ಅಬುಧಾಬಿಯಿಂದ ಬಂದವರಿಗೆ ಕೋವಿಡ್ ; ಕೇರಳಕ್ಕೆ ವಾಪಸಾದವರಲ್ಲಿ ಸೋಂಕು
ಮುಂಬಯಿಗೆ ಬಂದವರು ಕ್ವಾರಂಟೈನ್‌ಗೆ
Team Udayavani, May 11, 2020, 11:54 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ/ಕೊಚ್ಚಿ/ಹೊಸದಿಲ್ಲಿ: ಏರ್ ಇಂಡಿಯಾದ ವಿಶೇಷ ವಿಮಾನಗಳಲ್ಲಿ ಗುರುವಾರ ಅಬುಧಾಬಿ ಮತ್ತು ದುಬಾಯಿಯಿಂದ ಕೇರಳಕ್ಕೆ ಮರಳಿದ್ದ 363 ಭಾರತೀಯರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ.
ಗುರುವಾರ ಕೇರಳಕ್ಕೆ ಬಂದಿಳಿದವರ ಪೈಕಿ ಇಬ್ಬರಿಗೆ ಶನಿವಾರ ಸೋಂಕು ದೃಢಪಟ್ಟಿತ್ತು. ರವಿವಾರ ಮತ್ತೆ ಮೂವರು ಸೋಂಕಿತರು ಪತ್ತೆಯಾಗಿರುವುದು ಈಗಾಗಲೇ ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿರುವ ಕೇರಳ ರಾಜ್ಯ ಸರಕಾರದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಡುವೆ ವಿವಿಧ ದೇಶಗಳಿಂದ ಮುಂಬೈಗೆ ಬಂದಿರುವ 572 ಭಾರತೀಯರನ್ನು ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ದುಬಾಯಿ ಮತ್ತು ಅಬುಧಾಬಿಯಿಂದ ಹೊರಡುವ ವಲಸಿಗರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆಯೇ ಕಳುಹಿಸಿಕೊಡಲಾಗುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿದೆ.
ಯು.ಕೆ.ಯಲ್ಲಿ ಇದ್ದ 239 ಭಾರತೀಯರನ್ನು ಹೊತ್ತುತಂದ ಏರ್ ಇಂಡಿಯಾ ವಿಮಾನ, ಸಿಂಗಾಪುರದಿಂದ 243 ಮತ್ತು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಿಂದ 241 ಭಾರತೀಯರನ್ನು ಕರೆತಂದಿರುವ ಎರಡು ವಿಮಾನಗಳು ಸಹ ಮುಂಬಯಿಗೆ ಮರಳಿವೆ.
ಈ ನಡುವೆ ಅಮೆರಿಕದಲ್ಲಿರುವ ಭಾರತೀಯರನ್ನು ಹೊತ್ತ ಎರಡು ವಿಮಾನಗಳು ನ್ಯೂ ಜೆರ್ಸಿಯಿಂದ ಮುಂಬಯಿ ಮತ್ತು ಅಹ್ಮದಾಬಾದ್‌ಗೆ ಹೊರಟಿವೆ.
ಬೆಂಗಳೂರಿಗೆ ವಿಮಾನ: ಯುನೈಟೆಡ್ ಕಿಂಗ್‌ಡಂನಲ್ಲಿದ್ದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಇತರರು ಸೇರಿ 323 ಭಾರತೀಯರನ್ನು ಒಳಗೊಂಡಿರುವ ಏರ್ ಇಂಡಿಯಾದ ಎರಡನೇ ವಿಮಾನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಹೊರಟಿದೆ. ಮಾ.13 ರಂದು ಆತ್ಮಹತ್ಯೆಗೆ ಶರಣಾಗಿದ್ದ 37 ವರ್ಷದ ಗದಿಗೆಪ್ಪಗೌಡ ಓಂಕಾರ ಗೌಡ ಪಾಟೀಲ್ ಎಂಬವರ ಶವವನ್ನು ಕೂಡ ವಿಮಾನದಲ್ಲಿ ಕಳುಹಿಸಿ ಕೊಡಲಾಗಿದೆ.
ಕೊಚ್ಚಿಗೆ ಬಂದ ಐಎನ್‌ಎಸ್ ಜಲಾಶ್ವ: ಮಾಲ್ಡೀವ್ಸ್‌ನಲ್ಲಿ ಸಿಲುಕಿದ್ದ 698 ಭಾರತೀಯರು ಐಎನ್‌ಎಸ್ ಜಲಾಶ್ವ ಯುದ್ಧನೌಕೆ ಮೂಲಕ ರವಿವಾರ ಬೆಳಗ್ಗೆ 9.30ಕ್ಕೆ ಕೊಚ್ಚಿ ತಲುಪಿದ್ದಾರೆ. ಹಡಗುಕಟ್ಟೆಗೆ ಇಳಿದ ಕೂಡಲೇ ಪ್ರಯಾಣಿಕ ರೊಬ್ಬರು ನಾವು ಸುರಕ್ಷಿತರಾಗಿದ್ದೇವೆ ಎಂದು ಉದ್ಗರಿಸಿದರು.
595 ಪುರುಷರು, 103 ಮಹಿಳೆಯರು ಸೇರಿ ಒಟ್ಟು 698 ಪ್ರಯಾಣಿಕರ ಪೈಕಿ 10 ವರ್ಷದೊಳಗಿನ 14 ಮಕ್ಕಳು, 19 ಗರ್ಭಿಣಿಯರಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕೇರಳ ಮತ್ತು ತಮಿಳು ನಾಡು ಮೂಲದವರು. ಉಳಿದಂತೆ ಇತರ 18 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಜನರೂ ಭಾರತ ತಲುಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.