ಚೀನ: ಕೊರೊನಾ ಸಾವಿನ ಸಂಖ್ಯೆ 2,592ಕ್ಕೆ ಏರಿಕೆ
ಫೆ. 26ರಂದು ಭಾರತೀಯರನ್ನು ಕರೆತರಲು ವಿಮಾನ
Team Udayavani, Feb 25, 2020, 1:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಿಲ್ಲಿ: ಮಾರಾಣಾಂತಿಕ ಕೊರೊನಾ ವೈರಸ್ ಭೀತಿಯಿಂದ ಅಲ್ಲಿರುವ ಭಾರತೀಯರನ್ನು ಕರೆತರುವ ಸಾಧ್ಯತೆಯಿದೆ. ವಿದೇಶಾಂಗ ಸಚಿವಾಲಯದ ಮಾಹಿತಿಯಂತೆ, ವುಹಾನ್‌ಗೆ ವಾಯುಪಡೆಯ ವಿಮಾನವನ್ನು ಫೆಬ್ರವರಿ 26ಕ್ಕೆ ಕಳುಹಿಸುವ ಸಾಧ್ಯತೆ ಇದ್ದು, ಫೆಬ್ರವರಿ 27ರಂದು ಅವರು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಫೆಬ್ರವರಿ 20ರಂದು ವುಹಾನ್‌ಗೆ ತೆರಳಬೇಕಿದ್ದ ಸಿ -17 ಮಿಲಿಟರಿ ಸಾರಿಗೆ ವಿಮಾನಕ್ಕೆ ಅನುಮತಿ ನೀಡಲಾಗಿರಲಿಲ್ಲ. ಈಗ ಭಾರತೀಯ ಮಿಲಿಟರಿ ಸಾರಿಗೆ ವಿಮಾನಕ್ಕೆ ಅನುಮತಿ ನೀಡಿದೆ. ಫೆಬ್ರವರಿ 16 ಮತ್ತು 20ರ ನಡುವೆ ಜಪಾನ್, ಉಕ್ರೇನ್ ಮತ್ತು ಫ್ರಾನ್ಸ್ ವಿಮಾನಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಭಾರತದ ಕೋರಿಕೆಯನ್ನು ಅಂಗೀಕರಿಸಲಾಗಿರಲಿಲ್ಲ. ಈ ವಿಮಾನವು ಚೀನಕ್ಕೆ ತೆರಳುವಾಗ ಹೆಚ್ಚಿನ ಪ್ರಮಾಣದ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲಿದ್ದು, ಬರುವಾಗ ಭಾರತೀಯರನ್ನು ಕರೆ ತರಳಿದೆ.
ಚೀನಾ, ಹಾಂಕಾಂಗ್, ಥೈಲ್ಯಾಂಡ್, ದಕ್ಷಿಣ ಕೊರಿಯಾ, ಸಿಂಗಾಪುರ್, ಜಪಾನ್, ಕಠ್ಮಂಡು, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಭಾರತಕ್ಕೆ ಬರುವ ವಿಮಾನಗಳ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ.
ಚೀನದಲ್ಲಿ ಕೊರೋನಾ ವೈರಸ್ ಸಾವು ಮುಂದುವರೆದಿದೆ. ಕೇವಲ 24 ಗಂಟೆಗಳಲ್ಲಿ 150 ಮಂದಿ ಸೋಂಕು ಪೀಡಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2,592ಕ್ಕೆ ಏರಿಕೆಯಾಗಿದೆ. ಫೆಬ್ರವರಿ 23ರಂದು ಚೀನಾದಾದ್ಯಂತ ಸುಮಾರು 150 ಮಂದಿ ಕೊರೋನಾ ವೈರಸ್ ಸೋಂಕು ಪೀಡಿತರು ಸಾವಪನ್ನಪ್ಪಿದ್ದಾರೆ. ರವಿವಾರ 409 ಮಂದಿಯಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.