ಉತ್ತರಾಖಂಡದಲ್ಲಿ ಜೋಶಿಮಠದಲ್ಲಿ ಭೂಕುಸಿತದ ಆತಂಕ
Team Udayavani, Jan 6, 2023, 6:55 AM IST
ಜೋಶಿಮಠ: ಉತ್ತರಾಖಂಡದ ಜೋಶಿಮಠ ಪಟ್ಟಣದಲ್ಲಿ ಸ್ಥಳೀಯರ ಮನೆಗಳು ಬಿರುಕು ಬಿಡುವ ಘಟನೆಗಳು ವರದಿಯಾಗಿವೆ.
ಇದರಿಂದಾಗಿ ಒಟ್ಟು 3 ಸಾವಿರ ಮಂದಿಗೆ ತೊಂದರೆಯಾಗಿದೆ. 570 ಮನೆಗಳಲ್ಲಿ ಬಿರುಕುಗಳು ಬಿಟ್ಟಿರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ವಾಸಿಸುತ್ತಿರುವರು ಆತಂಕಗೊಂಡಿದ್ದಾರೆ.
ಪ್ರತಿಕೂಲ ಹವಾಮಾನ ಮತ್ತು ವಿವಿಧ ರೀತಿಯ ಮೂಲ ಸೌಕರ್ಯ ಕಾಮಗಾರಿಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಸ್ಥಳಗಳಲ್ಲಿ ಭೂಮಿಯ ಒಳಗಿನಿಂದ ನೀರು ಎದ್ದು ಬರುತ್ತಿದೆ.
ಈಗಾಗಲೇ 60 ಕುಟುಂಬಗಳ ಸದಸ್ಯರು ಸುರಕ್ಷಿತ ಸ್ಥಳ ಅರಸಿಕೊಂಡು ಬೇರೆಡೆಗೆ ತೆರಳಿದ್ದರೆ, 29 ಕುಟುಂಬಗಳಿಗೆ ತಾತ್ಕಾಲಿಕವಾಗಿ ಜಿಲ್ಲಾಡಳಿತ ಆಶ್ರಯ ನೀಡಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಬುಧವಾರ ಮತ್ತು ಗುರುವಾರ ಪಂಜಿನ ಮೆರವಣಿಗೆ ನಡೆಸಿದ್ದಾರೆ.
ಕಾರಣವೇನು?
ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಸ್ಥಳದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 1976ರಲ್ಲಿಯೇ ಮಿಶ್ರಾ ಸಮಿತಿ “ರಸ್ತೆ ಕಾಮಗಾರಿ, ದುರಸ್ತಿ ಸೇರಿದಂತೆ ಇನ್ನಿತರ ಯಾವುದೇ ಕಾಮಗಾರಿಗಾಗಿ ಬೃಹತ್ ಗಾತ್ರದ ಬಂಡೆಗಳನ್ನು ತೆಗೆಯುದು ಸೂಕ್ತವಲ್ಲ. ಅದಕ್ಕಾಗಿ ಸ್ಫೋಟಗಳನ್ನೂ ನಡೆಸುವುದು ಸರಿಯಲ್ಲ’ ಎಂದು ಸಲಹೆ ಮಾಡಿತ್ತು. 2021ರಲ್ಲಿ ಕೂಡ ಸ್ವತಂತ್ರ ಸಮಿತಿಯೊಂದು ಮತ್ತಷ್ಟು ಕಾಮಗಾರಿಗಳು ನಡೆದಲ್ಲಿ ಜೋಶಿಮಠ ಮುಳುಗಲಿದೆ ಎಂದು ಎಚ್ಚರಿಸಿತ್ತು.
ಜೋಶಿಮಠದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಶೀಘ್ರವೇ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ.
-ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.