ರೇಪ್ ಸಂತ್ರಸ್ತೆಯರ ಗರ್ಭಪಾತ: ಬಾಂಬೆ ಹೈಕೋರ್ಟ್ ಹೇಳಿದ್ದೇನು?
Team Udayavani, Jul 14, 2018, 6:00 PM IST
ಮುಂಬಯಿ : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭವತಿಯಾಗುವ ಹುಡುಗಿಯರಿಗೆ ಗರ್ಭಧಾರಣೆಯಾದ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳುವ ಕಾನೂನು ಸಮ್ಮತ ಅವಕಾಶ ಇರುವುದನ್ನು ಪೊಲೀಸರು ರೇಪ್ ಸಂತ್ರಸ್ತೆಯರಿಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಅಂತೆಯೇ ಜಸ್ಟಿಸ್ ನರೇಶ್ ಪಾಟೀಲ್ ಮತ್ತು ಜಸ್ಟಿಸ್ ಜಿ ಎಸ್ ಕುಲಕರ್ಣಿ ಅವರನ್ನು ಒಳಗೊಂಡ ಪೀಠವು ರೇಪ್ ಸಂತ್ರಸ್ತೆಯಾಗಿದ್ದು 21 ವಾರಗಳ ಗರ್ಭಸ್ಥೆಯಾಗಿರುವ 16ರ ಹರೆಯದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡಿತು.
ಕೆಇಎಂ ಆಸ್ಪತ್ರೆಯ ವೈದ್ಯರು 20 ವಾರ ಮೀರುವ ಗರ್ಭಪಾತಕ್ಕೆ ಕಾನೂನಿನ ಅನುಮತಿ ಇಲ್ಲವೆಂದು ಬಾಲಕಿಗೆ ಹೇಳಿದ್ದರು. ಆದರೆ ಇದಕ್ಕೆ ಮೊದಲು ಬಾಲಕಿಯು ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುವುದರಲ್ಲೇ ಸಮಯ ಕಳೆದು ಹೋಗಿತ್ತು.
ಇದನ್ನು ಗಮನಿಸಿದ ಹೈಕೋರ್ಟ್ ಪೀಠ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡಿ, ರೇಪ್ ಸಂತ್ರಸ್ತೆಯರ ಗರ್ಭಪಾತದ ವಿಷಯದಲ್ಲಿ ಪೊಲೀಸರಿಗಿರುವ ಕಾನೂನು ಬದ್ಧತೆಯನ್ನು ಕಡ್ಡಾಯಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.