![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 24, 2022, 9:00 AM IST
ಹೊಸದಿಲ್ಲಿ: ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವವರು ಆಕೆಗೆಕಡ್ಡಾಯವಾಗಿ 3 ವರ್ಷಗಳ ಆರೋಗ್ಯ ವಿಮೆ ಮಾಡಿಸಲೇಬೇಕು. ಇತ್ತೀಚೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾ ಲಯ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ.
ಬಾಡಿಗೆ ತಾಯಿ ಗರ್ಭಿಣಿಯಾದಾಗ ಮತ್ತು ಹೆರಿಗೆಯ ಬಳಿಕ ಯಾವುದೇ ಪ್ರತಿಕೂಲಗಳನ್ನು ಎದುರಿಸಲು ಬೇಕಾಗುವ ವಿತ್ತೀಯ ನೆರವು ನೀಡುವಷ್ಟು ವಿಮೆ ಇರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಅದಕ್ಕಾಗಿ ಮಾನ್ಯತೆ ಪಡೆದಿರುವ ಆರೋಗ್ಯ ವಿಮೆ ಕಂಪೆನಿಯಿಂದ ವಿಮೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ಮಕ್ಕಳನ್ನು ಪಡೆಯಲು ಇಚ್ಛಿಸುವ ದಂಪತಿ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಬೇಕು. ಬಾಡಿಗೆ ತಾಯಿಗೆ ಒಂದು ಬಾರಿ ಒಂದು ಭ್ರೂಣವನ್ನು ಮಾತ್ರ ಪ್ರಸೂತಿ ರೋಗ ತಜ್ಞರು ವರ್ಗಾಯಿಸಬಹುದು. ವಿಶೇಷ ಪ್ರಕರಣಗಳಲ್ಲಿ ಮಾತ್ರ 3 ಭ್ರೂಣಗಳವರೆಗೆ ವರ್ಗಾಯಿಸಬಹುದು ಎಂದು ಸೂಚಿಸಲಾಗಿದೆ.
ಜೂ. 21ರಂದು ಹೊರಡಿಸ ಲಾದ ಸುತ್ತೋಲೆ ಪ್ರಕಾರ ಬಾಡಿಗೆ ತಾಯಿ ಮೂಲಕ 3 ಬಾರಿ ಮಾತ್ರ ಮಕ್ಕಳನ್ನು ಪಡೆಯುವ ಪ್ರಯತ್ನ ಮಾಡಲು ಅವಕಾಶ ಕಲ್ಪಿಸಲಾಗಿದೆ. 1971ರ ಕಾಯ್ದೆಯಂತೆ ವೈದ್ಯಕೀಯ ಕಾರಣಗಳಿಗಾಗಿ ಬಾಡಿಗೆ ತಾಯಿಗೆ ಗರ್ಭಪಾತಕ್ಕೆ ಅವಕಾಶ ಇದೆ. ಈ ವರ್ಷದ ಜ. 25ರಂದು ಬಾಡಿಗೆ ತಾಯಿ (ನಿಯಂತ್ರಣ ಕಾಯ್ದೆ) ದೇಶಾದ್ಯಂತ ಜಾರಿಗೆ ಬಂದಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.