ಮುಂದಿನ ನಾಲ್ಕು ತಿಂಗಳಲ್ಲಿ 136 ಕೋಟಿ ಡೋಸ್ ಭಾರತದಲ್ಲಿ ಲಭ್ಯ : ಕೇಂದ್ರ ಸರ್ಕಾರ
Team Udayavani, Aug 6, 2021, 11:16 AM IST
ನವ ದೆಹಲಿ : ಮುಂದಿನ ನಾಲ್ಕು ತಿಂಗಳಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳ 136 ಕೋಟಿ ಡೋಸ್ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಗುರಿಗಳ ವಿವರಗಳನ್ನು ಕೇಂದ್ರ ಸರ್ಕಾರ ಪಟ್ಟಿ ಮಾಡಿದ್ದು, ‘ಕೋವಿಡ್ -19 ಪಬ್ಲಿಕ್ ಹೆಲ್ತ್ ರೆಸ್ಪಾನ್ಸ್ ಪ್ರೊ-ಆಕ್ಟಿವ್, ಪ್ರಿ ಎಂಪ್ಟಿವ್ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಗೈಡೆಡ್ ಎಪಿಡೆಮಿಯಾಲಾಜಿಕಲ್ ಮತ್ತು ಸೈಂಟಿಫಿಕ್ ರಿಗರ್’ ಎಂಬ ಶೀರ್ಷಿಕೆಯ ವರದಿಯು ಪ್ರಧಾನಿ ಕಚೇರಿಯಿಂದ ಸಂಸದರಿಗೆ ನೀಡಲಾದ ಭಾರತದ ಲಸಿಕೆ ಉತ್ಪಾದನೆಯ ಗುರಿಗಳ ವಿವರಗಳನ್ನು ಒಳಗೊಂಡಿದೆ.
ಇದನ್ನೂ ಓದಿ : ದೇಶದಲ್ಲಿ ಕೋವಿಡ್ ಏರಿಕೆ : ಸತತ ಮೂರನೇ ದಿನವೂ 40,000 ದಾಟಿದ ಪ್ರಕರಣಗಳು
ಲಸಿಕೆ ಉತ್ಪಾದನೆ ಯೋಜನೆ ಡಿಸೆಂಬರ್ ವರೆಗೆ :
ಆಗಸ್ಟ್
ಕೊವಾಕ್ಸಿನ್ – 3.15 ಕೋಟಿ, ಕೋವಿಶೀಲ್ಡ್ – 23 ಕೋಟಿ, ಒಟ್ಟು ಡೋಸ್ 26.15 ಕೋಟಿ ಲಭ್ಯವಿರಲಿದೆ ಎಂದು ಕೇಂದ್ರ ಹೇಳಿದೆ.
ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್:
ಕೊವಾಕ್ಸಿನ್ – 5.25 ಕೋಟಿ, ಕೋವಿಶೀಲ್ಡ್ – 23 ಕೋಟಿ, ಒಟ್ಟು ಡೋಸ್: 28.25 ಕೋಟಿ ದೇಶದಾದ್ಯಂತ ಲಭ್ಯವಿರಲಿದೆ.
ಆಗಸ್ಟ್ ನಿಂದ ಒಟ್ಟು ಕೋವಿಡ್ ವ್ಯಾಕ್ಸಿನ್ ಡೋಸೇಜ್ ಗಳು:
ಕೊವಾಕ್ಸಿನ್ – 21.55 ಕೋಟಿ, ಕೋವಿಶೀಲ್ಡ್ – 115 ಕೋಟಿ, ಒಟ್ಟು ಡೋಸ್ – 136.55 ಕೋಟಿ ಲಸಿಕಾ ಅಭಿಯಾನದಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಗಸ್ಟ್ 2021 ರಿಂದ ಡಿಸೆಂಬರ್ ವರೆಗೆ ಕೇಂದ್ರವು ನೀಡಿದ ಮುಂಗಡ ಆದೇಶದ ಪ್ರಕಾರ, ಪ್ರತಿ ಡೋಸ್ ಗೆ 215.25 ರಂತೆ 8071.87 ಕೋಟಿ ವೆಚ್ಚದಲ್ಲಿ ಲಸಿಕೆಗಳನ್ನು ಖರೀದಿಸಲಾಗುತ್ತದೆ.
ಭಾರತ್ ಬಯೋಟೆಕ್‌ನಿಂದ 28.5 ಕೋಟಿ ಕೋವಾಕ್ಸಿನ್ ಡೋಸ್‌ಗಳನ್ನು ಸರ್ಕಾರವು ಪ್ರತಿ ಡೋಸ್ ಗೆ ರೂ 225.75 ರಂತೆ 6,433.87 ಕೋಟಿ ವೆಚ್ಚದಲ್ಲಿ ಖರೀದಿಸುತ್ತದೆ. ಒಟ್ಟಾರೆಯಾಗಿ, ಒಟ್ಟು 88 ಕೋಟಿ ಲಸಿಕೆ ಪ್ರಮಾಣಗಳನ್ನು ಉತ್ಪಾದಿಸಲಾಗುವುದು ಮತ್ತು ಕೇಂದ್ರವು 66 ಕೋಟಿ ಡೋಸ್ ಗಳನ್ನು ಖರೀದಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆಗೆ ರೆವಲ್ಯೂಶನ್ ಗೋವನ್ಸ್ ಒತ್ತಾಯ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.