ಗೋ ವಿವಾದ: ಕೋಳಿಗೆ ಬೇಡಿಕೆ, ದರವೂ ಏರಿಕೆ
Team Udayavani, Jun 6, 2017, 3:45 AM IST
ನವದೆಹಲಿ: ದೇಶಾದ್ಯಂತ ಗೋಮಾಂಸ ಸೇವನೆ ವಿವಾದ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ಇದರ ಲಾಭ ಕೋಳಿ ಮಾಂಸದ ವ್ಯಾಪಾರಿಗಳಿಗೆ ಸಿಕ್ಕಿದೆ, ಕೋಳಿ ತಿನ್ನುವವರ ಪ್ರಮಾಣವೂ ಹೆಚ್ಚಾಗಿದೆ, ಅದರ ಬೆಲೆಯೂ ಏರಿದೆ ಎಂದು ಅಸೋಚಾಮ್ (ಭಾರತದ ವಾಣಿಜ್ಯ ಮತ್ತು ಕೈಗಾರಿಕೆ ಸೂಚ್ಯಂಕ ಸಂಸ್ಥೆ ) ವರದಿ ತಿಳಿಸಿದೆ.
ಸದ್ಯ ಕೋಳಿ ಮಾಂಸದ ದರ ಶೇ.25ರಿಂದ 30ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಾಂಸ ಬಳಕೆಯೂ ಶೇ.35ರಿಂದ 40ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 2014ರಿಂದ 2017ರ ಅವಧಿಯಲ್ಲಿ ಕೋಳಿ ಮಾಂಸದ ಸಗಟು ಬೆಲೆ ಶೇ.22ರಷ್ಟು ಏರಿದ್ದರೆ, ಗೋ ಮತ್ತು ಎಮ್ಮೆ ಮಾಂಸದ ಬೆಲೆ ಶೇ.3ರಷ್ಟು ಕುಸಿದಿದೆ. ಇದಕ್ಕೆ ವಿರುದ್ಧವಾಗಿ 2013-2014ರ ನಡುವಿನ ಅವಧಿಯಲ್ಲಿ ಹಸು ಮತ್ತು ಎಮ್ಮೆ ಮಾಂಸದ ಸಗಟು ಬೆಲೆ ಸೂಚ್ಯಂಕ ಶೇ.10ರಷ್ಟು ಹೆಚ್ಚಾಗಿತ್ತು. ಆ ವೇಳೆ ಕೋಳಿ ಮಾಂಸದ ಬೆಲೆ ಶೇ.9ರಷ್ಟು ತಗ್ಗಿತ್ತು ಎಂದು ಅಸೋಚಾಮ್ ತಿಳಿಸಿದೆ.
ಮುಖ್ಯವಾಗಿ ಆಂಧ್ರಪ್ರದೇಶ, ಹರ್ಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕೋಳಿ ಮಾಂಸ ವ್ಯಾಪಾರಿಗಳಿಗೆ ಲಾಭವಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.