![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 1, 2020, 6:04 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಲಸಿಕೆ ಬಂದಾದ ಮೇಲೆ ಪ್ರತಿ ಡೋಸ್ ಕೂಡ ಅಮೂಲ್ಯ. ಈ ನಿಟ್ಟಿನಲ್ಲಿ ಸಮರ್ಥ ಲಸಿಕೆಗಾರರ (ವ್ಯಾಕ್ಸಿನೇಟರ್) ತಂಡ ರಚಿಸುವಂತೆ ಸೂಚಿಸಿ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ಎಂಬಿಬಿಎಸ್, ಬಿಡಿಎಸ್ (ದಂತ) ವೈದ್ಯರಲ್ಲದೆ, ಇಂಟರ್ನ್ಶಿಪ್ ವಿದ್ಯಾರ್ಥಿಗಳು, ದಾದಿಯರು, ಸಹಾಯಕ ಶುಶ್ರೂಷಕಿಯರು, ಔಷಧತಜ್ಞರ ತಂಡ ರಚನೆಗೊಳ್ಳಬೇಕು. ದಿನನಿತ್ಯದ ಕ್ಲಿನಿಕಲ್ ಕೇರ್‌ನಲ್ಲಿ ಸಕ್ರಿಯವಾಗಿರುವ, ಚುಚ್ಚುಮದ್ದು ನೀಡಿ ಅನುಭವ ಹೊಂದಿರುವ ಇವರನ್ನು ಸಮರ್ಥ ವ್ಯಾಕ್ಸಿನೇಟರ್ ಎಂದು ಪರಿಗಣಿಸಬಹುದು ಎಂದು ಸಲಹೆ ನೀಡಿದೆ. ಒಂದು ವೇಳೆ ಚುಚ್ಚಮುದ್ದುಗಾರರ ಬೇಡಿಕೆ ಉದ್ಭವಿಸಿದ್ದಲ್ಲಿ ಇದೇ ಶ್ರೇಣಿಯಲ್ಲಿ ನಿವೃತ್ತರಾದ ಆರೋಗ್ಯ ಸಿಬ್ಬಂದಿಯನ್ನೂ ಲಸಿಕೆ ನೀಡುವ ಕಾರ್ಯಕ್ಕೆ ಪರಿಗಣಿಸಬಹುದು ಎಂದು ತಿಳಿಸಿದೆ.
ಮಾಸ್ಕ್ ಬ್ರಹ್ಮಾಸ್ತ್ರ: “ಕೊರೊನಾ ಸೋಂಕಿನೊಂದಿಗೆ ಜೀವಿಸುತ್ತಾ ಶೀಘ್ರದಲ್ಲಿ ನಾವು ಒಂದು ವರ್ಷ ಪೂರೈಸುತ್ತಿದ್ದೇವೆ. ಸ್ಯಾನಿಟೈಸರ್‌ನಿಂದ ಶುಚಿತ್ವ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದೇ ಕೊರೊನಾ ವಿರುದ್ಧ ನಾವು ಪ್ರಯೋಗಿ ಸಬಹುದಾದ ಬಹುದೊಡ್ಡ ಅಸ್ತ್ರ’ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಪರೀಕ್ಷಾ ದರ ಇಳಿಕೆ: ದೆಹಲಿಯಲ್ಲಿ ಕೊರೊನಾ ಆರ್‌ಟಿ ಪಿಸಿಆರ್ ಪರೀಕ್ಷೆಯ ದರವನ್ನು ಈಗಿರುವ 2400 ರೂ.ಗಳಿಂದ 800ರೂ.ಗೆ ಇಳಿಸಿ ಸಿಎಂ ಕೇಜ್ರಿವಾಲ್ ಸೋಮವಾರ ಆದೇಶ ಹೊರಡಿಸಿದ್ದಾರೆ. ಎಲ್ಲ ಖಾಸಗಿ ಲ್ಯಾಬೊರೆಟರಿಗಳು ಇನ್ನು ಮುಂದೆ 800 ರೂ. ಮಾತ್ರ ಸ್ವೀಕರಿಸುವಂತೆ ಸೂಚಿಸಲಾಗಿದೆ.
ಎಮರ್ಜೆನ್ಸಿ ಬಳಕೆಗೆ ಮಾಡೆರ್ನಾ ಲಸಿಕೆ?
ತುರ್ತು ಸಂದರ್ಭಗಳಲ್ಲಿ ಮಾಡೆರ್ನಾ ಲಸಿಕೆ ಬಳಕೆಗೆ ಅವಕಾಶ ಕಲ್ಪಿಸುವಂತೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳ ಅನುಮತಿ ಪಡೆಯಲು ಮಾಡೆರ್ನಾ. ಇಂಕ್ ಮುಂದಾಗಿದೆ. “ಅಮೆರಿಕ, ಯುರೋಪಿಯನ್ ದೇಶಗಳಲ್ಲಿ ಸೋಂಕಿನ ಪ್ರಕರಣ ನಿತ್ಯ ಹೆಚ್ಚುತ್ತಿದ್ದು, ಸಾಂಕ್ರಾಮಿಕ ನಿವಾರಿಸಲು ಬಹು ಔಷಧ ಲಸಿಕೆ ಕಂಪನಿಗಳು ಯಶಸ್ವಿಯಾಗಬೇಕಿದೆ’ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಮಾಡೆರ್ನಾ ಇಂಕ್ ಲಸಿಕೆ ಎಲ್ಲ ವಯೋಮಾನದ ಸೋಂಕಿತ ರಿಗೂ ಸಫಲತೆ ನೀಡಿದ್ದು, ಶೇ.94.1ರಷ್ಟು ಪರಿಣಾಮಕಾರಿ ಎನ್ನಿಸಿಕೊಂಡಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.