ವಿಶ್ವಬ್ಯಾಂಕಲ್ಲಿ ಇದ್ದವರಿಂದ್ಲೇ ವರದಿ ಬಗ್ಗೆ ಟೀಕೆ: ಪ್ರಧಾನಿ
Team Udayavani, Nov 5, 2017, 6:50 AM IST
ನವದೆಹಲಿ/ಕಾಂಗ್ರಾ: ವಿಶ್ವಬ್ಯಾಂಕ್‌ನ ಉದ್ದಿಮೆ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ದೇಶ 100ನೇ ಸ್ಥಾನ ಪಡೆದಿರುವ ಬಗ್ಗೆ ಕಾಂಗ್ರೆಸ್ ಕಟಕಿ ಪ್ರಧಾನಿ ನರೇಂದ್ರ ಮೋದಿಯವರನ್ನು ವಸ್ತುಶಃ ಕೆರಳಿಸಿದೆ. ಹಿಂದಿನ ಸಂದರ್ಭಗಳಲ್ಲಿ ವಿಶ್ವಬ್ಯಾಂಕ್‌ನಲ್ಲಿ ಕೆಲಸ ಮಾಡಿದವರೇ ಈಗ ಅದೇ ಸಂಸ್ಥೆಯ ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧವೇ ಮಾತುಗಳನ್ನಾಡಿದ ಪ್ರಧಾನಿ ಮೋದಿ, “ನಾನು ವಿಶ್ವಬ್ಯಾಂಕ್ ಪ್ರಧಾನ ಕಚೇರಿಯ ಕಟ್ಟಡವನ್ನೇ ನೋಡಿಲ್ಲ. ಆದರೆ ನಮ್ಮ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ನಂಬಿಕೆ ನನ್ನದು. ನಾವು ಈಗ ಮಾಡಿದ ಕೆಲಸವನ್ನು ಅವರೇ(ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ) ಮಾಡಿದ್ದರೆ, ಈಗ ನಮಗೆ ಸಿಕ್ಕಿರುವ ಹೆಗ್ಗಳಿಕೆ ಅವರ ಅವಧಿಯಲ್ಲಿಯೇ ಸಿಕ್ಕಿರುತ್ತಿತ್ತು’ ಎಂದು ಟೀಕಿಸಿದರು.
ದಿವಾಳಿತನ ಕಾಯ್ದೆ ಮತ್ತು ವಾಣಿಜ್ಯಿಕ ವಿವಾದಗಳನ್ನು ಪರಿಹಾರ ಮಾಡುವ ನ್ಯಾಯಾಂಗ ಪ್ರಕ್ರಿಯೆ ಸುಧಾರಣೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡದ್ದನ್ನು ಈಗ ಶುರು ಮಾಡಿದ್ದೇವೆ ಎಂದರು ಪ್ರಧಾನಿ.
ಸುಧಾರಣಾ ಕ್ರಮಗಳ ಬಗ್ಗೆ ಆಕ್ಷೇಪ ಮಾಡುವ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ಮೋದಿ, “ಅವರೂ ಕೆಲಸ ಮಾಡಲಿಲ್ಲ. ಈಗ ನಾವು ಮಾಡುವುದಕ್ಕೂ ಅಡ್ಡಿ ಮಾಡಿ, ಪ್ರಶ್ನಿಸುತ್ತಿದ್ದಾರೆ’ ಎಂದು ದೂರಿದರು. “ಇಂಡಿಯಾ ಬಿಸಿನೆಸ್ ರಿಫಾಮ್ಸ್ì’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಈಗ ಹೂಡಿಕೆ ಮಾಡಲು ಅತ್ಯುತ್ತಮ ಅವಕಾಶ ಇದೆ ಎಂದು ಘೋಷಿಸಿದರು.
ಮೂರು ವರ್ಷದ ಸಾಧನೆಯೇ ಕಾರಣ: ವಿಶ್ವಬ್ಯಾಂಕ್ ವರದಿಯಲ್ಲಿ ಭಾರತವು 142ನೇ ಸ್ಥಾನದಿಂದ 100ನೇ ಸ್ಥಾನಕ್ಕೆ ಏರಲು ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ಆರ್ಥಿಕತೆಯ ವಿವಿಧ ಮಜಲುಗಳಲ್ಲಿ ಕೈಗೊಂಡ ಸುಧಾರಣೆಯೇ ಕಾರಣ. ಪಿಎಫ್ ನೋಂದಣಿ ಮತ್ತು ವಿಥ್‌ಡ್ರಾವಲ್, ಐಟಿ ರಿಟರ್ನ್ಸ್ ಸರಳೀಕರಣ, ವಾಣಿಜ್ಯ ವಿವಾದಗಳಿಗೆ ಸಂಬಂಧಿಸಿದಂತೆ ಇರುವ ನ್ಯಾಯಾಂಗ ಪ್ರಕ್ರಿಯೆ ಸರಳಗೊಳಿಸಿದ್ದು, ಸುಲಭ ವಿಧಾನದಲ್ಲಿ ವಿದ್ಯುತ್ ಸಂಪರ್ಕ, ನಿರ್ಮಾಣ ಕ್ಷೇತ್ರಕ್ಕೆ ಸುಲಭ ಪರವಾನಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಕ್ರಮಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದರು.
ಮತ್ತಷ್ಟು ಸರಳ?: ಇದೇ ಸಂದರ್ಭದಲ್ಲಿ ಜಿಎಸ್‌ಟಿ ಬಗ್ಗೆ ಪ್ರಸ್ತಾಪಿಸಿದ ಮೋದಿ, ಸಣ್ಣ ಉದ್ದಿಮೆದಾರರಿಗೆ ತೊಡಕಾಗಿರುವ ಜಿಎಸ್‌ಟಿಯಲ್ಲಿನ ಅಂಶಗಳ ನಿವಾರ ಣೆಗೆ ರಾಜ್ಯ ಹಣಕಾಸು ಸಚಿವರ ಸಮಿತಿ ಒಪ್ಪಿಕೊಂಡಿದೆ. ನ.9, 10ರಂದು ಗುವಾಹಟಿಯಲ್ಲಿ ನಡೆಯಲಿರುವ ಸಮಿತಿ ಸಭೆಯಲ್ಲಿ ಅದನ್ನು ಅನುಮೋದಿಸುವ ಸಾಧ್ಯತೆ ಇದೆ ಎಂದರು. 2017ರ ವರದಿಯಲ್ಲಿ ಮೇ 2016ರ ವರೆಗೆ ಇರುವ ಅಂಶಗಳು ಸೇರಿಕೊಂಡಿವೆ. ಜಿಎಸ್‌ಟಿ ಸುಧಾರಣೆಯಿಂದ ಉಂಟಾ ಗಿರುವ ಪ್ರಭಾವ ಮುಂದಿನ ವರ್ಷದ ವಿಶ್ವಬ್ಯಾಂಕ್ ವರದಿಯಲ್ಲಿ ಸೇರಿಕೊಳ್ಳಲಿದೆ ಎಂದರು ಪ್ರಧಾನಿ.
ಪ್ರಮುಖ ಸಾಧನೆ: ಇದೇ ಕಾರ್ಯಕ್ರಮದಲ್ಲಿ ಮಾತ ನಾಡಿದ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ, ಪಟ್ಟಿಯಲ್ಲಿ ಭಾರತ 40 ಸ್ಥಾನಗಳಷ್ಟು ಮೇಲಕ್ಕೇರಿರು ವುದು ಅತ್ಯಂತ ಅಪರೂಪದ ಬೆಳವಣಿಗೆ. ಜಿಎಸ್‌ಟಿ ಮತ್ತು ಇತರ ಸುಧಾರಣಾ ಕ್ರಮಗಳಿಂದ 2047ರ ಒಳ ಗಾಗಿ ದೇಶವು ಮೇಲ್ ಮಧ್ಯಮ ಆದಾಯದ ಆರ್ಥಿ ಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಸಮರ ನಿಲ್ಲದು
ತಮ್ಮ ಪ್ರತಿಕೃತಿ ದಹನ, ಮೊಂಬತ್ತಿ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ಕಾಂಗ್ರೆಸ್ ಕೈಗೊಂಡರೂ ಭ್ರಷ್ಟಾಚಾರ ವಿರುದ್ಧದ ನನ್ನ ಸಮರ ನಿಲ್ಲದು ಎಂದಿದ್ದಾರೆ ಪ್ರಧಾನಿ ಮೋದಿ. ಹಿಮಾಚಲದ ಕಾಂಗ್ರಾ, ಸುರೇಂದ್ರನಗರ್ ಎಂಬಲ್ಲಿ ಶನಿವಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕ್ರಮ ಖಂಡಿತ ಎಂದರು. ತನ್ನ ನಾಯಕರು ಹೊಂದಿದ ಆಕ್ರಮ ಆಸ್ತಿ ಕೂಡ ಇದರಿಂದ ಸರ್ಕಾ ರದ ವಶವಾಗಲಿದೆ ಎನ್ನುವುದು ಕಾಂಗ್ರೆಸ್ ಆತಂಕ ಎಂದು ಲೇವಡಿ ಮಾಡಿದರು. ನ.8 ಅನ್ನು ಕರಾಳ ದಿನ ಎಂದು ಆಚರಿಸುವ ಪ್ರತಿಪಕ್ಷಗಳನ್ನು ಟೀಕಿಸಿದ ಅವರು, ಆ ದಿನ ಕಪ್ಪುಹಣದ ದಿನ ಎಂದು ಆಚರಿಸ ಬೇಕು. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ದಿಂದ ಕೋಪಗೊಂಡಿರುವ ಕಾಂಗ್ರೆಸ್, ನ.8ರಂದು ನನ್ನ ಪ್ರತಿಕೃತಿ ದಹನ ಮಾಡಬಹುದು. ಆದರೆ, ನಾನು ಸರ್ದಾರ್ ಪಟೇಲ್ ಅವರ ಹಿಂಬಾಲಕ. ನಾನು ಯಾವುದಕ್ಕೂ ಬಗ್ಗುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.