ಭಾರತದಲ್ಲಿ ಭ್ರಷ್ಟಾಚಾರ ಇಳಿಮುಖ
Team Udayavani, Jan 30, 2019, 9:35 AM IST
ನವದೆಹಲಿ: ಭಾರತದಲ್ಲಿ ಭ್ರಷ್ಟಾಚಾರ ಒಂದಂಕಿಯಷ್ಟು ಕಡಿಮೆಯಾಗಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆಯ ಭ್ರಷ್ಟಾಚಾರ ದೃಷ್ಟಿಕೋನ ಸೂಚ್ಯಂಕ 2018 ರಲ್ಲಿ ತಿಳಿದು ಬಂದಿದೆ.
ಭಾರತದ ಸ್ಕೋರ್ 2017ರಲ್ಲಿ 40 ಇತ್ತು. 2018ರಲ್ಲಿ ಇದು 41ಕ್ಕೆ ಏರಿಕೆ ಕಂಡಿದೆ. ಇದೇ ವೇಳೆ 180 ದೇಶಗಳ ಸೂಚ್ಯಂಕದಲ್ಲಿ 2017ರಲ್ಲಿ 81 ರಸ್ಥಾನದಲ್ಲಿದ್ದ ಭಾರತ 2018ರಲ್ಲಿ 78ಕ್ಕೆ ಏರಿದೆ. ಮಲೇಷ್ಯಾ (47), ಮಾಲ್ಡೀವ್ಸ್ (31) ಮತ್ತು ಪಾಕಿಸ್ತಾನ (33) ಹಾಗೂ ಭಾರತವು ಈ ಪಟ್ಟಿಯಲ್ಲಿ ಮಹತ್ವದ್ದು ಎಂದು ಗುರುತಿಸಿರುವ ಸಂಸ್ಥೆಯು, ಈ ಎಲ್ಲ ದೇಶಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಜನರ ನಿಲುವುಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಮತದಾರರು ಭ್ರಷ್ಟಾಚಾರ ವಿರೋಧಿ ಹೊಸ ಸರ್ಕಾರಕ್ಕೆ ಮತ ಹಾಕಿದ್ದಾರೆ ಎಂದು ಸಂಸ್ಥೆಯ ವರದಿ ಹೇಳಿದೆ.
ಸಾರ್ವತ್ರಿಕ ಚುನಾವಣೆಗೆ ಕಾಲಿಡುತ್ತಿರುವ ಹೊತ್ತಿನಲ್ಲಿ ಭ್ರಷ್ಟಾ ಚಾರ ಸ್ಕೋರ್ನಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡಿಲ್ಲ. 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿಸಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತಾದರೂ, ಅದರಿಂದ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಸಂಸ್ಥೆ ತಿಳಿಸಿದೆ. ಇನ್ನೊಂದೆಡೆ ಅಮೆರಿಕ ಪ್ರಮುಖ 20 ದೇಶಗಳ ಪಟ್ಟಿಯಿಂದ ಕುಸಿದಿದ್ದು, ಎಚ್ಚರಿಕೆ ಗಂಟೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.