ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?
Team Udayavani, Apr 23, 2021, 7:05 AM IST
ಹೊಸದಿಲ್ಲಿ: ಪ್ರತೀ ದಿನ 3 ಲಕ್ಷಕ್ಕೂ ಅಧಿಕ ಸೋಂಕು, ಚೇತರಿಕೆಯ ವೇಗವನ್ನು ಮೀರಿ ಬೆಳೆಯುತ್ತಿರುವ ಪೀಡಿತರ ಸಂಖ್ಯೆ, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ಆಮ್ಲಜನಕದ ಅಭಾವ, ಅಗತ್ಯ ಔಷಧ ಸಿಗದೆ ಅಲೆದಾಡುವ ಸಂಬಂಧಿಕರು, ಶ್ಮಶಾನಗಳಲ್ಲೂ ಸರತಿ…
– ಭಾರತವು “ಆರೋಗ್ಯ ತುರ್ತು ಪರಿಸ್ಥಿತಿ’ಯತ್ತ ವಾಲುವ ಲಕ್ಷಣ ಗೋಚ ರಿಸುತ್ತಿದೆ. ಕೊರೊನಾದ ಎರಡನೇ ಅಲೆಯು ನಿರೀಕ್ಷೆಗೆ ಮೀರಿದ ವೇಗದಲ್ಲಿ ವ್ಯಾಪಿಸುತ್ತಿದ್ದು, ದೇಶಾದ್ಯಂತ ಆರೋಗ್ಯ ಮೂಲಸೌಕರ್ಯಗಳ ಅಭಾವ ಸೃಷ್ಟಿಯಾಗಿದೆ.
ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ ಸಹಿತ ಬಹುತೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ರೋಗಿ ಗಳನ್ನು ಬದುಕಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, “ಇದು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ’ ಎಂದಿದೆ. ಆಮ್ಲಜನಕ ಪೂರೈಕೆ, ಔಷಧ ಸರಬರಾಜು, ಲಸಿಕೆ ವಿತರಣೆ ಮತ್ತು ಲಾಕ್‌ಡೌನ್ ಘೋಷಿಸುವ ಅಧಿಕಾರದ ಬಗ್ಗೆ “ರಾಷ್ಟ್ರೀಯ ಯೋಜನೆ’ ಸಿದ್ಧಪಡಿಸಿ ನಮ್ಮ ಮುಂದಿಡಿ ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಇಂದು ಮ್ಯಾರಥಾನ್ ಸಭೆ :
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಕೇಂದ್ರ -ರಾಜ್ಯ ಸರಕಾರಗಳು ಸೋಂಕು ಪೀಡಿತ ರಿಗೆ ನೆರವಾಗುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿವೆ. ಪ್ರಧಾನಿ ಮೋದಿ ಗುರುವಾರ ಆಮ್ಲಜನಕದ ಉತ್ಪಾದನೆ, ಪೂರೈಕೆಗೆ ಸಂಬಂಧಿಸಿ ಸಮಾಲೋಚನೆ ನಡೆಸಿದ್ದಾರೆ. ಶುಕ್ರವಾರ ಪ. ಬಂಗಾಲ ಭೇಟಿಯನ್ನು ರದ್ದು ಮಾಡಿರುವ ಅವರು ಕೊರೊನಾ ನಿಯಂತ್ರಣಕ್ಕಾಗಿ ಸರಣಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9ಕ್ಕೆ ಆಂತರಿಕ ಸಭೆ ನಡೆಸಲಿದ್ದು, 10ಕ್ಕೆ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಸಿಎಂಗಳ ಜತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ದೇಶದ ಪ್ರಮುಖ ಆಕ್ಸಿಜನ್ ಉತ್ಪಾದಕ ಕಂಪೆನಿಗಳ ಜತೆಗೂ ಸಭೆ ನಡೆಸಲಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ ಕೂಡ ಗುರುವಾರ ಸಚಿವರ ಜತೆ ಕೊರೊನಾ ನಿಯಂತ್ರಣ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಆಮ್ಲಜನಕದ ಸರಾಗ ಉತ್ಪಾದನೆ ಮತ್ತು ಸರಬ ರಾಜಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಗುರುವಾರ ವಿಪತ್ತು ನಿರ್ವಹಣ ಕಾಯ್ದೆಯನ್ನು ಜಾರಿ ಮಾಡಿ, ಹೊಸ ನಿರ್ದೇ ಶನ ನೀಡಿದೆ. ರಾಜ್ಯ ಗಡಿಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಆಮ್ಲಜನಕದ ಸರಬರಾಜು ಆಗುವಂತೆ ನೋಡಿಕೊಳ್ಳಿ. ಯಾವುದೇ ಸಮಸ್ಯೆ ಉಂಟಾದರೂ ಅದಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಯೇ ಹೊಣೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಎಚ್ಚರಿಸಿದ್ದಾರೆ.
ಕೋರ್ಟ್‌ಗಳ ಮಧ್ಯಪ್ರವೇಶ :
ಕೋವಿಡ್ ಆರ್ಭಟದಿಂದಾಗಿ ಹಲವು ರಾಜ್ಯಗಳು ತತ್ತರಿಸಿರುವಂತೆ ಸುಪ್ರೀಂ ಕೋರ್ಟ್ ಮಾತ್ರವಲ್ಲದೆ ದಿಲ್ಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕೋಲ್ಕತ್ತಾ, ಗುಜರಾತ್, ಅಲಹಾಬಾದ್ ಹೈಕೋರ್ಟ್ ಸಹಿತ ಹಲವು ನ್ಯಾಯಾಲಯಗಳು ಕೊರೊನಾ ಸಂಪನ್ಮೂಲಗಳ ಕೊರತೆ ಕುರಿತು ವಿಚಾರಣೆ ನಡೆಸಿವೆ. ವಿಚಾರಣೆ ವೇಳೆ ನ್ಯಾಯಾಲಯಗಳು ನೀಡಿರುವ ಸೂಚನೆಗಳು ಇಂತಿವೆ:
ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಆಮ್ಲ ಜನಕ ಪೂರೈಕೆ, ಅಗತ್ಯ ಔಷಧ ಮತ್ತು ಲಸಿಕೆ ವಿತರಣೆ ವಿಧಾನದ ಕುರಿತ ರಾಷ್ಟ್ರೀಯ ಯೋಜನೆಯನ್ನು ಕೂಡಲೇ ನಮ್ಮ ಮುಂದಿರಿಸಿ.– ಸುಪ್ರೀಂ ಕೋರ್ಟ್
ಪರಿಸ್ಥಿತಿ ನೋಡಿದರೆ ಸರಕಾರಗಳಿಗೆ ಜನರ ಪ್ರಾಣದ ಬಗ್ಗೆ ಚಿಂತೆಯೇ ಇಲ್ಲ ಎಂಬಂತೆ ಕಾಣುತ್ತಿದೆ. ಹೇಗಾದರೂ ಸರಿ… ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಿ. – ದಿಲ್ಲಿ ಹೈಕೋರ್ಟ್
ಇದು ತುರ್ತು ಪರಿಸ್ಥಿತಿ ಎಂದು ಅರ್ಥ ಮಾಡಿಕೊಳ್ಳಿ. ರೆಮಿಡಿಸಿವಿರ್‌ನಂಥ ಔಷಧ ಗಳ ಲಭ್ಯತೆ, ಬಳಕೆ ಬಗ್ಗೆ ನಾಗರಿಕರಿಗೆ ಸಲಹೆ ನೀಡಿ. ಹಿರಿಯ ನಾಗರಿಕರಿಗೆ ಮನೆ ಯಲ್ಲೇ ಲಸಿಕೆ ನೀಡಲು ವ್ಯವಸ್ಥೆ ಮಾಡಿ.– ಬಾಂಬೆ ಹೈಕೋರ್ಟ್
ಸರಕಾರವು ತುರ್ತು ಸಭೆ ಕರೆದು, ರೆಮಿಡಿಸಿವಿರ್ ಔಷಧ ವಿತರಣೆಗಾಗಿನಿಯಮ ರೂಪಿಸ ಬೇಕು. ಅಗತ್ಯವಿರುವ ಪೀಡಿತರಿಗೆ ಲಭ್ಯವಾಗುವಂತೆ ನೋಡಿಕೊಳ್ಳ ಬೇಕು.– ಅಲಹಾಬಾದ್ ಹೈಕೋರ್ಟ್
ಪ್ರಕರಣ ಭಾರೀ ಏರಿಕೆ :
ರಾಜ್ಯದಲ್ಲಿ ಹೊಸ ಪೀಡಿತರ ಸಂಖ್ಯೆ ಒಂದೇ ದಿನ 25 ಸಾವಿರದ ಗಡಿ ದಾಟಿ ದರೆ, ದೇಶದಲ್ಲಿ ಇದೇ ಮೊದಲ ಬಾರಿಗೆ 3.14 ಲಕ್ಷ ಮಂದಿಯ ವರದಿ ಪಾಸಿಟಿವ್ ಆಗಿದೆ. ಗುರುವಾರ ರಾಜ್ಯದಲ್ಲಿ 25,795 ಮಂದಿಗೆ ಸೋಂಕು ತಗುಲಿದ್ದು, 123 ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರಿ ನಲ್ಲಿಯೇ 15,244 ಮಂದಿಗೆ ಸೋಂಕು ತಗುಲಿದ್ದರೆ 68 ಮಂದಿ ಮೃತಪಟ್ಟಿದ್ದಾರೆ.
ಆಮ್ಲಜನಕ ಖಾಲಿ :
ಸಣ್ಣಪುಟ್ಟ ಆಸ್ಪತ್ರೆಗಳು ಮಾತ್ರವಲ್ಲ, ದಿಲ್ಲಿಯ ದೊಡ್ಡ ಆಸ್ಪತ್ರೆಗಳಲ್ಲೂ ಆಮ್ಲ ಜನಕದ ಅಭಾವ ತಲೆದೋರಿದೆ. “ರೋಗಿ ಗಳಿಗೆ ಬದುಕು ನೀಡಬೇಕಾದ ನಾವು ಆಮ್ಲಜನಕ ಕೂಡ ಒದಗಿಸಲು ಸಾಧ್ಯ ವಾಗದೆ ಅಸಹಾಯಕರಾಗಿದ್ದೇವೆ’ ಎಂದು ವೈದ್ಯರೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗಳ ಹೊರಗೆ “ಬೆಡ್ ಖಾಲಿ ಇಲ್ಲ’ ಎಂಬ ಫಲಕ ತೂಗುಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.