ಕೋವಿಡ್ ಲಸಿಕೆ ಎಲ್ಲರಿಗೂ ಉಚಿತವಿಲ್ಲ?
ಕೇಂದ್ರದ ಮುಂದೆ ಶಿಫಾರಸು ಮುಂದಿಟ್ಟ ತಜ್ಞರ ತಂಡ
Team Udayavani, Sep 30, 2020, 6:16 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೊರೊನಾಕ್ಕೆ ಲಸಿಕೆ ಬಂದ ಮೇಲೆ ಸರಕಾರ ಎಲ್ಲರಿಗೂ ಅದನ್ನು ಉಚಿತ ವಾಗಿ ನೀಡುವುದು ದೂರದ ಮಾತು. ದೈಹಿಕವಾಗಿ ಅತಿ ದುರ್ಬಲರಾಗಿ ರುವ, ಮುಂಚೂಣಿಯ ಸಿಬ್ಬಂದಿಗೆ ಮಾತ್ರವೇ ಈ ಲಸಿಕೆ ಉಚಿತವಾಗಿ ಲಭಿಸಲಿದೆ!
ಹೌದು, ತಜ್ಞರನ್ನೊಳಗೊಂಡ “ಕೊರೊನಾ ಲಸಿಕೆ ಯೋಜನೆ ತಂಡ’ ಇಂಥದ್ದೊಂದು ಸಲಹೆಯನ್ನು ಸರಕಾರಕ್ಕೆ ಶಿಫಾರಸು ಮಾಡಿದೆ. ಒಂದು ವೇಳೆ ಸರಕಾರ ಈ ನಿಲುವು ತೆಗೆದುಕೊಂಡರೆ, ಸೋಂಕಿಗೆ ತುತ್ತಾಗುವ ಬಹುತೇಕ ಜನ ತಮ್ಮ ಜೇಬಿ ನಿಂದಲೇ ಲಸಿಕೆಗೆ ಹಣ ಪಾತಿಸಬೇಕಾಗ ಬಹುದು ಎಂದು “ಇಂಡಿಯನ್ ಎಕ್ಸ್‌ಪ್ರೆಸ್’ ವಿಶ್ಲೇಷಿಸಿದೆ.
ಯಾರ್ಯಾರಿಗೆ ಉಚಿತ?: 50 ವರ್ಷ ಮೇಲ್ಪಟ್ಟವರಿಗೆ, ಗಂಭೀರ ಕಾಯಿಲೆಗೆ ತುತ್ತಾ ದವರಿಗೆ, ಪೊಲೀಸ್- ವೈದ್ಯರು- ಇತರೆ ಆರೋಗ್ಯ ಕಾರ್ಯಕರ್ತರ ನ್ನೊಳಗೊಂಡ ಮುಂಚೂಣಿ ಸಿಬ್ಬಂದಿಗೆ ಉಚಿತ ಲಸಿಕೆ ನೀಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ತಜ್ಞರು ಹೇಳ್ಳೋದೇನು?: “ಈಗಾ ಗಲೇ ನಡೆಸಿದ ಸರ್ವೇ ಪ್ರಕಾರ ದೇಶದಲ್ಲಿ ಶೇ.25- 30 ಮಂದಿಗೆ ಕೊರೊನಾ ತಗುಲಿರುವ ಸಾಧ್ಯತೆ ಇದೆ. ಲಸಿಕೆ ಬರುವ ಹೊತ್ತಿಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಇಂಥ ಸನ್ನಿವೇಶದಲ್ಲಿ ದೇಶದ ಎಲ್ಲರಿಗೂ ರೋಗ ನಿರೋಧಕ ಲಸಿಕೆ ನೀಡುವ ಅಗತ್ಯವಿಲ್ಲ.
ಅತಿ ದುರ್ಬಲರಿಗೆ ಮಾತ್ರವೇ ಸರಕಾರ ಲಸಿಕೆಯನ್ನು ಉಚಿತವಾಗಿ ನೀಡಬಹುದು’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಆದರೆ, “ಅತಿ ದುರ್ಬಲ’ ಶ್ರೇಣಿಯಲ್ಲಿ ಯಾರ್ಯಾರು ಒಳಗೊಂಡಿ ರುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಿಲ್ಲ.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಒಳಗೊಂಡ ತಂಡ ಇಂಥದ್ದೊಂದು ವರದಿ ಸಿದ್ಧಪಡಿಸಿ, ಪ್ರಧಾನಮಂತ್ರಿ ಕಚೇರಿಗೆ ಕಳಿಸಿದೆ.
ಉಚಿತ ಲಸಿಕೆ ಏಕೆ ಅಸಾಧ್ಯ?
ಇಷ್ಟು ಆದ್ಯತೆ ಮೇರೆಗೆ ಲಸಿಕೆ ನೀಡಿದರೂ 30- 40 ಕೋಟಿ ರೂ. ಖರ್ಚಾಗುತ್ತದೆ.
ದೇಶದ ಎಲ್ಲ ಮಂದಿಗೆ ಕೊರೊನಾ ನಿರೋಧಕ ನೀಡಿದರೆ ತಗುಲುವ ವೆಚ್ಚ ಅಂದಾಜು 80 ಸಾವಿರ ಕೋಟಿ ರೂ.ಗೂ ಅಧಿಕ
(1 ವರ್ಷಕ್ಕೆ).
ಬಹುತೇಕರಿಗೆ ರೋಗನಿರೋಧಕ ಶಕ್ತಿ ಚೆನ್ನಾಗಿರುವ ಕಾರಣ ಲಸಿಕೆ ಅಗತ್ಯ ಬೀಳದು ಎಂದೂ ತಜ್ಞರು ಲೆಕ್ಕಿಸಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.