ಎ.1ರಿಂದ ನಿರ್ಬಂಧ ಮುಕ್ತ; ಎರಡು ವರ್ಷ ಬಳಿಕ ಘೋಷಣೆ; ಆದರೆ ಸದ್ಯಕ್ಕಿಲ್ಲ ಮಾಸ್ಕ್ ಮುಕ್ತಿ
ವಿಪತ್ತು ನಿರ್ವಹಣ ಕಾಯ್ದೆಯಡಿಯ ಕೋವಿಡ್ ನಿರ್ಬಂಧ ತೆರವು
Team Udayavani, Mar 24, 2022, 7:00 AM IST
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಲಸಿಕೆ ವಿತರಣೆ, ಮಾರ್ಗಸೂಚಿಗಳ ಪಾಲನೆ, ಮುನ್ನೆಚ್ಚರಿಕೆ ಮತ್ತಿತರ ಕ್ರಮಗಳಿಂದಾಗಿ ಭಾರತವು ಕೊರೊನಾಮುಕ್ತವಾಗುವತ್ತ ಹೆಜ್ಜೆಯಿಡುತ್ತಿದೆ. ಅದಕ್ಕೆ ಪೂರಕವೆಂಬಂತೆ, ಇನ್ನೊಂದು ವಾರದಲ್ಲಿ ದೇಶಾದ್ಯಂತ ಇರುವ ಎಲ್ಲ ನಿರ್ಬಂಧಗಳೂ ತೆರವಾಗಲಿವೆ. ಆದರೆ, ಮಾಸ್ಕ್ ಧಾರಣೆ ಅಗತ್ಯವಾಗಿದೆ.
ಸೋಂಕಿನ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣ ಕಾಯ್ದೆಯಡಿ ಇದ್ದ ಎಲ್ಲ ನಿರ್ಬಂಧಗಳು ಮಾ.31ಕ್ಕೆ ಕೊನೆಯಾಗಲಿವೆ ಎಂದು ಬುಧವಾರ ಕೇಂದ್ರ ಸರ ಕಾರ ಘೋಷಿಸಿದೆ. ಕೋವಿಡ್ ಸುರಕ್ಷಾ ಕ್ರಮವಾಗಿ ಇನ್ನು ಮುಂದೆ ಈ ಕಾಯ್ದೆ ಯನ್ನು ಜಾರಿ ಮಾಡಬೇಕಾದ ಅಗತ್ಯವಿಲ್ಲ. ಆದರೆ ಎಚ್ಚರ ವಹಿಸುವುದು ಅಗತ್ಯ. ಜತೆಗೆ ಮಾಸ್ಕ್ ಧಾರಣೆ ನಿಯಮ ಮುಂದು ವರಿಯಲಿದೆ ಎಂದೂ ಸ್ಪಷ್ಟಪಡಿಸಿದೆ. ಮೊದಲ ಬಾರಿಗೆ ದೇಶ ವ್ಯಾಪಿ ಕೊರೊನಾ ಲಾಕ್‌ಡೌನ್ ಹೇರಿ ಗುರುವಾರಕ್ಕೆ 2 ವರ್ಷಗಳು ತುಂಬುತ್ತಿರುವಾಗಲೇ ಸರಕಾರದಿಂದ ಈ ಘೋಷಣೆ ಹೊರಬಿದ್ದಿದೆ.
ಎಲ್ಲ ರಾಜ್ಯಗಳಿಗೆ ಸೂಚನೆ
ಕೇಂದ್ರ ಗೃಹ ಸಚಿವಾಲಯದಡಿ ಬರುವ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ(ಎನ್‌ಡಿಎಂಎ)ವೇ ಎಲ್ಲ ರಾಜ್ಯ ಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಈ ಕುರಿತು ಸೂಚನೆ ನೀಡಿದೆ. ಎಲ್ಲ ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಸಿನೆಮಾ ಹಾಲ್‌ಗಳು, ರೆಸ್ಟೋರೆಂಟ್, ಬಾರ್, ಕ್ರೀಡಾ ಸಂಕೀರ್ಣ, ಜಿಮ್, ಸ್ಪಾ, ಈಜು ಕೊಳ, ಧಾರ್ಮಿಕ ಕೇಂದ್ರಗಳು ಶೇ.100ರ ಆಸನ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಲಸಿಕೆ ವಿತರಣೆ, ಮಾಸ್ಕ್ ಧರಿಸುವಿಕೆ, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತಿತರ ಕ್ರಮಗಳನ್ನು ಜನರು ಮುಂದುವರಿಸುವ ಮೂಲಕ ಸೋಂಕಿನ ಹೊಸ ಅಲೆಗಳನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದೂ ತಿಳಿಸಲಾಗಿದೆ.
ಒಮಿಕ್ರಾನ್‌ನ ಬಿಎ 2 ಎಂಬ ಹೊಸ ರೂಪಾಂತರಿಯು ಚೀನ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಅಬ್ಬರಿಸುತ್ತಿದ್ದು, ಹಲವೆಡೆ ಲಾಕ್‌ಡೌನ್ ಕೂಡ ಜಾರಿಯಾಗುತ್ತಿರುವ ನಡುವೆಯೇ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿರುವುದು ವಿಶೇಷ.
ಮುಂಬಯಿಯಲ್ಲಿ ದಂಡವಿಲ್ಲ
ಮಾಸ್ಕ್ ಧಾರಣೆ ಮುಂದುವರಿಯಲಿದೆ ಎಂದು ಕೇಂದ್ರ ಹೇಳಿದ್ದರೂ ಮುಂಬಯಿ ನಗರವಾಸಿಗಳಿಗೆ ಅಲ್ಲಿನ ಪಾಲಿಕೆಯು ಸಿಹಿಸುದ್ದಿ ನೀಡಿದೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ನಿಯಮವನ್ನು ತೆಗೆದುಹಾಕಲಾಗಿದೆ ಬಿಎಂಸಿ ತಿಳಿಸಿದೆ.
1,778 ಹೊಸ ಪ್ರಕರಣ
ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,778 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 62 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 800ರಷ್ಟಿದ್ದು, ಒಟ್ಟಾರೆ ಸೋಂಕಿನ ಶೇ.0.05ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
181 ಕೋಟಿ ಡೋಸ್ ಲಸಿಕೆ ಪೂರ್ಣ
ಕೊರೊನಾ ಸೋಂಕಿನ 3 ಅಲೆಗಳನ್ನು ನೋಡಿರುವ ಭಾರತವು ಈಗ ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಬಗೆಯನ್ನು ಅರಿತುಕೊಂಡಿದೆ. ಅಲ್ಲದೆ, ದೇಶದ ಲಸಿಕಾ ಅಭಿ ಯಾನವು ಈ ಸವಾಲು ಎದುರಿಸಲು ಮತ್ತಷ್ಟು ಧೈರ್ಯ ನೀಡಿದೆ. ಬುಧವಾರದವರೆಗೆ ದೇಶಾದ್ಯಂತ 181.89 ಕೋಟಿ ಡೋಸ್ ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈಗಾಗಲೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ.
2 ವರ್ಷಗಳ ಹಿಂದೆ ಜಾರಿ
ಕೊರೊನಾ ಸೋಂಕು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ವಿಪತ್ತು ನಿರ್ವಹಣ ಕಾಯ್ದೆಯ ನಿಬಂಧನೆಗಳನ್ನು ದೇಶವ್ಯಾಪಿ ಜಾರಿ ಮಾಡಲಾಗಿತ್ತು. ಈ ಕಾಯ್ದೆಯಡಿ ಕೇಂದ್ರ ಸರಕಾರ ಅನುಷ್ಠಾನ ಗೊಳಿಸಿದ್ದ ಕೊರೊನಾ ಸುರûಾ ಕ್ರಮಗಳ ಅವಧಿ ಮಾ.31ರಂದು ಮುಗಿಯಲಿದೆ.
ಕಾಯ್ದೆಯಲ್ಲೇನಿತ್ತು?
1. ವಿಪತ್ತು ನಿರ್ವಹಣ ಕಾಯ್ದೆ ಪ್ರಕಾರ, ಸರಕಾರದ ಆದೇಶ ಉಲ್ಲಂಘಿ ಸಿದರೆ 1 ವರ್ಷ ಜೈಲು, ದಂಡ ಅಥವಾ ಎರಡನ್ನೂ ವಿಧಿಸಬಹುದಿತ್ತು. ಗಂಭೀರ ಅಪರಾಧಗಳಾದರೆ 2 ವರ್ಷ ಜೈಲು ಶಿಕ್ಷೆ.
2. ಪರಿಹಾರ ಅಥವಾ ನೆರವಿಗಾಗಿ ಸುಳ್ಳು ಹೇಳಿ ದರೆ 2 ವರ್ಷ ಜೈಲು ಮತ್ತು ದಂಡ.
3. ಅಗತ್ಯ ಪರಿಕರಗಳು ಅಥವಾ ಹಣಕಾಸು ಅವ್ಯವಹಾರಕ್ಕೆ 2 ವರ್ಷ ಜೈಲು, ದಂಡ.
4. ವಿಪತ್ತಿನ ಕುರಿತು ಸುಳ್ಳು ಎಚ್ಚರಿಕೆ ಕೊಟ್ಟರೆ 2 ವರ್ಷ ಜೈಲು ಮತ್ತು ದಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.