ಕೊರೊನಾ ವಿರುದ್ಧ ಸಿಡಿದ ಸ್ತ್ರೀಶಕ್ತಿ
ಚೀನ ಆಸ್ಪತ್ರೆಗಳ ವೈದ್ಯೆಯರು, ನರ್ಸ್‌ಗಳ ಕಣ್ಣೀರು
Team Udayavani, Mar 8, 2020, 6:30 AM IST
ಬೀಜಿಂಗ್/ಹೊಸದಿಲ್ಲಿ: “ಋತುಚಕ್ರ ಉಂಟಾದರೆ ಧರಿಸಿಕೊಳ್ಳಲು ಸ್ಯಾನಿಟರಿ ಪ್ಯಾಡ್ ಸಿಗುತ್ತಿಲ್ಲ, ನೈರ್ಮಲ್ಯ ಕಾಪಾಡಲು ಸಾಧ್ಯವಾಗದ್ದಕ್ಕೆ ತಲೆಬೋಳಿಸಿಕೊಂಡಿದ್ದೇವೆ, ಸುರಕ್ಷಾ ಉಡುಗೆಗೆ ಹಾನಿಯಾದೀತು ಎಂಬ ಭಯದಿಂದ ಶೌಚಾಲಯಕ್ಕೂ ಹೋಗುತ್ತಿಲ್ಲ…’
ಇಡೀ ಜಗತ್ತೇ ವಿಶ್ವ ಮಹಿಳಾ ದಿನದ ಸಂಭ್ರಮದಲ್ಲಿದ್ದರೆ ಕೊರೊನಾ ವೈರಸ್ ಎಂಬ ಮಹಾಮಾರಿಯ ಹೊಡೆತ ದಿಂದ ಕಂಗಾಲಾಗಿರುವ ಚೀನದಲ್ಲಿ ಮಹಿಳಾ ವೈದ್ಯರು ಮತ್ತು ನರ್ಸ್‌ಗಳು ಪಡುತ್ತಿರುವ ಕಷ್ಟಗಳ ಸರಮಾಲೆಯಿದು.
ಕೊರೊನಾಗೆ ಕಡಿವಾಣ ಹಾಕುವ ಭರದಲ್ಲಿ ತಮ್ಮ ಬದುಕನ್ನೇ ನರಕಕ್ಕೆ ತಳ್ಳಿರುವ ಚೀನ ಸರಕಾರಕ್ಕೆ ಇಲ್ಲಿನ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಆಸ್ಪತ್ರೆಗಳಲ್ಲೇ ದಿನದ 24 ಗಂಟೆಗಳನ್ನೂ ಕಳೆಯಬೇಕಾಗಿರುವುದರಿಂದ, ವೈದ್ಯೆಯರು, ನರ್ಸ್‌ಗಳಿಗೆ ಹೊರಹೋಗಲು ಅವಕಾ ಶವೇ ಸಿಗುತ್ತಿಲ್ಲ.
ಸ್ಯಾನಿಟರಿ ಪ್ಯಾಡ್‌ಗಳಿಗೆ ತೀವ್ರ ಅಭಾವ ವಿರುವ ಕಾರಣ, ಋತುಚಕ್ರದ ವೇಳೆ ಈ ಹೆಣ್ಣುಮಕ್ಕಳು ಪಡುತ್ತಿರುವ ಪಡಿಪಾಟಲು ಹೇಳತೀರದು. ನ್ಯಾಪಿRನ್‌ಗಳ ಕೊರತೆಯಿಂದಾಗಿ, ಇವರಿಗೆ ಋತುಚಕ್ರ ಮುಂದೂಡು ವಂಥ ಔಷಧಗಳನ್ನು ಒತ್ತಾಯಪೂರ್ವಕವಾಗಿ ನೀಡಲಾ ಗು ತ್ತಿದೆ. ಇನ್ನು ಕೆಲವರಿಗೆ ಗರ್ಭ ನಿರೋಧಕ ಔಷಧಗಳನ್ನು ನೀಡುವ ಮೂಲಕ ಋತುಚಕ್ರ ವಿಳಂಬವಾಗುವಂತೆ ಮಾಡಲಾಗುತ್ತಿದೆ. ಜತೆಗೆ, ವೈರಸ್ ಹರಡದಂತೆ ಆಸ್ಪತ್ರೆಯ ಎಲ್ಲ ಸಿಬಂದಿಗೂ ರಕ್ಷಾಕವಚದಂಥ “ಐಸೋಲೇಷನ್ ಸೂಟ್’ ಗಳನ್ನು ನೀಡಲಾಗಿದೆ. ಅವುಗಳನ್ನು ಇಡೀ ದಿನ ಧರಿಸಿಕೊಂಡೇ ಇರಬೇಕಾದ ಸ್ಥಿತಿಯಿದೆ.
“ಸುರಕ್ಷಾ ಉಡುಪುಗಳಿಗೆ ಹಾನಿಯಾಗದಂತೆ ರಕ್ಷಿಸಿ ಕೊಳ್ಳ ಬೇಕಾದ ಜವಾಬ್ದಾರಿಯೂ ನಮ್ಮ ಮೇಲಿರುವ ಕಾರಣ, ನಾವು ಶೌಚಾಲಯಗಳಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದೇವೆ. ಹೆಚ್ಚು ನೀರು, ದ್ರವ ಪದಾರ್ಥಗಳನ್ನು ಸೇವಿಸದೇ ಇರುವ ಮೂಲಕ ಟಾಯ್ಲೆಟ್‌ಗೆ ಹೋಗುವ ಅಗತ್ಯತೆಯನ್ನು ತಗ್ಗಿಸುತ್ತಿದ್ದೇವೆ’ ಎಂದು ಅಲ್ಲಿನ ದಾದಿಯರು ಹೇಳಿಕೊಂಡಿದ್ದಾರೆ.
ನೈರ್ಮಲ್ಯದ ಸಮಸ್ಯೆಯೂ ಕಾಡುತ್ತಿದ್ದು, ಸ್ನಾನ ಮಾಡಲು, ತಲೆಗೂದಲನ್ನು ಬಾಚಿಕೊಳ್ಳಲು ಸಮಯವಿ ರದ ಕಾರಣ, ಕೆಲವರು ತಲೆಗಳನ್ನು ಬೋಳಿಸಿಕೊಳ್ಳುತ್ತಿ ದ್ದಾರೆ. ಆರಂಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳೂ ಇರಲಿಲ್ಲ, ಅದನ್ನು ಮುಂದಕ್ಕೆ ಹಾಕುವ ಔಷಧಗಳೂ ಇರಲಿಲ್ಲ. ಬೆರಳೆಣಿಕೆಯ ಮಂದಿ ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ, ಕೆಲವು ಸಂಘಸಂಸ್ಥೆಗಳು ಮುಂದೆ ಬಂದು ಮಹಿಳಾ ನರ್ಸ್‌ಗಳು ಹಾಗೂ ವೈದ್ಯರ ಮಾಸಿಕ ಋತುಚಕ್ರವನ್ನು ಮುಂದಕ್ಕೆ ಹಾಕಲು 200 ಬಾಟಲಿಗಳಷ್ಟು ಮಾತ್ರೆಗಳನ್ನು ದೇಣಿಗೆ ರೂಪದಲ್ಲಿ ನೀಡಿವೆ.
ಇರಾನ್ ಸಂಸದೆ ಸಾವು: ಸೋಂಕು ತಗುಲಿದ್ದ ಇರಾನ್‌ನ ಸಂಸದೆ ಫತೇಮೇಹ್ ರಹ್‌ಬರ್(55) ಶನಿವಾರ ಕೊನೆಯುಸಿರೆಳೆದಿದ್ದಾರೆ. ಇವರು ಇತ್ತೀಚೆಗಷ್ಟೇ ಟೆಹ್ರಾ ನ್ ನಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ಈವರೆಗೆ ಇರಾನ್‌ನ 7 ಮಂದಿ ರಾಜಕಾರಣಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿ ಶನಿವಾರ 21 ಮಂದಿ ಮೃತಪಟ್ಟು, ಒಟ್ಟು ಸಾವಿನ ಸಂಖ್ಯೆ 145ಕ್ಕೇರಿಕೆ ಯಾಗಿದೆ. 5,823 ಪ್ರಕರಣಗಳು ದೃಢಪಟ್ಟಿದ್ದರೆ, 16 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಶಂಕೆಯಿಂದ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.
ರಜೆ ಘೋಷಣೆ: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 4 ಜಿಲ್ಲೆಗಳಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಿಗೂ ಶನಿವಾರದಿಂದ ರಜೆ ಘೋಷಿಸಲಾಗಿದೆ. ಶ್ರೀನಗರ, ಬಂಡಿಪೋರಾ, ಬದ್ಗಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎಲ್ಲ ಶಾಲೆಗಳೂ ಮುಂದಿನ ಆದೇಶದವರೆಗೆ ಮುಚ್ಚಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಮಾ.12ರಿಂದ 31ರ ಅವಧಿಯಲ್ಲಿ ಕಾಯ್ದಿರಿಸಲಾಗುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಅವಧಿ ಬದಲಾವಣೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನ ಸಂಚಾರ ಸ್ಥಗಿತ: ಕುವೈಟ್ ಸರಕಾರವು ಶನಿವಾರ ಭಾರತ ಸೇರಿದಂತೆ 6 ದೇಶಗಳಿಂದ ಬರುವ ಹಾಗೂ ಆ ದೇಶಗಳಿಗೆ ಹೋಗುವ ಎಲ್ಲ ವಿಮಾನಗಳ ಸಂಚಾರವನ್ನೂ ರದ್ದು ಮಾಡಿದೆ.
ಕಾಬಾ ಸುತ್ತಲಿನ ಪ್ರದೇಶಕ್ಕೆ ಪ್ರವೇಶಾವಕಾಶ
ಮೆಕ್ಕಾ ಮಸೀದಿಯ ಪವಿತ್ರ ಕಾಬಾ ಸುತ್ತಲಿನ ಪ್ರದೇಶಕ್ಕೆ ಪ್ರವೇಶಾವಕಾಶವನ್ನು ಸೌದಿ ಅರೇಬಿಯಾ ಶನಿವಾರ ಕಲ್ಪಿಸಿದೆ. ಇತ್ತೀಚೆಗಷ್ಟೇ ಮೆಕ್ಕಾ-ಮದೀನಾ ಹಾಗೂ ಉಮ್ರಾ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಸೌದಿಯ ಭಾವಿ ದೊರೆ ಸಲ್ಮಾನ್‌ರ ಆದೇಶದಂತೆ ಕಾಬಾ ಸುತ್ತಲಿನ ಪ್ರದೇಶಕ್ಕೆ ತೆರಳಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಮ್ರಾ ಪೂರ್ಣಗೊಳಿಸಲು ಯಾತ್ರಿಗಳು 7 ಬಾರಿ ಸಂಚರಿಸುವಂಥ ಎರಡು ಪರ್ವತಗಳ ನಡುವಿನ ಪ್ರದೇಶವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇರಿ 15 ಮಂದಿಗೆ ಸೋಂಕು
ಯುಎಇಯಲ್ಲಿ ಭಾರತೀಯ ವ್ಯಕ್ತಿ ಸೇರಿದಂತೆ ಒಟ್ಟು 15 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಶನಿವಾರ 45ಕ್ಕೇರಿದೆ. ಇನ್ನು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನಿಂತಿರುವ ಕ್ರೂಸ್ ನೌಕೆಯಲ್ಲಿ 21 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಅಮೆರಿಕ ಸರಕಾರ ತಿಳಿಸಿದೆ. ಹವಾಯಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಈ ನೌಕೆಯಲ್ಲಿ ಒಟ್ಟು 3,500 ಮಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.