ವಿಶ್ವದೆಲ್ಲೆಡೆ ಕೋ”ವಿನ್”
Team Udayavani, Jun 28, 2021, 8:30 PM IST
ನವ ದೆಹಲಿ : ಲಸಿಕೆ ನೋಂದಣಿ ಮಾಡುವ ಕೋವಿನ್ ಆ್ಯಪ್ ಈಗ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಕೋವಿನ್ ಆ್ಯಾಪ್ ನ ತಂತ್ರಜ್ಞಾನವನ್ನು ತಮ್ಮ ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನದಲ್ಲಿ ಅಳವಡಿಸಿಕೊಳ್ಳಲ್ಲು ವಿಶ್ವದ ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳು ಆಸಕ್ತಿ ತೋರಿಸಿವೆ.
ಈ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ಎ) ಸಿಇಒ ಮತ್ತು ಕೋವಿನ್ ಪೋರ್ಟಲ್ ನ ಮುಖ್ಯಸ್ಥ ಆರ್. ಎಸ್. ಶರ್ಮಾ, ಮಧ್ಯ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ 50 ಕ್ಕೂ ಹೆಚ್ಚು ದೇಶಗಳು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿವೆ ಎಂದು ಹೇಳಿದ್ದಾರೆ.
#CoWIN has become popular! Over 50 countries from across Central Asia, Latin America & Africa, are interested in this #technology. @PMOIndia has directed us to create an open-source version of #CoWIN free of cost to any interested country. #DigitalIndia #DigitalTransformation
— RS Sharma (@rssharma3) June 28, 2021
ಇದನ್ನೂ ಓದಿ : ಎಂಟು ಬಾರಿ ಶಾಸಕನಾಗಿರುವ ನನಗೂ ಸಿ.ಎಂ. ಆಗುವ ಅರ್ಹತೆ ಇದೆ : ಸಚಿವ ಉಮೇಶ್ ಕತ್ತಿ
ಮಾತ್ರವಲ್ಲದೇ, “ಯಾವುದೇ ಆಸಕ್ತ ದೇಶಕ್ಕೆ ಕೋವಿನ್ ನನ್ನು ಮುಕ್ತವಾಗಿ ಮೂಲ ಆವೃತ್ತಿಯನ್ನು ಉಚಿತವಾಗಿ ರಚಿಸಲು ಪ್ರಧಾನ ಮಂತ್ರಿ ನಮಗೆ ನಿರ್ದೇಶನ ನೀಡಿದ್ದಾರೆ” ಎಂದು ಶರ್ಮಾ ತಿಳಿಸಿದ್ದಾರೆ.
ಇನ್ನು, ಭಾರತವು ಕೋವಿನ್ ಪ್ಲಾಟ್ ಫಾರ್ಮ್ ನನ್ನು ವಿಶ್ವದಾದ್ಯಂತದ ದೇಶಗಳಿಗೆ ನೀಡುತ್ತಿದೆ ಎಂದು ಘೋಷಿಸಿದ್ದು, ಜುಲೈ 5 ರಂದು ಮಧ್ಯಾಹ್ನ 3 ಗಂಟೆಗೆ ‘ಕೋವಿನ್ ಗ್ಲೋಬಲ್ ಕಾನ್ಕ್ಲೇವ್’ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊವಿನ್ ಆ್ಯಪ್ನಿಂದ ತುಂಬ ಅನುಕೂಲವಾಗುತ್ತಿದೆ. ಈ ಹಿಂದೆ ಆಧಾರ್, ಯುಪಿಐ ಅಭಿವೃದ್ಧಿ ಪಡಿಸಿದ ಅನುಭವದಲ್ಲೇ ಈ ಪೋರ್ಟಲ್ ಕೂಡ ಹೊರತರಲಾಗಿತ್ತು. ಕೇವಲ 5 ತಿಂಗಳಲ್ಲಿ ಈ ಪೋರ್ಟಲ್ನಲ್ಲಿ 30 ಕೋಟಿ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿವರವೂ ಈ ಪೋರ್ಟಲ್ನಲ್ಲಿ ಲಭ್ಯವಿದೆ ಎಂದು ಆರ್.ಎಸ್.ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ : ಚಾರ್‌ಧಾಮ್ ಯಾತ್ರೆಗೆ ಹೈಕೋರ್ಟ್ ತಡೆ : ದೇಗುಲದಲ್ಲಿ ನಡೆಯುವ ಪೂಜೆಯ ನೇರ ಪ್ರಸಾರಕ್ಕೆ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.