ಒಂದೇ ಬಾರಿಗೆ 6 ತಿಂಗಳ ಪಡಿತರ ಖರೀದಿಗೆ ಅಸ್ತು
Team Udayavani, Mar 20, 2020, 8:55 PM IST
ಸಬ್ಸಿಡಿ ಸಹಿತ ಆಹಾರ ಧಾನ್ಯವನ್ನು ಖರೀದಿಸುವಂಥ 75 ಕೋಟಿ ಫಲಾನುಭವಿಗಳಿಗೆ ಒಂದೇ ಬಾರಿಗೆ 6 ತಿಂಗಳ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ನಮ್ಮ ದಾಸ್ತಾನುಗಳಲ್ಲಿ ಸಾಕಷ್ಟು ಆಹಾರ ಧಾನ್ಯಗಳಿವೆ. ಹೀಗಾಗಿ ಬಡವರಿಗೆ ಒಂದೇ ಬಾರಿಗೆ 6 ತಿಂಗಳ ಕೋಟಾವನ್ನು ಪೂರೈಸಿ ಎಂದು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದೇವೆ. ಮುಂದೆ ಪರಿಸ್ಥಿತಿ ಬಿಗಡಾಯಿಸಿದರೆ, ದೇಶದ ಬಡ ಜನ ಆಹಾರವಿಲ್ಲದೆ ಪರಿತಪಿಸಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಟ್ಟೆ ತೊಳೆಯಲು ನಿರಾಕರಿಸಿದ ಧೋಬಿಗಳು
ಕೊರೊನಾ ಹರಡುವಿಕೆಯಿಂದ ಹೆದರಿದ ಮಹಾರಾಷ್ಟ್ರದ ಯವತ್ಮಾಲ್ ಪಟ್ಟಣದ ಸರಕಾರಿ ಆಸ್ಪತ್ರೆಯ ಬಟ್ಟೆ ಒಗೆಯುವ ಸಿಬಂದಿ, ರೋಗಿಗಳ ಬಟ್ಟೆ ತೊಳೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದೇ ಆಸ್ಪತ್ರೆಯಲ್ಲಿ ಮೂರು ಕೊರೊನಾ ಸೋಂಕಿತರು ಮತ್ತು ನಾಲ್ವರು ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಸಿಬಂದಿ ಪ್ರತ್ಯೇಕ ನಿಗಾ ಘಟಕದ ಹೊದಿಕೆಗಳು, ಪರದೆಗಳನ್ನು ಧೋಬಿಗಳಿಗೆ ತೊಳೆಯಲು ನೀಡಿದಾಗ ಅವರು ಅವುಗಳನ್ನು ಮುಟ್ಟಲು ನಿರಾಕರಿಸಿದ್ದಾರೆ. ಬಟ್ಟೆಗಳನ್ನು ಮುಟ್ಟಿದರೆ ನಮಗೂ ವೈರಸ್ ತಗಲಬಹುದು. ನಾವು ಆ ಬಟ್ಟೆಗಳನ್ನು ಮುಟ್ಟುವುದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.