ಪುಣೆ ದಂಪತಿಗಳಲ್ಲಿ ಕೊರೊನಾ ಪ್ರಕರಣ: ಇವರ ಜೊತೆಗಿದ್ದ 40ಜನರ ಮಾಹಿತಿ ಪಡೆಯಲು 5 ತಂಡಗಳ ರಚನೆ
ಪುಣೆಯ ದಂಪತಿ ಪ್ರಯಾಣಿಸಿದ್ದ ಓಲಾ ಕ್ಯಾಬ್ ನ ಡ್ರೈವರ್ ಗೂ ಕೊರೊನಾ ಸೋಂಕು ಧೃಢಪಟ್ಟಿದೆ.
Team Udayavani, Mar 11, 2020, 8:50 AM IST
ಪುಣೆ: ಸೋಮವಾರವಷ್ಟೇ ಪುಣೆಯ ಇಬ್ಬರು ದಂಪತಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದೀಗ ಈ ದಂಪತಿಯ ಜೊತೆ ದುಬೈನಿಂದ ಬಂದಿದ್ದ 40 ಜನರ ಮಾಹಿತಿ ಪಡೆಯಲು ಸ್ಥಳೀಯ ಆಡಳಿತ ಐದು ತಂಡಗಳನ್ನು ರಚಿಸಿದೆ ಎಂದು ವರದಿಯಾಗಿದೆ.
ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ ಚಿಂಚ್ ವಾಡ್ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ 5 ತಂಡಗಳ ರಚಿಸಲಾಗಿದೆ ಎಂದು ಪುಣೆ ವಿಭಾಗಿಯ ಆಯುಕ್ತ ದೀಪಕ್ ಮೈಶೇಕರ್ ತಿಳಿಸಿದ್ದಾರೆ. ಮಾತ್ರವಲ್ಲದೆ ಪುಣೆ ದಂಪತಿಯೊಂದಿಗೆ ಆಗಮಿಸಿದ್ದ 40 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 40 ಜನರ ವೈದ್ಯಕೀಯ ಪರೀಕ್ಷೆಯ ಮಾಹಿತಿ ನೀಡುವಂತೆ ಮಹಾರಾಷ್ಟ್ರದ ಆಯಾ ಜಿಲ್ಲೆಗೆ ಮಾಹಿತಿ ರವಾನಿಸಲಾಗಿದೆ. ಅದರ ಜೊತೆಗೆ ಈ 40 ಜನರು ಗುರುತು ಮತ್ತು ಕೆಲಸದ ಸ್ಥಳದ ಗೌಪ್ಯತೆ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ದುಬೈನಿಂದ ಆಗಮಿಸಿದ್ದ ಪುಣೆಯ ದಂಪತಿ ಓಲಾ ಕ್ಯಾಬ್ ಒಂದರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದು ಇದೀಗ ಓಲಾ ಕ್ಯಾಬ್ ಡ್ರೈವರ್ ಮತ್ತು ಅವರ ಸಂಬಂಧಿಕರೊಬ್ಬರಿಗೂ ಕೂಡ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಅದೇ ದಿನ ಆ ಕ್ಯಾಬ್ ನಲ್ಲಿ ಹಲವಾರು ಜನರು ಪ್ರಯಾಣಿಸಿದ್ದು ಅವರನ್ನು ಪತ್ತೆ ಹಚ್ಚುವ ಕೆಲಸಗಳಾಗುತ್ತಿದೆ ಎಂದು ದೀಪಕ್ ಮೈಶೇಕರ್ ಮಾಹಿತಿ ನೀಡಿದ್ದಾರೆ.
ಪುಣೆಯ ದಂಪತಿ ಸೇರಿದಂತೆ ಐವರನ್ನು ನಾಯ್ಡು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಪರಿಸ್ಥಿತಿ ಸುಸ್ಥಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ
Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ
Telgi stamp paper scam: ಕರ್ನಾಟಕದ ಓರ್ವ ಸೇರಿ 5 ಮಂದಿಗೆ ಸಜೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.