ಲೇಡಿ ಕಮಾಂಡೋ ರೆಡಿ
Team Udayavani, Jul 1, 2018, 6:00 AM IST
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟದಂಥ ಸಮಸ್ಯೆ ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರ ಜೊತೆಗೆ ಕಣಿವೆ ರಾಜ್ಯದ ಯುವತಿಯರೂ ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಡುವಂಥ ಘಟನೆಗಳು ಹೆಚ್ಚುತ್ತಿವೆ. ಇವರನ್ನು ಸಮರ್ಥವಾಗಿ ಎದುರಿಸಲು ಇದೀಗ ಲೇಡಿ ಕಮಾಂಡೋಗಳು ಸಿದ್ಧರಾಗಿದ್ದಾರೆ.
ಇಲ್ಲಿ ನಿಯೋಜಿಸಲ್ಪಡುವ ಮಹಿಳಾ ಕಮಾಂಡೋಗಳಿಗೆ ಈಗಾಗಲೇ ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ವಿಶೇಷ ತರಬೇತಿಯನ್ನು ನೀಡಿದೆ. ಈ ತಂಡಕ್ಕೆ “ಸೂಪರ್-500′ ಎಂದು ನಾಮಕರಣ ಮಾಡಲಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಕಲ್ಲು ತೂರಾಟದ ಮೂಲಕ ಭದ್ರತಾಪಡೆ ಗಳಿಗೆ ಅಡ್ಡಿ ಉಂಟುಮಾಡುವವರನ್ನು ಎದುರಿಸುವುದೇ ಸೇನೆಗೆ ದೊಡ್ಡ ತಲೆನೋವಾಗಿದೆ. ಇಂಥ ಸಮಯದಲ್ಲಿ ಮಹಿಳಾ ಕಮಾಂಡೋಗಳಿರುವ “ಕ್ರ್ಯಾಕ್ ಟೀಮ್’ ಕಾರ್ಯನಿರ್ವಹಿಸಲಿದೆ.
ಕಠಿಣ ತರಬೇತಿ
ಸಿಆರ್‌ಪಿಎಫ್ನ ಈ ಕಮಾಂಡೋಗಳಿಗೆ ಕಠಿಣವಾದ ವಿಶೇಷ ತರಬೇತಿ ನೀಡಲಾಗಿದೆ. ರಾತ್ರಿ ಹೊತ್ತಲ್ಲೂ ಕಾರ್ಯನಿರ್ವಹಿಸಲು ಅನುಕೂಲವಾಗು ವಂತೆ ಕಣ್ಣಿಗೆ ಪಟ್ಟಿ ಕಟ್ಟಿ ಕಾರ್ಯಾಚರಿಸಲು ಕಲಿಸಲಾಗಿದೆ. ಜತೆಗೆ, ಶಸ್ತ್ರಾಸ್ತ್ರಗಳಲ್ಲಿ ದೋಷ ಕಂಡುಬಂದರೆ, ಕೇವಲ ಒಂದೇ ನಿಮಿಷದಲ್ಲಿ ಅದನ್ನು ರಿಪೇರಿ ಮಾಡುವಂಥ ಕೌಶಲ್ಯವನ್ನೂ ಹೇಳಿಕೊಡಲಾ ಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.