ಅಣು ಬಾಂಬ್‌ ಸಂಚು; ಉಗ್ರ ಯಾಸಿನ್‌ ಭಟ್ಕಳ ವಿರುದ್ಧ ದಿಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್‌

Team Udayavani, Apr 4, 2023, 7:20 AM IST

ಅಣು ಬಾಂಬ್‌ ಸಂಚು; ಉಗ್ರ ಯಾಸಿನ್‌ ಭಟ್ಕಳ ವಿರುದ್ಧ ದಿಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್‌

ಹೊಸದಿಲ್ಲಿ: ನಿಷೇಧಕ್ಕೆ ಒಳಗಾಗಿರುವ ಇಂಡಿಯನ್‌ ಮುಜಾಹಿದೀನ್‌ನ ಯಾಸಿನ್‌ ಭಟ್ಕಳ ಗುಜರಾತ್‌ನ ಸೂರತ್‌ ಮೇಲೆ 2012ರಲ್ಲಿ ಅಣು ಬಾಂಬ್‌ ದಾಳಿಗೆ ಸಂಚು ರೂಪಿಸಿದ್ದ ಘಾತಕ ಅಂಶ ಬಯಲಾಗಿದೆ. ಅದಕ್ಕಾಗಿ ನಗರದಲ್ಲಿ ಇರುವ ಮುಸ್ಲಿಂ ಸಮುದಾಯದವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಅಪಾಯಕಾರಿ ಯೋಜನೆ ರೂಪಿಸಿದ್ದ ಎಂದು ಆತನ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಪಾಕಿಸ್ಥಾನದ ನೆರವಿನಿಂದ ಸಂಘಟನೆಗೆ ನೇಮಕ ಮಾಡಿಕೊಳ್ಳಲೂ ಮುಂದಾಗಿದ್ದ.

ಉಗ್ರ ಯಾಸಿನ್‌ ಮಾತ್ರವಲ್ಲದೆ ಡ್ಯಾನಿಶ್‌ ಅನ್ಸಾರಿ ಸಹಿತ ಒಟ್ಟು ಹತ್ತು ಮಂದಿಯ ವಿರುದ್ಧ ದೇಶದ ವಿರುದ್ಧ ಯುದ್ಧ ಸಾರಿದ ಆರೋಪದ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಮಾ.31ರಂದೇ ಹೊಸದಿಲ್ಲಿಯ ಪಾಟಿಯಾಲಾ ಹೌಸ್‌ನಲ್ಲಿರುವ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶ ಶೈಲೇಂದ್ರ ಮಲಿಕ್‌ ಆದೇಶ ನೀಡಿದ್ದರು.

ತನಿಖೆಯ ವೇಳೆ ಯಾಸಿನ್‌ ಮಲಿಕ್‌ ಮತ್ತು ಇತರರಿಂದ ವಶಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಇದ್ದ ವೀಡಿಯೋ, ಜೆಹಾದಿ ಸಾಹಿತ್ಯ ಮತ್ತು ಇತರ ದಾಖಲೆಗಳಲ್ಲಿ ಮುಸ್ಲಿಮೇತರರನ್ನು ಜೆಹಾದ್‌ಗಾಗಿ ಕೊಲ್ಲುವುದು ತಪ್ಪು ಅಲ್ಲ ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಅಂಶ ಕಂಡು ಬಂದಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಅಣು ಬಾಂಬ್‌ ದಾಳಿ: ಮೊಹಮ್ಮದ್‌ ಸಾಜಿದ್‌ ಎಂಬಾ ತನ ಜತೆಗೆ ಉಗ್ರ ಯಾಸಿನ್‌ ಭಟ್ಕಳ ನಡೆಸಿದ ಚಾಟ್‌ನಲ್ಲಿ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಸದಸ್ಯರು ದೇಶದ ಅಲ್ಲಲ್ಲಿ ಉಗ್ರ ದಾಳಿ ನಡೆಸಬೇಕು. ಅದರಲ್ಲೂ ವಿಶೇಷವಾಗಿ ಗುಜರಾತ್‌ನ ಸೂರತ್‌ನಲ್ಲಿ ಮುಸ್ಲಿಂ ಸಮುದಾಯದವರನ್ನೆಲ್ಲ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರ ನಡೆಸಿ, ಇತರರ ಮೇಲೆ ಅಣು ಬಾಂಬ್‌ ದಾಳಿ ನಡೆಸುವ ಘಾತಕ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ. 2013 ಜೂ.1ರಂದು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ನಾಯಕರೊಬ್ಬರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆ ಮಾಡುವ ಬಗ್ಗೆಯೂ ಚಾಟ್‌ ಅನ್ನು ಕೇಂದ್ರ ಸರಕಾರದ ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ – ಸರ್ಟ್‌ ಇನ್‌ – CERT-In ಛೇದಿಸಿ ವಿಶ್ಲೇಷಣೆ ನಡೆಸಿದ್ದ ವೇಳೆ ದೃಢಪಟ್ಟಿತ್ತು.

ನಕ್ಸಲೀಯರ ಹೆಸರಿನಲ್ಲಿ ಕಾಂಗ್ರೆಸ್‌ ಮುಖಂಡರ ಮೇಲೆ ದಾಳಿಗೆ ಯೋಜಿಸಿದ್ದರು. ಜನರನ್ನು ಕೊಲ್ಲುವು ದಕ್ಕಿಂತ ಮುಖಂಡರ ಮೇಲೆ ದಾಳಿ ನಡೆಸಿ ಸರಕಾರವನ್ನು ಬೆದರಿಸುವ ತಂತ್ರವನ್ನೂ ಅವರು ಹೊಂದಿದ್ದರು ಎಂದು ಅದರಲ್ಲಿ ಸ್ಪಷ್ಟವಾಗಿದೆ.

ವೀಡಿಯೋಗಳು: ಯಾಸಿನ್‌ ಮತ್ತು ಆತನ ಸಹಚರರು ಹೊಂದಿದ್ದ ವೀಡಿಯೋ ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಉಗ್ರ ಸಂಘಟನೆ ಅಲ್‌-ಕಾಯಿದಾ ಜೆಹಾದ್‌ಗೆ ಪ್ರೋತ್ಸಾಹ ನೀಡುವ ಕ್ರೂರ ಅಂಶಗಳು ಇರುವ ವೀಡಿಯೋಗಳು ಇದ್ದವು.

ಪದೇ ಪದೆ ಕುಕೃತ್ಯ: ಉಗ್ರ ಯಾಸಿನ್‌ ಪದೇ ಪದೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದದ್ದು ದೃಢಪಟ್ಟಿದೆ ಎಂದು ಚಾರ್ಜ್‌ಶೀಟ್‌ ಅನ್ನು ಪರಿ   ಶೀಲಿಸಿದ ಸಂದರ್ಭದಲ್ಲಿ ನ್ಯಾಯಾಧೀಶ ಶೈಲೇಂದ್ರ ಮಲಿಕ್‌ ಅಭಿಪ್ರಾಯಪಟ್ಟರು.

ದೇಶದ ಹಲವೆಡೆ ಉಗ್ರ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುವುದು ಮಾತ್ರ ವಲ್ಲ, ಸುಧಾರಿತ ಸ್ಫೋಟಕಗಳನ್ನು ತಯಾರಿಸುವಲ್ಲಿ ಕೂಡ ಆತ ಸಿದ್ಧಹಸ್ತನಿದ್ದಾನೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಮೂವರ ಖುಲಾಸೆ: ಎಲ್ಲ ಅಂಶಗಳನ್ನು ಪರಿಶೀಲಿಸಿದ ಕೋರ್ಟ್‌, ಮೂವರನ್ನು ಆರೋಪಮುಕ್ತಗೊಳಿಸಿತು. ಯಾಸಿನ್‌ ಭಟ್ಕಳ ಅಲ್ಲದೆ, ಮೊಹಮ್ಮದ್‌ ಡ್ಯಾನಿಶ್‌ ಅನ್ಸಾರಿ, ಮೊಹಮ್ಮದ್‌ ಅಫ್ತಾಬ್‌ ಆಲಂ, ಇಮ್ರಾನ್‌ ಖಾನ್‌, ಸಯ್ಯದ್‌, ಉಬೈದ್‌ ಉರ್‌ ರೆಹಮಾನ್‌, ಅಸಾದುಲ್ಲಾ ಅಖ್ತರ್‌, ಉಜೈರ್‌ ಅಹ್ಮದ್‌, ಮೊಹಮ್ಮದ್‌ ತೆಹ್ಸಿàನ್‌ ಅಖ್ತರ್‌, ಹೈದರ್‌ ಅಲಿ ಮತ್ತು ಜಿಯಾ ಉರ್‌ ರೆಹಮಾನ್‌ ಎಂಬುವರ ವಿರುದ್ಧ ಚಾರ್ಜ್‌ ಶೀಟ್‌ನಲ್ಲಿ ಆರೋಪಗಳನ್ನು ಮಾಡಲಾಗಿದೆ.

ನೆರವಿಗೆ ಹವಾಲಾ ಜಾಲ
ಎಲ್ಲ ಕುಕೃತ್ಯಗಳಿಗೆ ನಿಷೇಧಿತ ಸಂಘಟನೆಗೆ ಹವಾಲಾ ಜಾಲದ ಮೂಲಕ ಆರ್ಥಿಕ ನೆರವು ಬರುತ್ತಿತ್ತು. ಐಎಂ ಹಾಗೂ ಅದರ ಸಹವರ್ತಿ ಸಂಘಟನೆಗಳಿಗೆ ಬುಡಮೇಲು ಕೃತ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಈ ಮೊತ್ತ ಹಂಚಿಕೆಯಾಗುತ್ತಿತ್ತು. ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಪ್ರಧಾನವಾಗಿ ಇರಿಸಿಕೊಂಡು ದೇಶದಲ್ಲಿ ಮುಸ್ಲಿಂ ಸಮುದಾಯದವರನ್ನು ರೊಚ್ಚಿಗೆಬ್ಬಿಸಲು ಬೇಕಾದ ತಯಾರಿಯನ್ನೂ ಅವರು ನಡೆಸುತ್ತಿದ್ದರು. ವಿಶೇಷವಾಗಿ ಸಮುದಾಯದ ಯುವಕರಲ್ಲಿ ದ್ವೇಷ ಮೂಡಿಸುವಂಥ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ

Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ

Tragedy: ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ

Tragedy: ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.