ಮತ್ತೆ ಕೋವಿಡ್ ಜಿಗಿತ; ಹಲವು ರಾಜ್ಯಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಏರಿಕೆ
ಎರಡನೇ ಅಲೆಗೆ ಮುನ್ನ ನಾವೂ ಎಚ್ಚರಿಕೆ ವಹಿಸೋಣ
Team Udayavani, Nov 21, 2020, 6:35 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹಬ್ಬಗಳ ಋತು ಮುಗಿಯುತ್ತಿದ್ದಂತೆಯೇ ದೇಶಾದ್ಯಂತ ಕೊರೊನಾ ಕಾಟ ಮತ್ತೆ ಆರಂಭವಾಗಿದೆ. ಹಲವು ರಾಜ್ಯಗಳಲ್ಲಿ ಸೋಂಕುಪೀಡಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದ್ದು, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರಗಳು ಮತ್ತೂಮ್ಮೆ ನಿರ್ಬಂಧಗಳ ಮೊರೆ ಹೋಗುತ್ತಿವೆ.
ಇನ್ನೊಂದೆಡೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿ ಕೊಂಡಿರುವ ಕೇಂದ್ರ ಸರಕಾರ ಇನ್ನಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಂಡವನ್ನು ಕಳುಹಿಸಲು ಚಿಂತನೆ ನಡೆಸಿದೆ. ಗುರುವಾರವಷ್ಟೇ ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಣಿಪುರಕ್ಕೆ ಕೇಂದ್ರ ತಂಡ ತೆರಳಿ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಿದೆ.
ಶಾಲೆ ತೆರೆಯುವುದಿಲ್ಲ
ನ. 23ರಿಂದ ಶಾಲೆಗಳು ಪುನಾರಂಭವಾಗಲಿವೆ ಎಂದು ಬೃಹನ್ಮುಂಬಯಿ ಮಹಾನಗರಪಾಲಿಕೆ ಘೋಷಿಸಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲೆ ತೆರೆಯುವ ನಿರ್ಧಾರ ವಾಪಸ್ ಪಡೆಯಲಾಗಿದೆ.
ಪರೀಕ್ಷೆ ಹೆಚ್ಚಳ
ಮಹಾರಾಷ್ಟ್ರದ ಔರಂಗಾಬಾದ್ ಪ್ರದೇಶದಲ್ಲಿ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಆಕ್ಸಿಜನ್ ಟ್ಯಾಂಕ್‌ಗಳನ್ನೂ ಅಳವಡಿಸಲಾಗುತ್ತಿದೆ. ಸಮರೋಪಾದಿಯಲ್ಲಿ ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು, ಪರೀಕ್ಷೆ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ದಿಲ್ಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅಲ್ಲಿಂದ ಮುಂಬಯಿಗೆ ತೆರಳುವ ರೈಲುಗಳು, ವಿಮಾನಗಳಿಗೆ ನಿರ್ಬಂಧ ಹೇರುವ ಕುರಿತೂ ಸರಕಾರ ಚಿಂತನೆ ನಡೆಸಿದೆ.
ನ. 30ರ ವರೆಗೆ ರಜೆ: ಹರಿಯಾಣದಲ್ಲಿ ಸರಕಾರ ತಿಂಗಳ ಆರಂಭದಲ್ಲಿ ಶಾಲೆಗಳನ್ನು ತೆರೆದಿತ್ತು. ಈಗ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಸರಕಾರವು ನ. 30ರ ವರೆಗೆ ಎಲ್ಲ ಖಾಸಗಿ, ಸರಕಾರಿ ಶಾಲೆಗಳಿಗೆ ರಜೆ ಘೋಷಿಸಿದೆ.
ಗಡಿಯಲ್ಲೇ ಪರೀಕ್ಷೆ: ದಿಲ್ಲಿಯಲ್ಲಿ ಸೋಂಕಿನ 3ನೇ ಅಲೆ ಕಾಣಿಸಿಕೊಂಡು ಜನರನ್ನು ಭೀತಿಗೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ನೋಯ್ಡಾ, ಫರೀದಾಬಾದ್, ಗುರು ಗ್ರಾಮಕ್ಕೆ ದಿಲ್ಲಿಯಿಂದ ಬರುವ ಎಲ್ಲ ರನ್ನೂ ಶುಕ್ರವಾರದಿಂದಲೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಹರಿಯಾಣ ಸಚಿವರಿಗೆ ಲಸಿಕೆ
ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಶುಕ್ರವಾರ ಆರಂಭವಾಗಿದ್ದು, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್(67) ಅವರೇ ಲಸಿಕೆಯ ಮೊದಲ ಪ್ರಯೋ ಗಕ್ಕೆ ಒಳಗಾಗಿದ್ದಾರೆ. ಅಂಬಾಲಾ ಕಂಟೋನ್ಮೆಂಟ್‌ನ ಸಿವಿಲ್ ಆಸ್ಪತ್ರೆಯಲ್ಲಿ ಬಿಜೆಪಿ ಹಿರಿಯ ನಾಯಕನಿಗೆ ಮೊದಲ ಡೋಸ್ ನೀಡಲಾಗಿದೆ. ಅವರು ಸ್ವಯಂಪ್ರೇರಿತವಾಗಿ ಲಸಿ ಕೆಯ ಪ್ರಯೋಗಕ್ಕೆ ಒಳಗಾಗಲು ಮುಂದೆ ಬಂದಿದ್ದರು. ಈ ಮಧ್ಯೆ ಗುರುವಾರದಿಂದ ಶುಕ್ರವಾರದ ನಡು ವಣ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 45,882 ಮಂದಿಗೆ ಸೋಂಕು ದೃಢಪಟ್ಟಿದ್ದು, 584 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ಪತ್ರ; ರಾಜಕೀಯ ನಾಯಕರೇ ಗುರಿ!
“ಪತ್ರ ಬಂದರೆ ಅದನ್ನು ತೆರೆಯು ವಾಗ ಎಚ್ಚರವಿರಲಿ. ಆ ಪತ್ರಕ್ಕೆ ಕೊರೊನಾ ಸೋಂಕುಪೀಡಿತನ ಉಗುಳು, ಕಫ ಮತ್ತಿತರ ಅಂಶ ಗಳನ್ನು ಸವರಿರಬಹುದು. ಅದರ ಮೂಲಕ ನಿಮಗೂ ಸೋಂಕು ತಗುಲಬಹುದು!’ ಅಂತಾ ರಾಷ್ಟ್ರೀಯ ಪೊಲೀಸ್ ಸಂಸ್ಥೆಯಾದ ಇಂಟರ್‌ಪೋಲ್ ಹಲವು ದೇಶಗಳ ಗಣ್ಯರನ್ನು ಉದ್ದೇಶಿಸಿ ಹೀಗೊಂದು ಎಚ್ಚರಿಕೆ ನೀಡಿದೆ. “ಕೊರೊನಾ ವೈರಸ್ ಲೇಪಿತ ಪತ್ರ’ಗಳ ಮೂಲಕ ಭಾರತ ಸಹಿತ ವಿವಿಧ ದೇಶಗಳ ಪ್ರಮುಖ ರಾಜಕೀಯ ನಾಯಕರನ್ನು ಗುರಿ ಮಾಡಲು ಸಂಚು ನಡೆದಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಇಂಟರ್‌ಪೋಲ್ ಹೊರಹಾಕಿದೆ. ಉದ್ದೇಶಪೂರ್ವಕವಾಗಿ ರಾಜ ಕೀಯ ಗಣ್ಯರಿಗೆ ಸೋಂಕು ತಗ ಲಿಸಲು ಸಂಚು ನಡೆದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತ ಮತ್ತು 193 ಇತರ ದೇಶಗಳಿಗೆ ಇಂಟರ್‌ಪೋಲ್ ಸಂದೇಶ ರವಾನಿಸಿದೆ. ಜತೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಅಗತ್ಯವಿರುವ ಮಾರ್ಗಸೂಚಿಯನ್ನೂ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.