ಸಿಗದ ಆ್ಯಂಬುಲೆನ್ಸ್ : ಕಾರ್ ಟಾಪ್ ಮೇಲೆ ತಂದೆಯ ಶವ
Team Udayavani, Apr 26, 2021, 4:24 PM IST
ಆಗ್ರಾ : ದೇಶದಲ್ಲಿ ವ್ಯಾಪಿಸಿರುವ ಕೋವಿಡ್ ಸೋಂಕು ತನ್ನ ಬೀಕರತೆಯನ್ನು ಪ್ರದರ್ಶಿಸುತ್ತಿದೆ. ಒಂದು ಕಡೆ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಅಭಾವ ಎದುರಾಗಿದ್ದರೆ, ಮತ್ತೊಂದು ಕಡೆ ಸೋಂಕಿಗೆ ಬಲಿಯಾದವರ ಶವ ಸಾಗಿಸಲು ಆ್ಯಂಬುಲೆನ್ಸ್ ವಾಹನಗಳು ಇಲ್ಲದಂತಾಗಿದೆ.
ಆಗ್ರಾದ ಮೋಕ್ಷಧಾಮ ಎಂಬಲ್ಲಿ ಆ್ಯಂಬುಲೆನ್ಸ್ ಸಿಗದಿದ್ದರಿಂದ ಕಾರಿನ ಟಾಪ್ ಮೇಲೆ ತಂದೆಯ ಶವ ಇಟ್ಟು ಸ್ಮಶಾನಕ್ಕೆ ತೆರಳಿದ ಘಟನೆ ನಡೆದಿದೆ.
ಆಗ್ರಾದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸೌಕರ್ಯಗಳಿಗೆ ಭಾರೀ ಅಭಾವ ಉಂಟಾಗ್ತಿದೆ. ಈ ನಡುವೆ ತಂದೆಯ ಶವ ಸಾಗಿಸಲು ಪುತ್ರ ಪಟ್ಟ ಪಾಡನ್ನ ಕಂಡ ಅನೇಕರ ಕಣ್ಣಲ್ಲಿ ನೀರು ಜಿನುಗಿದೆ.
ಆಗ್ರಾ ಪಟ್ಟಣದಲ್ಲಿ ಪ್ರತಿದಿನ 600ಕ್ಕೂ ಹೆಚ್ಚು ಕೇಸ್ಗಳು ವರದಿಯಾಗುತ್ತಿದೆ. ಕಳೆದ 9 ದಿನಗಳಲ್ಲಿ ಆಗ್ರಾದಲ್ಲಿ 35 ಮಂದಿ ಕೋವಿಡ್ ಬಲಿಯಾಗಿದ್ದಾರೆ. ಆಂಬುಲೆನ್ಸ್ ಕೊರತೆಯಿಂದಾಗಿ ಕೋವಿಡ್ ಸೋಂಕಿತರ ಶವವನ್ನ ಸಾಗಿಸಲು ಕುಟುಂಬಸ್ಥರು ಆರು ತಾಸುಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.