ಚಿಣ್ಣರಿಗೆ ಹೆಚ್ಚಾಗುತ್ತಿದೆ ಸೋಂಕು
Team Udayavani, Sep 3, 2021, 6:50 AM IST
ಹೊಸದಿಲ್ಲಿ: ಕೇರಳದಲ್ಲಿ ಸೋಂಕು ಪ್ರಕರಣ ಹೆಚ್ಚಾಗುತ್ತಿ ರುವುದು ಆತಂಕಕ್ಕೆ ಕಾರಣವಾಗುತ್ತಿರುವಂತೆಯೇ ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ದ್ರಾವಿಡ ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಹೆಚ್ಚಾಗುತ್ತಿದೆ.
ತಮಿಳುನಾಡು ರಾಜ್ಯ ಆರೋಗ್ಯ ಇಲಾಖೆಯ ವರದಿ ಪ್ರಕಾರ ಜನವರಿಯಲ್ಲಿ 20,326 ಮಕ್ಕಳಿಗೆ ಸೋಂಕು ದೃಢವಾಗಿತ್ತು. ಮೇಯಲ್ಲಿ 2ನೇ ಅಲೆ ಅವಧಿಯಲ್ಲಿ 71,555 ಮಕ್ಕಳಲ್ಲಿ ಅದು ಕಂಡುಬಂದಿತ್ತು. ಒಟ್ಟಾರೆಯಾಗಿ ಹೇಳುವು ದಿದ್ದರೆ ಸೋಂಕು ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ ಮಕ್ಕಳ ಲ್ಲಿನ ಪ್ರಕರಣಗಳ ಸಂಖ್ಯೆ ಜೂನ್‌ನಲ್ಲಿ ಶೇ.8.8, ಜುಲೈಯಲ್ಲಿ ಶೇ.9.5, ಆಗಸ್ಟ್‌ನಲ್ಲಿ ಶೇ.10ಕ್ಕೆ ಏರಿಕೆಯಾಗಿದೆ. ಎಂಟು ತಿಂಗಳ ಅವಧಿಯಲ್ಲಿ 24 ಮಕ್ಕಳು ಸೋಂಕಿನಿಂದ ಅಸುನೀಗಿದ್ದಾರೆ.
ನಿಲ್ಲದ ಏರಿಕೆ :
ಕೇರಳದಲ್ಲಿ ಗುರುವಾರ 32,097 ಹೊಸ ಪ್ರಕರಣ ದೃಢಪಟ್ಟಿದೆ ಮತ್ತು 188 ಮಂದಿ ಅಸುನೀಗಿದ್ದಾರೆ. ಇದರಿಂದಾಗಿ ರಾಜ್ಯದ ಒಟ್ಟು ಸೋಂಕು ಸಂಖ್ಯೆ 41 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮೊದಲ ಸೋಂಕು ಕಳೆದ ವರ್ಷ ದೃಢಪಟ್ಟಿದ್ದು, ರಾಜ್ಯದಲ್ಲಿಯೇ. ಸೋಂಕು ಪಾಸಿಟಿವಿಟಿ ಪ್ರಮಾಣ ಶೇ.18.41 ಆಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ 30 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢವಾಗುತ್ತಿದೆ.
ಪ್ರಯೋಗಕ್ಕೆ ಅನುಮತಿ :
ಕೋರ್ಬಿವ್ಯಾಕ್ಸ್ ಲಸಿಕೆಯನ್ನು 5ರಿಂದ 18 ವರ್ಷದೊಳಗಿನವರ ಮೇಲೆ 2 ಮತ್ತು 3ನೇ ಹಂತದ ಪ್ರಯೋಗ ನಡೆಸಲು ಹೈದರಾ ಬಾದ್‌ನ ಬಯಲಾಜಿಕಲ್ ಇ ಕಂಪ ನಿಗೆ ಡಿಸಿಜಿಐ ಅನುಮತಿ ನೀಡಿದೆ. ವಿಷಯ ತಜ್ಞರ ಸಮಿತಿಯ ಶಿಫಾ ರಸಿನ ಮೇರೆಗೆ ಒಪ್ಪಿಗೆ ನೀಡಲಾ ಗಿದ್ದು, ಒಟ್ಟು 10 ಪ್ರದೇಶಗಳಲ್ಲಿ ಈ ಪ್ರಯೋಗ ನಡೆಯಲಿದೆ. ಇದೇ ವೇಳೆ, ಝೈಡಸ್ ಕ್ಯಾಡಿ ಲಾದ ಸೂಜಿ ರಹಿತ ಕೊರೊನಾ ಲಸಿಕೆ ಝೈಕೋವ್-ಡಿ ತುರ್ತು ಬಳಕೆಗೆ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು, ಅಕ್ಟೋಬರ್ ಮೊದಲ ವಾರದಿಂದಲೇ 12-18ರ ವಯೋಮಾನದ ಮಕ್ಕಳಿಗೆ ವಿತರಣೆ ಆರಂಭವಾಗಲಿದೆ.
ಆರ್‌ಟಿ-ಪಿಸಿಆರ್ ಕಡ್ಡಾಯ ;
ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸಾ$Ìನಾ, ಚೀನ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ಗಳಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯ ಗೊಳಿಸಲಾಗಿದೆ.
ಶೇ.16 ಮಂದಿಗೆ ಎರಡೂ ಡೋಸ್ ಲಸಿಕೆ ಪೂರ್ಣ :
ದೇಶಾದ್ಯಂತ ಶೇ.16ರಷ್ಟು ವಯಸ್ಕ ಜನಸಂಖ್ಯೆಗೆ ಕೊರೊನಾ ಸೋಂಕಿನ ಎರಡೂ ಡೋಸ್ ಲಸಿಕೆ ವಿತರಣೆ ಪೂರ್ಣಗೊಳಿಸ ಲಾಗಿದೆ. ಶೇ.54ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಪಡೆದು ಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಆಗಸ್ಟ್‌ನಲ್ಲೇ 18.38 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶಗಳಲ್ಲಿ ಶೇ.100ರಷ್ಟು ಮಂದಿಗೆ(18+ ಜನಸಂಖ್ಯೆ) ಮೊದಲ ಡೋಸ್ ವಿತರಣೆ ಪೂರ್ಣಗೊಂಡಿದೆ ಎಂದರು.
ಕೇರಳದಲ್ಲಿ 1 ಲಕ್ಷ ಸಕ್ರಿಯ ಪ್ರಕರಣ :
ಒಂದು ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಏಕೈಕ ರಾಜ್ಯವೆಂದರೆ ಅದು ಕೇರಳ. ಇನ್ನು, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ 10 ಸಾವಿರದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿವೆ. ಉಳಿದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಖ್ಯೆ 10 ಸಾವಿರಕ್ಕಿಂತ ಕೆಳಗಿದೆ ಎಂದೂ ಭೂಷಣ್ ಮಾಹಿತಿ ನೀಡಿದ್ದಾರೆ. ಜೂನ್ ತಿಂಗಳಲ್ಲಿ 279 ಜಿಲ್ಲೆಗಳಲ್ಲಿ ಪ್ರತೀ ದಿನ 100ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಆಗಸ್ಟ್ 30ರ ವೇಳೆಗೆ 42 ಜಿಲ್ಲೆಗಳಲ್ಲಿ ಮಾತ್ರ 100ಕ್ಕಿಂತ ಹೆಚ್ಚು ಕೇಸುಗಳು ಪತ್ತೆಯಾಗುತ್ತಿವೆ ಎಂದರು.
ಚೀನದ ಲಸಿಕೆ ತಿರಸ್ಕರಿಸಿದ ಉ.ಕೊರಿಯಾ! :
ಚೀನದ ಕೊರೊನಾ ಲಸಿಕೆ ಸೈನೋವ್ಯಾಕ್‌ನ 30 ಲಕ್ಷದಷ್ಟು ಡೋಸ್‌ಗಳನ್ನು ಉತ್ತರ ಕೊರಿಯಾ ತಿರಸ್ಕರಿಸಿದೆ. ಅಷ್ಟೇ ಅಲ್ಲ, ಈ ಲಸಿಕೆಯನ್ನು ಕೊರೊನಾದಿಂದ ತೀವ್ರ ಬಾಧೆಗೊಳಗಾದ ದೇಶಗಳಿಗೆ ನೀಡುವಂತೆ ತಿಳಿಸಿದೆ. ಉತ್ತರ ಕೊರಿಯಾವು ಕಳೆದ ವರ್ಷದ ಜನವರಿಯಲ್ಲೇ ತನ್ನೆಲ್ಲ ಗಡಿಗಳನ್ನೂ ಮುಚ್ಚಿ, ಚೀನದಿಂದ ಸೋಂಕು ತಮ್ಮ ದೇಶದೊಳಕ್ಕೆ ಪ್ರವೇಶಿಸದಂತೆ ಕ್ರಮ ಕೈಗೊಂಡಿತ್ತು. ಅಲ್ಲಿ ಈವರೆಗೆ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂದು ಉ. ಕೊರಿಯಾ ಹೇಳಿಕೊಂಡಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ
1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!
BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್!
Vladimir Putin; ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಲು ಭಾರತ ಅರ್ಹ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
MUST WATCH
ಹೊಸ ಸೇರ್ಪಡೆ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.