ಚೀನ ವಿರುದ್ಧ ಅಮೆರಿಕದಲ್ಲಿ 20 ಲಕ್ಷ ಕೋಟಿ ಡಾಲರ್‌ನ ದಾವೆ
Team Udayavani, Mar 25, 2020, 2:05 AM IST
ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನ ನಡುವಿನ ಸಮರ ಮುಂದುವರಿದಿದೆ. ಈ ವೈರಸ್‌ನ ಮೂಲ ಯಾವುದು ಎಂಬ ಬಗ್ಗೆ ಅನೇಕ ಥಿಯರಿಗಳು ಹುಟ್ಟಿಕೊಂಡಿರುವಂತೆಯೇ, ಅಮೆರಿಕದ ನ್ಯಾಯವಾದಿ ಅದು ಚೀನದ ಅಧಿಕಾರಿಗಳು ಅಭಿವೃದ್ಧಿ ಪಡಿಸಿದ ಜೈವಿಕ ಅಸ್ತ್ರ ಎಂದು ಆರೋಪಿಸಿ, ಚೀನದ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡಿದ್ದಾರೆ.
ವಕೀಲ ಲ್ಯಾರಿ ಕ್ಲೇಮನ್ ಹಾಗೂ ಅವರ ಫ್ರೀಡಮ್ ವಾಚ್ ಸಂಸ್ಥೆ, ಟೆಕ್ಸಾಸ್ ನ ಬಝ್ ಫೋಟೋಸ್ ಎಂಬ ಕಂಪೆನಿಯ ಜತೆಗೂಡಿ ಈ ಮೊಕದ್ದಮೆ ಹೂಡಿದ್ದಾರೆ. ಚೀನ ಸರಕಾರ, ಚೀನ ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ಅದರ ನಿರ್ದೇಶಕ ಶಿ ಝೆಂಗ್ಲಿ, ಚೀನ ಸೇನೆಯ ಮೇ.ಜ. ಚೆನ್ ವೈ ವಿರುದ್ಧ 20 ಲಕ್ಷಕೋಟಿ ಡಾಲರ್ ದಾವೆ ಹೂಡಲಾಗಿದೆ. ಈ ಮೊತ್ತವು ಚೀನದ ಜಿಡಿಪಿಗಿಂತಲೂ (ಒಟ್ಟು ದೇಶೀಯ ಉತ್ಪನ್ನ) ಹೆಚ್ಚಿನದ್ದಾಗಿದೆ.
ಸಾವಿರಾರು ಮಂದಿಯ ಸಾವಿಗೆ ಪ್ರಚೋದನೆ, ಭಯೋತ್ಪಾದಕರಿಗೆ ನೆರವು, ಅಮೆರಿಕದ ನಾಗರಿಕರ ಸಾವು ಹಾಗೂ ನಷ್ಟವನ್ನುಂಟು ಮಾಡುವ ಸಂಚು, ನಿರ್ಲಕ್ಷ್ಯ, ಹಲ್ಲೆ ಸಹಿತ ಹಲವು ಆರೋಪಗಳನ್ನು ಚೀನ ಮೇಲೆ ಹೊರಿಸಲಾಗಿದೆ. ವೈರಸ್ ಅನ್ನು ವುಹಾನ್ ವೈರಾಲಜಿ ಸಂಸ್ಥೆಯಿಂದಲೇ ಬಿಡುಗಡೆ ಮಾಡಲಾಗಿದೆ. ಜನಸಮೂಹವನ್ನು ಕೊಲ್ಲಲೆಂದೇ ಚೀನ ಇಂಥ ವೈರಸ್ ಅಭಿವೃದ್ಧಿಪಡಿಸಿದೆ ಎಂದೂ ಆರೋಪಿಸಲಾಗಿದೆ.
ಅಲ್ಲದೆ ಕೋವಿಡ್ 19 ವೈರಸ್ ಕುರಿತು ಹೊರಜಗತ್ತಿಗೆ ಮಾಹಿತಿ ನೀಡಿದ ಚೀನದ ವೈದ್ಯರು ಮತ್ತು ಸಂಶೋಧಕರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಮೇ.ಜ. ಚೆನ್ ಅವರು ತಮ್ಮನ್ನು ತಾವು ವೈರಸ್‌ನಿಂದ ರಕ್ಷಿಸಿಕೊಳ್ಳುವ ಸಲುವಾಗಿ, ಇನ್ನೂ ಪರೀಕ್ಷೆಯನ್ನೇ ನಡೆಸದಂಥ ಲಸಿಕೆಯನ್ನು ತಮಗೆ ಮತ್ತು ತಮ್ಮ ತಂಡದ 6 ಸದಸ್ಯರಿಗೆ ಇಂಜೆಕ್ಟ್ ಮಾಡಿ ಕೊಂಡಿದ್ದಾರೆ. ಈ ಎಲ್ಲ ಆರೋಪಿಗಳೂ ಒಟ್ಟಿಗೇ ಸೇರಿ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಂಚು ರೂಪಿಸಿದ್ದಾರೆ. ಶತ್ರುರಾಷ್ಟ್ರಗಳ ಜನಸಮೂಹಕ್ಕೆ ಈ ವೈರಸ್ ಬಿಟ್ಟಿದೆ ಎಂದೂ ಲ್ಯಾರಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.