ಕೊವಾಕ್ಸಿನ್ ಪ್ರಯೋಗ ಶೀಘ್ರವೇ ಪ್ರಾರಂಭ : 2 ಹಂತಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ನೀಡಿಕೆ
Team Udayavani, Jul 8, 2020, 9:12 AM IST
ಹೊಸದಿಲ್ಲಿ: ದೇಶದ ಮೊದಲ ಕೋವಿಡ್ ವೈರಸ್ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ವೇಗ ಪಡೆದಿದ್ದು, ಸದ್ಯದಲ್ಲೇ ಮಾನವನ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಖಾಸಗಿ ಫಾರ್ಮಾ ಕಂಪೆನಿಯಾದ ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಎರಡು ಹಂತಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಪ್ರಯೋಗಿಸಲಾಗುತ್ತದೆ. ಮೊದಲ ಹಂತದಲ್ಲಿ 375 ಮಂದಿಯ ಮೇಲೆ ಮತ್ತು 2ನೇ ಹಂತದಲ್ಲಿ 750 ಮಂದಿಯ ಮೇಲೆ ಲಸಿಕೆಯ ಪ್ರಯೋಗ ನಡೆಯಲಿದೆ. ಈಗಾಗಲೇ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಜಿಸಿಐ)ವು ಮೊದಲ 2 ಹಂತದ ಪ್ರಯೋಗಕ್ಕೆ ಅನುಮತಿ ನೀಡಿದೆ. ಕರ್ನಾಟಕದ ಬೆಳಗಾವಿಯ ಜೀವನ್‌ರೇಖಾ ಆಸ್ಪತ್ರೆ ಸೇರಿದಂತೆ 12 ಸಂಸ್ಥೆಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.
3ನೇ ಹಂತಕ್ಕೆ 3 ಲಸಿಕೆಗಳು: ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಒಟ್ಟು 19 ಲಸಿಕೆಗಳ ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಆಸ್ಟ್ರಾಝೆನೆಕಾ ಮತ್ತು ಸಿನೋವಾಕೇರ್ ಎಂಬ ಎರಡು ಲಸಿಕೆಗಳು ಮಾನವನ ಮೇಲಿನ ಪ್ರಯೋಗದ ಮೂರನೇ ಹಂತ ತಲುಪಿವೆ. ಈಗ ಚೀನದ ಸಿನೋವ್ಯಾಕ್ ಬಯೋಟೆಕ್ ಕಂಪನಿ ಕೂಡ ಈ ಸಾಧನೆ ಮಾಡಿದ್ದು, ತನ್ನ ಲಸಿಕೆಯನ್ನು ಕೊನೆಯ ಹಂತದ ಪ್ರಯೋಗಕ್ಕೆ ಒಳಪಡಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಪಿಫಿಜರ್, ನೋವಾವ್ಯಾಕ್ಸ್, ಕ್ಯಾಡಿಲಾ ಹೆಲ್ತ್‌ಕೇರ್ ಸೇರಿದಂತೆ 6 ಸಂಸ್ಥೆಗಳು ಲಸಿಕೆಯ 2ನೇ ಹಂತದ ಪ್ರಯೋಗ ನಡೆಸುತ್ತಿವೆ.
24 ಗಂಟೆಯಲ್ಲಿ 22,252 ಹೊಸ ಕೇಸು
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಮವಾರದಿಂದ ಮಂಗಳವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 22,252 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸತತ 5ನೇ ದಿನವೂ 20 ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಜತೆಗೆ, ಒಂದೇ ದಿನ 467 ಮಂದಿ ಬಲಿಯಾಗಿ, ಮೃತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟಿನಲ್ಲಿ ಭಾರತದಲ್ಲಿ ಒಂದು ಲಕ್ಷ ಸೋಂಕಿತರು ಪತ್ತೆಯಾಗಲು 110 ದಿನಗಳು ತೆಗೆದುಕೊಂಡರೆ, ಕೇವಲ 49 ದಿನಗಳಲ್ಲಿ ಈ ಸಂಖ್ಯೆ 7 ಲಕ್ಷ ದಾಟಿದೆ. ಇದೇ ವೇಳೆ, 4.39 ಲಕ್ಷ ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.61.13ಕ್ಕೇರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
MUST WATCH
ಹೊಸ ಸೇರ್ಪಡೆ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.