಿ ಕೋವಿಡ್-19 ವೈರಸ್ ರೋಗಿ ಕೂಡ ಆ ಯುವಕರ ಬಳಿ ಕೆಮ್ಮುತ್ತಲೇ ಬರಲು ಯತ್ನಿಸುತ್ತಾರೆ. ಆಗ ಕಿಟಕಿಯಿಂದ ಹೊರ ಹಾರಲು ಯತ್ನಿಸುವ ಯುವಕರನ್ನು ಸ್ವಲ್ಪ ಸಮಯ ಅಲ್ಲೇ ಇರುವಂತೆ ಹೇಳುತ್ತಾರೆ. ಕೊನೆಗೆ ಆ ಯುವಕರು ಅಳುವುದನ್ನು ನೋಡಿದ ಬಳಿಕ ವಾಹನದಿಂದ ಕೆಳಗಿಳಿಸುತ್ತಾರೆ. ಇರುವ ಸತ್ಯ ಸಂಗತಿ ವಿವರಿಸಿ, ವಿನಾಕಾರಣ ಹೊರಗೆ ಸುತ್ತಾಡುವುದುನ್ನು ನಿಲ್ಲಿಸಬೇಕು ಎಂದು ಮನವಿ ಮಾಡುವ ಪೊಲೀಸರ ವಿಡಿಯೋ ಈಗ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.