![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 22, 2020, 9:57 PM IST
ನವದೆಹಲಿ: ಕೋವಿಡ್ 19 ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಾಲಿವುಡ್ ತಾರೆಯರು ಜಾಗೃತಿ ಮೂಡಿಸುವ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. ಬಾಲಿವುಡ್ ತಾರೆ ಸಲ್ಮಾನ್ ಖಾನ್ ವಿಡಿಯೋ ಮೂಲಕ ಜನರಿಗೆ ಜಾಗೃತಿ ಸಂದೇಶವನ್ನು ಸಾರಿದ್ದಾರೆ.
ಸಾಂಕ್ರಾಮಿಕದ ಭೀಕರತೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಅದನ್ನು ಗಂಭೀರವಾಗಿ ಪರಿಗಣಿಸಿ. ಸರ್ಕಾರ ಹೇಳಿರುವ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸಿ. ನಮಗೆ ಸೋಂಕು ತಗಲುವುದಿಲ್ಲ ಎಂದು ನಿಮ್ಮಷ್ಟಕ್ಕೆ ನೀವು ಭಾವಿಸಿದ್ದರೆ ಅದು ನಮ್ಮ ಮೌಡ್ಯ ಎಂದು ಅವರು ಹೇಳಿದ್ದಾರೆ.
ಸರ್ಕಾರ ಬಂದ್‌ಗೆ ಕರೆ ನೀಡಿದ್ದರೆ ಅದರರ್ಥ ಸಾರ್ವಜನಿಕ ರಜೆ. ನೀವು ಹೊರಗೆ ಬಂದು ಮೋಜು ಮಾಡಬಹುದು ಎಂದಲ್ಲ. ನೀವು ಮನೆಯಲ್ಲಿ ಸುರಕ್ಷಿತವಾಗಿ ಇರಿ ಎಂದರ್ಥ ಎಂದಿದ್ದಾರೆ. ನಟ ಅಜಯ್ ದೇವಗನ್ ಕೂಡಾ ವಿಡಿಯೋ ಸಂದೇಶ ನೀಡಿದ್ದು, ಎಲ್ಲಾ ಸಿನಿಮಾಗಳಲ್ಲಿ ನಾಯಕ ಮತ್ತು ಖಳನಾಯಕ ಎಂಬ ಎರಡು ಪಾತ್ರವಿದ್ದಂತೆ ನಿಜ ಜೀವನದಲ್ಲೂ ಎರುಡು ಪಾತ್ರಗಳಿವೆ. ಒಂದು ಕೊರೊನಾ ಎಂಬ ಖಳನಾಯಕ ಮತ್ತು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಮಾನವ ಎಂಬ ನಾಯಕ. ನಾವೆಲ್ಲರೂ ಜಾಗರೂಕರಾಗಿ ನಾಯಕರಾಗೋಣ ಎಂದು ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.