ಕೋವಿಡ್ ಅಬ್ಬರ: ಹೂವು, ಹಣ್ಣು ,ತರಕಾರಿ ವ್ಯಾಪಾರಿಗಳು ಕಂಗಾಲು
Team Udayavani, May 1, 2021, 8:30 PM IST
ಪಣಜಿ: ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ತರಕಾರಿ, ಹೂವು, ಹಣ್ಣು ಅಂಗಡಿಯಲ್ಲಿಯೇ ಕೊಳೆತುಹೋಗುವಂತಾಗಿತ್ತು. ಇದರಿಂದಾಗಿ ವ್ಯಾಪಾರಸ್ಥರು ಹೆಚ್ಚಿನ ನಷ್ಠ ಅನುಭವಿಸುವಂತಾಗಿತ್ತು. ಇದರಿಂದಾಗಿ ಪ್ರಸಕ್ತ ವರ್ಷವೂ ಕೂಡ ಇಂತಹ ವ್ಯಾಪಾರಿಗಳು ಅದೇ ಭೀತಿ ಎದುರಿಸುವಂತಾಗಿದೆ.
ಕರ್ನಾಟಕ ಮತ್ತು ಗೋವಾದಲ್ಲಿ ಸದ್ಯ ಲಾಕ್ಡೌನ್ ಜಾರಿಯಲ್ಲಿದ್ದರೂ ಕೂಡ ಕರ್ನಾಟಕದಿಂದ ಗೋವಾಕ್ಕೆ ಬರುವ ತರಕಾರಿ, ಹೂವು, ಹಣ್ಣು, ಹಾಲು, ಕಿರಾಣಿ ಸಾಮಾನು ಇವುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ.
ಆದರೆ ಗೋವಾದಲ್ಲಿ ಎಲ್ಲಾ ಮಾರುಕಟ್ಟೆ ಪ್ರದೇಶಗಳಲ್ಲಿ ಪೋಲಿಸರು ಹೆಚ್ಚಿನ ಕಟ್ಟೆಚ್ಚರ ವಹಿಸಿರುವುದರಿಂದ ಕರ್ನಾಟಕದಿಂದ ಅಗತ್ಯ ವಸ್ತುಗಳ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಿದ್ದರೂ ಕೂಡ ರಾಜ್ಯದ ವ್ಯಾಪಾರಸ್ಥರು ಗ್ರಾಹಕರ ಕೊರತೆ ಎದುರಿಸುವಂತಾಗಿದೆ.
ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಲಾಕ್ಡೌನ್ ಜಾರಿಯಾಗಿದ್ದರಿಂದ ಹೆಚ್ಚಿನ ನಷ್ಟ ಎದುರಿಸುವಂತಾಗಿತ್ತು. ಪ್ರಸಕ್ತವರ್ಷವೂ ಹಾಗೆಯೇ ಆಗುವುದಿಲ್ಲ ಎಂದು ಏನು ಗ್ಯಾರಂಟಿ…? ಇದರಿಂದಾಗಿ ಅಂಗಡಿಯಲ್ಲಿ ಹೆಚ್ಚಿನ ಸಾಮಾನುಗಳನ್ನು ತರಿಸಿಕೊಳ್ಳಲು ಕೂಡ ಭಯವಾಗುತ್ತದೆ ಎಂದು ಪಣಜಿ ಮಾರುಕಟ್ಟೆಯ ಹಲವು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.