ಥಾಣೆಯ 4 ಅಂತಸ್ತಿನ ಕಟ್ಟಡದಲ್ಲಿ ಬಿರುಕು: 300 ಮಂದಿ ತೆರವು
Team Udayavani, Oct 9, 2018, 11:45 AM IST
ಥಾಣೆ, ಮಹಾರಾಷ್ಟ್ರ : ಇಲ್ಲಿನ ನಾಲ್ಕಂತಸ್ತಿನ ಕಟ್ಟಡದಲ್ಲಿ ಆಳವಾದ ಬಿರುಕು ಕಂಡು ಬಂದಿರುವನ್ನು ಅನುಸರಿಸಿ ಕಟ್ಟಡದೊಳಗೆ ವಾಸವಾಗಿದ್ದ ಸುಮಾರು 300 ಮಂದಿಯನ್ನು ತೆರವುಗೊಳಿಸಲಾಯಿತು ಎಂದು ಪೌರಾಡಳಿತೆಯ ಅಧಿಕಾರಿಗಳು ಇಂದು ಮಂಗಳವಾರ ತಿಳಿಸಿದ್ದಾರೆ.
ಉಠಾಲ್‌ಸಾರ್ ಪ್ರದೇಶದಲ್ಲಿನ ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿನ ಪಿಲ್ಲರ್‌ನಲ್ಲಿ ಬಿರುಕು ಕಂಡುಬಂದಿರುವ ಬಗ್ಗೆ ಸೋಮವಾರ ತಡ ರಾತ್ರಿ ಮುನಿಸಿಪಲ್ ಕಾರ್ಪೊರೇಶನ್ ನ ತುರ್ತು ನಿಯಂತ್ರಣ ಕೊಠಡಿಗೆ ಫೋನ್ ಕರೆ ಬಂದಿತ್ತು ಎಂದು ನಗರಾಡಳಿತೆಯ ಪ್ರಾದೇಶಿಕ ವಿಪತ್ತು ನಿರ್ವಹಣ ಕೊಠಡಿಯ ಮುಖ್ಯಸ್ಥರಾಗಿರುವ ಸಂತೋಷ್ ಕದಂ ಹೇಳಿದರು.
ಒಡನೆಯೇ ಪೌರಾಡಳಿತೆ ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಕಟ್ಟಡದೊಳಗೆ ವಾಸವಿದ್ದ ಸುಮಾರು 57 ಕುಟುಂಬಗಳಿಗೆ ಸೇರಿದ 300 ಮಂದಿಯನ್ನು ತೆರವುಗೊಳಿಸಲಾಯಿತು. ಈ ಕಟ್ಟಡವು 35 ವರ್ಷಗಳಷ್ಟು ಹಳೆಯದೆಂದು ಗೊತ್ತಾಗಿದೆ.
ಕಟ್ಟಡವನ್ನು ಈಗ ಸೀಲ್ ಮಾಡಲಾಗಿದ್ದು ಅದರಿಂದ ತೆರವುಗೊಳಿಸಲ್ಪಟ್ಟಿರುವ ಜನರನ್ನು ತಾತ್ಕಾಲಿಕವಾಗಿ ನಗರದ ಭಯಾಂದರ್ ಪಾಡ ಪ್ರದೇಶದಲ್ಲಿನ ಖಾಲಿ ವಸದಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕದಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.