ಕೋವಿಡ್ ಲಾಕ್ ಡೌನ್ ಎಫೆಕ್ಟ್ : ಈಗ ಪರಿಶುದ್ಧಳಾಗುತ್ತಿದ್ದಾಳೆ ಗಂಗಾ ಮಾತೆ!
Team Udayavani, Apr 4, 2020, 7:29 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ 130 ಕೋಟಿ ಜನರು, ಗೃಹಬಂಧನದಲ್ಲಿದ್ದಾರೆ! ಇದರ ಪರಿಣಾಮ, ದಶಕಗಳಿಂದ ಮಲಿನವಾಗಿದ್ದ ಗಂಗಾ ನದಿ, ಈಗ ತಾನೇತಾನಾಗಿ ಶುದ್ಧವಾಗುತ್ತಾ ಸಾಗಿದೆ!
ಈಗ ಗಂಗಾ ನದಿಯ ನೀರು, ಸ್ನಾನ ಮಾಡಲು, ಪ್ರಾಣಿಗಳು ಅಥವಾ ಮೀನು ಸಾಕಾಣಿಕೆಗೆ ಬಳಸುವಂತಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶಗಳು ಹೇಳಿವೆ. ಗಂಗಾ ನದಿ ಮಾತ್ರವಲ್ಲದೆ, ಗಂಗಾ ನದಿಯ ಉಪನದಿಗಳಾದ ಹಿಂಡಾನ್ ಮತ್ತು ಯಮುನಾ ನದಿಗಳಲ್ಲೂ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಮಂಡಳಿ ತಿಳಿಸಿದೆ.
ಈವರೆಗೆ, ಮನುಷ್ಯರಿಂದ, ಕೈಗಾರಿಕೆಗಳಿಂದ ನದಿಗೆ ಸೇರುತ್ತಿದ್ದ ತ್ಯಾಜ್ಯದಿಂದಾಗಿ ಈ ನದಿಯ ನೀರು ಸ್ನಾನ ಮಾಡದಷ್ಟು ಕಲುಷಿತವಾಗಿತ್ತು. ಬಂಗಾಳ ಕೊಲ್ಲಿಯನ್ನು ಸೇರುವವರೂ ಇದು ನಿರಂತರವಾಗಿ ಕಲುಷಿತಗೊಳ್ಳುತ್ತಾ ಸಾಗಿತ್ತು . ಆದರೀಗ, ಲಾಕ್ ಡೌನ್‌ನ ಪರಿಣಾಮವಾಗಿ, ನದಿಗೆ ಸೇರುತ್ತಿದ್ದ ತ್ಯಾಜ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ನದಿ ನೀರು ಉಪಯೋಗ ಯೋಗ್ಯವಾಗಿ ಬದಲಾಗಿದೆ.
ಕೇಂದ್ರ ಪರಿಸರ ಖಾತೆ ಸಚಿವ ಮನೋಜ್ ಮಿಶ್ರಾ ಅವರು, ‘ನದಿಯಲ್ಲಿ ಈಗಿರುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಈವರೆಗೆ ಆಗಿದ್ದ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಲು ಇದೇ ಸರಿಯಾದ ಸಮಯ. ಈ ಕುರಿತಂತೆ ಸಿಪಿಸಿಬಿ ಕಾರ್ಯೋನ್ಮುಖವಾಗಬೇಕು” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.