“ಮೇಯಲ್ಲಿ ಸತ್ತವರು ಲಸಿಕೆ ಪಡೆದಿಲ್ಲ’
Team Udayavani, Sep 10, 2021, 7:00 AM IST
ಹೊಸದಿಲ್ಲಿ: ಸೋಂಕಿನಿಂದಾಗಿ ಉಂಟಾಗುವ ಸಾವಿನ ಪ್ರಮಾಣ ತಡೆಯಲು ಲಸಿಕೆ ಸಮರ್ಥವಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಮೊದಲ ಡೋಸ್ ಶೇ. 96.6ರಷ್ಟು ಸಾವಿನ ಪ್ರಮಾಣ ತಡೆಯುತ್ತದೆ. 2ನೇ ಡೋಸ್ ಶೇ. 97.5ರಷ್ಟು ಸಾವಿನ ಪ್ರಮಾಣ ತಡೆಯುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ಅವರು, ಎಪ್ರಿಲ್-ಮೇಯಲ್ಲಿ ಸೋಂಕು ಪರಿಸ್ಥಿತಿ ಕೈಮೀರಿದ ಸಂದರ್ಭದಲ್ಲಿ ಅಸು ನೀಗಿದವರು ಲಸಿಕೆ ಪಡೆದುಕೊಂಡಿರಲಿಲ್ಲ ಎಂದರು.
ದೇಶದಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ ಶೇ. 58 ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಶೇ. 18ರಷ್ಟು ಮಂದಿಗೆ 2 ಡೋಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರತೆ ಇಲ್ಲ:
ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿಲ್ಲ. 35 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 10ಕ್ಕಿಂತ ಹೆಚ್ಚಿದೆ. ವಿವಿಧ ಲಸಿಕೆಗಳ 2 ಮತ್ತು 3ನೇ ಹಂತದ ಪ್ರಯೋಗ ಮುಂದುವರಿದಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದರು.
ಹಬ್ಬಕ್ಕೆ ಹೆಚ್ಚು ಜನರು ಬೇಡ:
ಗಣೇಶ ಚತುರ್ಥಿ ಸಹಿತ ಹಬ್ಬಗಳನ್ನು ಮನೆಯಲ್ಲೇ ಆಚರಿಸಬೇಕು ಎಂದು ಐಸಿಎಂಆರ್ ನಿರ್ದೇಶಕ ಡಾ| ಬಲರಾಂ ಭಾರ್ಗವ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಮಾತ್ರ ಪ್ರಯಾಣ ಮಾಡಿ ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ.
ಮಕ್ಕಳಿಗೆ ಲಸಿಕೆ: ಶಿಫಾರಸು ಮಾಡಿಲ್ಲ :
ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಿಯೇ ಶಾಲೆಗೆ ತೆರಳುವಂತೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಾ| ಪೌಲ್, ಜಗತ್ತಿನ ಯಾವುದೇ ವೈಜ್ಞಾನಿಕ ಸಮಿತಿ, ವೈರಾಣು ತಜ್ಞರು ಶಾಲೆ ತೆರೆ ಯುವುದಕ್ಕೆ ಮುನ್ನ ಮಕ್ಕಳಿಗೆ ಕಡ್ಡಾಯ ವಾಗಿ ಲಸಿಕೆ ನೀಡಬೇಕು ಎಂದು ಹೇಳಿಲ್ಲ. ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಮಕ್ಕಳಿಗಾಗಿ ಲಸಿಕೆ ನೀಡುತ್ತಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.