‘ಡಬಲ್ ರೂಪಾಂತರಿ ಕೋವಿಡ್ ವೈರಸ್’ ನನ್ನು ಮಣಿಸಲಿದೆ ಕೋವ್ಯಾಕ್ಸಿನ್ ಲಸಿಕೆ : ಐಸಿಎಂಆರ್
Team Udayavani, Apr 21, 2021, 5:37 PM IST
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ದಿನನಿತ್ಯ ತನ್ನ ಅಬ್ಬರವನ್ನು ಹೆಚ್ಚು ಮಾಡುತ್ತಿರುವುದು ಒಂದು ಕಡೆಯಾದರೇ, ಇನ್ನೊಂದೆಡೆ ಲಸಿಕೆಯ ಅಭಿಯಾನವೂ ಕೂಡ ಆಗುತ್ತಿದೆ. ಮತ್ತೊಂದೆಡೆ ದೇಶದಲ್ಲಿ ಕೋವಿಡ್ ಲಸಿಕೆಯ ಕೊರತೆಯಾಗುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರದ ಮೇಲೆ ಪ್ರತಿಪಕ್ಷಗಳು ಹಾಕುತ್ತಿವೆ. ಲಸಿಕೆಯ ವಿಚಾರ ದೇಶದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನಲೆಯಲ್ಲಿ, ದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಹಠಾತ್ ಏರಿಕೆಯಾಗುತ್ತಿರುವ ‘ಡಬಲ್ ರೂಪಾಂತರಿ ಕೊರೋನಾ ವೈರಸ್’ ನನ್ನೂ ಮಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಓದಿ : ಮುಂಬೈನಲ್ಲಿಂದು ಚೆನ್ನೈಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕಾದಾಟ
ಈ ಬಗ್ಗೆ ಮಾಹಿತಿ ನೀಡಿರುವ ಐಸಿಎಂಆರ್, ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ, ಕೊವಾಕ್ಸಿನ್, SARS-CoV-2 ನ ಅನೇಕ ರೂಪಾಂತರಗಳನ್ನು ಮಣಿಸಲಿದೆ ಹಾಗೂ ‘ಡಬಲ್ ರೂಪಾಂತರಿ ಕೋವಿಡ್ ವೈರಸ್’ ನ ಒತ್ತಡದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.
ICMR study shows #COVAXIN neutralises against multiple variants of SARS-CoV-2 and effectively neutralises the double mutant strain as well. @MoHFW_INDIA @DeptHealthRes #IndiaFightsCOVID19 #LargestVaccineDrive pic.twitter.com/syv5T8eHuR
— ICMR (@ICMRDELHI) April 21, 2021
ಈ ಕುರಿತಂತೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಾಡಿರುವ ಐಸಿಎಂಆರ್, ‘ಐಸಿಎಂಆರ್ ಅಧ್ಯಯನವು SARS-CoV-2 ವೈರಸ್ ನ ಅನೇಕ ರೂಪಾಂತರಗಳ ವಿರುದ್ಧ ಕೋವಾಕ್ಸಿನ್ ಲಸಿಕೆ ಕಾರ್ಯ ನಿರ್ವಹಿಸಲಿದ್ದು ಮತ್ತು ಡಬಲ್ ರೂಪಾಂತರಿತ ವೈರಸ್ ನ ಒತ್ತಡವನ್ನು ಮಣಿಸಲಿದೆ ಎಂದು ಮಾಹಿತಿ ನೀಡಿದೆ.
ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ SARS-CoV-2 ವೈರಸ್ ನ ಅನೇಕ ರೂಪಾಂತರಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದೆ. ಈ ಪೈಕಿ B.1.1.7 (ಬ್ರಿಟನ್ ರೂಪಾಂತರಿ ವೈರಸ್), B.1.1.28 (ಬ್ರೆಜಿಲ್ ರೂಪಾಂತರಿ ವೈರಸ್) ಮತ್ತು B.1.351 (ದಕ್ಷಿಣ ಆಫ್ರಿಕಾ ರೂಪಾಂತರಿ ವೈರಸ್) ವೈರಸ್ ಗಳನ್ನು ಹೆಸರಿಸಲಾಗಿದೆ.
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿರುವ ಕೋವಾಕ್ಸಿನ್ ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ತುರ್ತು ಬಳಕೆ ಅನುಮತಿ ಪಡೆಯಲಾಗಿದೆ.
ಐಸಿಎಂಆರ್-ಎನ್ ಐ ವಿ ಯುಕೆ ರೂಪಾಂತರ ಮತ್ತು ಬ್ರೆಜಿಲ್ ರೂಪಾಂತರಿ ವೈರಸ್ ನನ್ನು ಮಣಿಸುವ ಸಾಮರ್ಥ್ಯವನ್ನು ಕೊವಾಕ್ಸಿನ್ ಲಸಿಕೆ ಹೊಂದಿದೆ. ಐಸಿಎಂಆರ್-ಎನ್ ಐ ವಿ ಇತ್ತೀಚೆಗೆ ಭಾರತದ ಕೆಲವು ಪ್ರದೇಶಗಳಲ್ಲಿ ಮತ್ತು ಇತರ ಹಲವಾರು ದೇಶಗಳಲ್ಲಿ ಪತ್ತೆ ಹಚ್ಚಲಾದ ‘ಡಬಲ್ ರೂಪಾಂತರಿ ಕೊರೋನಾ ವೈರಸ್’ ಬಿ.1.617 SARS-CoV-2 ವೈರಸ್ ನನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದೆ ಎಂದು ದೇಶದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ಓದಿ : ಉಡುಪಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.