ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?
Team Udayavani, Jan 16, 2021, 7:20 AM IST
ಯಾಕೆ ಕೋವಿಡ್ ಲಸಿಕೆ? :
ದೇಹದಲ್ಲಿ ರೋಗ ಪ್ರತಿಕಾಯಗಳನ್ನು ಹೆಚ್ಚಿಸುವ ಕಾರ ಣಕ್ಕೆ ಲಸಿಕೆ ನೀಡಲಾಗುತ್ತದೆ. ಇದು ಸೋಂಕಿತರ ಚಿಕಿತ್ಸೆಗಾಗಿ ನೀಡುವ ಔಷಧವಲ್ಲ.
ಯಾರಿಗೆ, ಎಷ್ಟು ಮಂದಿಗೆ ಲಸಿಕೆ? :
ಆರಂಭ ದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ. ಮೊದಲ ಲಸಿಕೆಯನ್ನು ಆಸ್ಪತ್ರೆಗಳ ಸ್ವತ್ಛತಾ/ ಡಿ ಗ್ರೂಪ್ ಸಿಬಂದಿಗೆ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿ 7.4 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಣಿಯಾಗಿದ್ದಾರೆ.
ಎಲ್ಲಿ ವಿತರಣೆ? :
ರಾಜ್ಯದ ಸರಕಾರಿ, ಖಾಸಗಿ ಆರೋಗ್ಯ ಕೇಂದ್ರ ಸೇರಿ ಒಟ್ಟು 242 ಕಡೆ ಶನಿವಾರ ಲಸಿಕೆ ವಿತರಿಸಲಾಗುತ್ತಿದೆ. ಅನಂತರ 2000ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕೆ ವಿತರಣೆ ಕಾರ್ಯನಡೆಯಲಿದೆ.
ಜನಸಾಮಾನ್ಯರಿಗೆ ಯಾವಾಗ? :
ಬಹುತೇಕ ಮಾರ್ಚ್‌ನಲ್ಲಿ ನಡೆಯುವ ಎರಡನೇ ಹಂತದ ಲಸಿಕಾ ವಿತರಣೆಯಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ನೀಡಲಾಗುತ್ತದೆ.
ಲಸಿಕೆ ವಿತರಣೆಗೆ ಏನೆಲ್ಲ ಕ್ರಮ? :
ಕೇಂದ್ರದಲ್ಲಿ 7 ಹಂತಗಳಲ್ಲಿ ಲಸಿಕೆ ವಿತರಣೆ ಚಟುವಟಿಕೆ ನಡೆಯುತ್ತದೆ. ನೋಂದಣಿ, ಆಗಮಿಸಲು ಮೊಬೈಲ್ ಸಂದೇಶ, ದಾಖಲೆ ಪರಿಶೀಲನೆ, ವಿಶ್ರಾಂತಿ, ಚುಚ್ಚುಮದ್ದು ಹಾಗೂ ನಿಗಾ ಕೊಠಡಿಗಳು, ಲಸಿಕೆ ಯಶಸ್ವಿಯಾಗಿ ಹಾಕಿರುವ ಸಂದೇಶ.
ಲಸಿಕೆಗೆ ಪಡೆದವರಿಗೆ ಅಡ್ಡಪರಿಣಾಮ ಸಾಧ್ಯತೆ ಇದೆಯೇ? :
ಲಸಿಕೆ ಪಡೆದ 30 ನಿಮಿಷಗಳಲ್ಲಿಯೇ ಕೆಲವರಿಗೆ ಮಾತ್ರ ಜ್ವರ, ಮೈಕೈನೋವು, ತಲೆ ಸುತ್ತು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಗಾ ಕೊಠಡಿಯಲ್ಲಿ 30 ನಿಮಿಷ ಕೂರಿಸಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿರುತ್ತದೆ.
ಸೋಂಕಿತರಿಗೆ ಕೊಡಲಾಗುತ್ತದೆಯೇ? :
ಇಲ್ಲ, ಸೋಂಕಿನ ಲಕ್ಷಣ ಆಧರಿಸಿ ಇತರ ಔಷಧಗಳನ್ನು ಮಾತ್ರ ನೀಡಲಾಗುತ್ತದೆ. ಗುಣಮುಖರಾದ ಅನಂತರ ಭವಿಷ್ಯದಲ್ಲಿ ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯಬಹುದು.
ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೇ? :
ತಜ್ಞರ ಸೂಚನೆಯಂತೆ ಲಸಿಕೆ ಪಡೆದ ಮೇಲೂ ಮಾಸ್ಕ್ ಧರಿಸಬೇಕು. ಎಲ್ಲರಿಗೂ ಲಸಿಕೆ ಕೊಟ್ಟ ಅನಂತರ ಕಡ್ಡಾಯ ಮಾಸ್ಕ್ ನಿಯಮವನ್ನು ಕೈಬಿಡಲಾಗುತ್ತದೆ.
ಒಬ್ಬರಿಗೆ ಲಸಿಕೆ ಎಷ್ಟು ಬಾರಿ ನೀಡಲಾಗುತ್ತದೆ? ಯಾವಾಗ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ? :
ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಬೂಸ್ಟರ್ ಡೋಸ್ ತೆಗೆದುಕೊಂಡ ಎರಡು ವಾರಗಳ ಅನಂತರ ದೇಹದಲ್ಲಿ ಕೋವಿಡ್ ವೈರಸ್ ವಿರುದ್ಧ ಹೋರಾಡುವ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.