ಹೈದರಾಬಾದ್: ಮಗು ಅಪಹರಿಸಿದ ದಂಪತಿ ಸೆರೆ, ಮಗು ಪಾರು
Team Udayavani, Oct 4, 2017, 4:48 PM IST
ಹೈದರಾಬಾದ್ : ಐದು ತಿಂಗಳ ಹೆಣ್ಣು ಮಗವನ್ನು ಅಪಹರಿಸಿದ ಆರೋಪದ ಮೇಲೆ ನಗರ ಪೊಲೀಸರು ರಾಜೇಂದ್ರನಗರದ ದಂಪತಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಪ್ರಕಾರ ಕಾರ್ಯಪ್ರವೃತ್ತವಾದ ಪೊಲೀಸರ ತಂಡದವರು ಹಂಸಾ ಅಲಿಯಾಸ್ ಉಮಾ (35) ಮತ್ತು ಆಕೆಯ ಪತಿ, ಕ್ಯಾಬ್ ಚಾಲಕ, ಜಿ. ಚಂದ್ರಕಾಂತ್ ಎಂಬವರನ್ನು ಬಂಧಿಸಿ ಅಪಹರಣಕ್ಕೆ ಈಡಾದ ಮಗವನ್ನು ಪಾರುಗೊಳಿಸಿದರು ಎಂದು ಶಂಶಾಬಾದ್ ವಲಯದ ಪೊಲೀಸ್ ಡೆಪ್ಯುಟಿ ಕಮಿಷನರ್ ಪಿ ವಿ ಪದ್ಮಜಾ ಅವರು ತಿಳಿಸಿದರು.
ಮಗುವನ್ನು ಆರೋಪಿ ದಂಪತಿ ಕಳೆದ ವಾರ ಅಪಹರಿಸಿತ್ತು ಮತ್ತು ಹಣಕ್ಕಾಗಿ ಅದನ್ನು ಮಾರಾಟ ಮಾಡುವ ಉದ್ದೇಶ ಹೊಂದಿತ್ತು ಎಂದು ಪದ್ಮಜಾ ತಿಳಿಸಿದ್ದಾರೆ.
17 ವರ್ಷಗಳ ಹಿಂದೆ ಹಂಸಾ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳನ್ನು ಪಡೆದಿದ್ದಳು. ಆದರೆ ಅನಂತರದಲ್ಲಿ ಪತಿಯು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದ.
ಆರು ವರ್ಷಗಳ ಹಿಂದೆ ಹಂಸಾ ಗೆ ಕ್ಯಾಬ್ ಚಾಲಕ ಚಂದ್ರಕಾಂತ್ ನ ಪರಿಚಯವಾಗಿ ಆತನನ್ನು ಮದುವೆಯಾಗಿದ್ದಳು. ಆದರೆ ಇವರಿಗೆ ಮಗು ಆಗಿರಲಿಲ್ಲ. ಅದಕ್ಕಾಗಿ ಇವರು ಸಾಕಲು ಇಲ್ಲವೇ ಮಾರಲು ಮಗುವನ್ನು ಅಪಹರಿಸಲು ನಿರ್ಧರಿಸಿದ್ದರು ಎಂದು ಡಿಸಿಪಿ ಹೇಳಿದರು.
ಕಳೆದ ಸೆ.29ರಂದು ಹಂಸಾ ತನಗೆ ಪರಿಚಯವಿರುವ ಹೆಂಗಸೊಬ್ಬಳ ಮನೆಗೆ ತೆರಳಿ “ಮನೆಯಿಂದ ಸ್ವಲ್ಪ ದೂರದಲ್ಲಿ ಕಾಯುತ್ತಿರುವ ನರ್ಸ್‌ಗೆ ಮಗುವನ್ನು ತೋರಿಸಲಿಕ್ಕಿದೆ’ ಎಂಬ ಕಾರಣ ಹೇಳಿ ಮಗವನ್ನು ಹೊರತರಲು ಸೂಚಿಸಿದ್ದಳು. ಆ ಪ್ರಕಾರ ಮಗುವಿನ ತಾಯಿ, ಹಂಸಾ ಳ ಕೈಗೆ ಮಗವನ್ನು ಒಪ್ಪಿಸಿ, ಆಕೆಯೊಂದಿಗೆ ತನ್ನ ಸಹೋದರಿಯನ್ನು ಕಳುಹಿಸಿಕೊಟ್ಟಿದ್ದಳು. ಬಳಿಕ ಹಂಸಾ ಮಗುವಿನ ಚಿಕ್ಕಮ್ಮಳ ಗಮನವನ್ನು ಬೇರೆಡೆಗೆ ಹರಿಸಿ ಮಗವನ್ನು ಅಪಹರಿಸಿದ್ದಳು.
ಮಗುವಿನ ತಾಯಿ ಕೊಟ್ಟ ದೂರನ್ನು ಅನುಸರಿಸಿ ಪೊಲೀಸರು ಇಂದು ಬುಧವಾರ ಆರೋಪಿ ಹಂಸಾ ಮತ್ತು ಆಕೆಯ ಪತಿ ಚಂದ್ರಕಾಂತ್‌ನನ್ನು ಬಂಧಿಸಿ ಮಗುವನ್ನು ಪಾರುಗೊಳಿಸಿ ಅದನ್ನು ಅದರ ತಾಯಿಗೆ ಒಪ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Hike Price: ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಚಾಲಿ ಅಡಿಕೆ ಧಾರಣೆ ಏರಿಕೆ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.