ಒಬ್ಬ ಭಾರತೀಯನಿಂದ 4 ಜನರಿಗೆ ಸೋಂಕು ; ಕೋವಿಡ್ 19 ಪ್ರಾರಂಭದಲ್ಲಿ ಸಿದ್ಧಪಡಿಸಿದ್ದ ವರದಿ
Team Udayavani, Mar 25, 2020, 1:43 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ‘ಒಬ್ಬ ಭಾರತೀಯನಿಗೆ ಕೋವಿಡ್ 19 ವೈರಸ್ ಸೋಂಕು ತಗಲಿದರೆ ಅದು ಆತನಿಂದ ಏಕಕಾಲಕ್ಕೆ ನಾಲ್ವರಿಗೆ ಹರಡಬಹುದು. ಹಾಗಾಗಿ ಸೋಂಕಿತರನ್ನು ಅಥವಾ ಸೋಂಕು ಶಂಕಿತರನ್ನು 3 ದಿನಗಳ ಕಾಲ ಸ್ವಯಂನಿರ್ಬಂಧಕ್ಕೆ ಒಳಪಡಿಸಿದರೆ ಸಾಕು, ಕೊರೊನಾ ಹರಡುವಿಕೆಯನ್ನು ಶೇ. 62ರಷ್ಟು ಕಡಿಮೆ ಮಾಡಬಹುದು.
ಮಿತಿಮೀರಿದ ಸಂದರ್ಭಗಳಲ್ಲಿ ಈ ಸೋಂಕನ್ನು ಶೇ. 89ರಷ್ಟು ಕಡಿಮೆಗೊಳಿಸಬಹುದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಿದ್ಧಪಡಿಸಿರುವ ಗಣಿತಶಾಸ್ತ್ರ ಆಧಾರಿತ ಸಂಶೋಧನಾ ವರದಿಯೊಂದು ಹೇಳಿದೆ. ಬಹುಮುಖ್ಯವಾಗಿ ಇದು ಸಾಮಾಜಿಕ ಅಂತರ ಕಾಪಾಡುವುದರ ಪ್ರಯೋಜನಗಳನ್ನು ಅಂಕಿ-ಅಂಶಗಳ ಮೂಲಕ ಪ್ರಸ್ತುತಗೊಳಿಸಿದೆ.
ಈ ವರದಿಯನ್ನು ಫೆಬ್ರವರಿಯಲ್ಲಿ, ಅಂದರೆ ಸೋಂಕು ಆಗ ತಾನೇ ಭಾರತಕ್ಕೆ ಕಾಲಿಡುತ್ತಿದ್ದ ಸಂದರ್ಭದಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ ಈಗ ದೇಶದೆಲ್ಲೆಡೆ ಹರಡಿದೆ. ಸೋಂಕಿತರ ಸಂಖ್ಯೆ 515ನ್ನು ದಾಟಿದೆ.
ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಆರಂಭಿಕ ಹಂತದಲ್ಲಿ ತಯಾರಿಸಲಾದ ವರದಿ ಈಗ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೆ ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ರಮಣ ಆರ್. ಗಂಗಖೇಡ್ಕರ್ ಅವರು ಉತ್ತರಿಸಿದ್ದಾರೆ.
‘ಸೋಂಕು ಆರಂಭಿಕ ಹಂತದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ನಿಜ. ಆದರೆ ಸೋಂಕಿತರು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಜನರಿಗೆ ಹರಡುತ್ತಾರೆ ಎಂಬುದು ಬದಲಾಗದ ಸತ್ಯ. ಏಕೆಂದರೆ ಆ ವೈರಾಣು ಹರಡಿಕೊಳ್ಳುವ ವೇಗವನ್ನು ಲೆಕ್ಕ ಇಟ್ಟು ಈ ವರದಿ ಸಿದ್ಧಪಡಿಸಲಾಗಿದೆ. ಆ ವೇಗ ಬದಲಾಗುವುದಿಲ್ಲ. ಹಾಗಾಗಿ ಈ ವರದಿಯು ಸರ್ವಕಾಲಿಕ’ ಎಂದು ಅವರು ತಿಳಿಸಿದ್ದಾರೆ.
‘ಇದು ನಿರ್ದಿಷ್ಟ ಪ್ರಾಂತ್ಯ ಅಥವಾ ದೇಶದಲ್ಲಿ ರೋಗಾಣುಗಳ ಹರಡುವಿಕೆಯ ವೇಗವನ್ನು ಆರ್- ನಾಟ್ (R0) ಎಂದು ಸಾಂಕೇತಿಕವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. 0 ಮೌಲ್ಯ 1 ಅಥವಾ ಅದಕ್ಕಿಂತ ಕೆಳಗಿದ್ದರೆ ವೈರಾಣುಗಳು ಸಾಯುವ ಹಂತದಲ್ಲಿವೆ ಎಂದರ್ಥ. ಆದರೆ ಈ ಮೌಲ್ಯ 2 ಅಥವಾ ಅದಕ್ಕಿಂತ ಹೆಚ್ಚಿದ್ದರೆ ವೈರಾಣುಗಳು ಅಪಾಯಕಾರಿ ಸ್ಥಿತಿಯಲ್ಲಿ ಹರಡುತ್ತಿವೆ ಎಂದರ್ಥ’ ಎಂದು ಡಾ| ರಮಣ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.