![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 9, 2022, 7:35 AM IST
ಹೊಸದಿಲ್ಲಿ: ದೇಶದಲ್ಲಿ ಸೋಂಕಿನ 4ನೇ ಅಲೆ ಅಪ್ಪಳಿ ಸುವ ಸಾಧ್ಯತೆ ಇಲ್ಲ ಎಂದು ಖ್ಯಾತ ವೈರಾಲಜಿಸ್ಟ್ ಡಾ| ಟಿ. ಜಾಕೋಬ್ ಅಭಿಪ್ರಾಯ ಪಟ್ಟಿದ್ದಾರೆ. ವಿಭಿನ್ನವಾಗಿ ವರ್ತಿಸು ವಂಥ ಅನಿರೀಕ್ಷಿತ ರೂಪಾಂತರಿ ಕಂಡುಬಾರ ದಿ ದ್ದರೆ ಖಂಡಿತಾ 4ನೇ ಅಲೆಯ ಭೀತಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಮೂರನೇ ಅಲೆಯು ಈಗ ಸಂಪೂರ್ಣವಾಗಿ ಮುಗಿದಿದೆ. ಜನವರಿ ಯಲ್ಲಿ 3.47 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಜ.21ರ ಬಳಿಕ ದೈನಂದಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ. ಪ್ರಸ್ತುತ ಸನ್ನಿವೇಶ ನೋಡಿದರೆ, ಭಾರತವು ಈಗ ಸೋಂಕಿನ ಎಂಡೆಮಿಕ್ ಹಂತಕ್ಕೆ ಬಂದಿದೆ. ಕಳೆದ 4 ವಾರಗಳಿಂದಲೂ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದು, ಸ್ಥಿರವಾಗುತ್ತಾ ಬಂದಿದೆ.
662 ದಿನಗಳಲ್ಲೇ ಕನಿಷ್ಠ: ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 3,993 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 662 ದಿನಗಳಲ್ಲೇ ದಾಖಲಾದ ಕನಿಷ್ಠ ಪ್ರಕರಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಂದು ದಿನದಲ್ಲಿ 108 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಒಟ್ಟಾರೆ 5,15,210ಕ್ಕೇರಿದೆ ಎಂದೂ ಮಾಹಿತಿ ನೀಡಿದೆ.
ಚೀನದ ಲಸಿಕೆಯಿಂದ ಬ್ಲಿಡ್ ಕ್ಯಾನ್ಸರ್!
ಬೀಜಿಂಗ್: ಚೀನ ತಯಾರಿಸಿರುವ ಲಸಿಕೆ ಪಡೆಯುವುದ ರಿಂದ ಕೊರೊ ನಾಕ್ಕಿಂತ ಭೀಕರ ವಾದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಯಿದೆ ಎಂದು ವರದಿಯಾಗಿದೆ. ಇಂತ ದ್ದೊಂದು ವರದಿಯನ್ನು ಚೀನದ ರಾಷ್ಟ್ರೀಯ ಆರೋಗ್ಯ ಸಮಿತಿಯೇ (ಎನ್‌ಎಚ್‌ಸಿ) ಬಿಡುಗಡೆ ಮಾಡಿದೆ. ಸಿನೋವ್ಯಾಕ್ ಮತ್ತು ಸಿನೋಫಾರ್ಮ್ ಲಸಿಕೆಗಳಿಂದ ಮನುಷ್ಯನ ದೇಹದಲ್ಲಿ ಲ್ಯುಕೆಮಿಯಾ ಹೆಸರಿನ ರಕ್ತದ ಕ್ಯಾನ್ಸರ್ ಉಂಟಾಗ ಬಹುದು. ಈ ಕಾಯಿಲೆಗೆ ತುತ್ತಾಗುವವರ ಬೋನ್ ಮ್ಯಾರೋದಲ್ಲಿ ಬಿಳಿ ರಕ್ತದ ಕಣ ಅಧಿಕವಾಗಿ ಉತ್ಪತ್ತಿಯಾಗಿ ದೇಹವನ್ನು ಹಾಳು ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸ ಲಾಗಿದೆ. ಹಾಗಾಗಿ ಈ ಲಸಿಕೆಯ ಬಗ್ಗೆ ಎಚ್ಚರವಿರಲಿ ಎಂದು ದೇಶದ 18 ಪ್ರಾಂತ್ಯಗಳಿಗೆ ಎನ್‌ಎಚ್‌ಸಿ ಸೂಚನೆ ನೀಡಿದೆ. ಚೀನದ 2 ಲಸಿಕೆಗಳೇ ಜಗತ್ತಿನಾದ್ಯಂತ ಹೆಚ್ಚಾಗಿ ರಫ್ತಾಗಿವೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.