ಗುಜರಾತಲ್ಲಿ ಧರ್ಮಯುದ್ಧ
Team Udayavani, Dec 1, 2017, 6:00 AM IST
ಹೊಸದಿಲ್ಲಿ/ಅಹಮದಾಬಾದ್: ಗುಜರಾತ್ ಚುನಾವಣಾ ಕಣವು ಇದೀಗ “ಧರ್ಮಯುದ್ಧ’ವಾಗಿ ಮಾರ್ಪಟ್ಟಿದೆ. ಸೋಮನಾಥ ದೇವಾಲಯದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರು “ಹಿಂದೂಯೇ ತರರ’ ರಿಜಿಸ್ಟ್ರಿಯಲ್ಲಿ ನಮೂದಾಗಿರುವು ದಕ್ಕೆ ಬಿಜೆಪಿ ವ್ಯಂಗ್ಯ ವಾಡಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ಧರ್ಮದ ವಿಚಾರವನ್ನೆತ್ತಿದೆ. ಇದೀಗ ಹೊಸ ವಿವಾದ ಸೃಷ್ಟಿಸಿದ್ದು, ಎರಡೂ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಗುರುವಾರ ದಿಲ್ಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, “ಯಾರು ಹಿಂದೂ ಧರ್ಮದ ಭಾವನೆಗಳನ್ನು ಗೌರವಿಸುತ್ತಾರೋ, ಅವರು ದೇವಾಲಯಗಳಿಗೆ ಹೋಗುತ್ತಾರೆ. ಪ್ರಧಾನಿ ಮೋದಿ ಅವರು ಎಷ್ಟು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ? ಪ್ರತಿ ದಿನ ಬೆಳಗ್ಗೆದ್ದು ಅವರು ದೇಗುಲಕ್ಕೆ ಹೋಗಿದ್ದನ್ನು ಯಾರಾದರೂ ನೋಡಿದ್ದೀರಾ? ಮೋದಿ ಅವರು ಹಿಂದುತ್ವಕ್ಕಾಗಿ ಹಿಂದೂ ಧರ್ಮವನ್ನೇ ತೊರೆದಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ, “ಪ್ರತಿ ಯೊಬ್ಬ ಭಾರತೀಯನನ್ನೂ ತನ್ನ ಸಹೋದರ, ಸಹೋ ದರಿ ಅಥವಾ ತಾಯಿ ಎಂದು ಪರಿಗಣಿಸುವವನು, ಇತರರ ಭಾವನೆಗಳಿಗೆ ನೋವುಂಟುಮಾಡದವನು, ಹಿಂಸೆಯ ವಿರುದ್ಧ ಕೂಡಲೇ ಧ್ವನಿ ಎತ್ತುವವನು, ಎಲ್ಲದರಲ್ಲೂ ರಾಜಕೀಯ ಮಾಡದವನು, ರೈತರ ಬಳಿ ಹೋಗಿ ಅವರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವವನೇ ನೈಜ ಹಿಂದೂ,’ ಎಂದೂ ಸಿಬಲ್ ನುಡಿದಿದ್ದಾರೆ. ಜತೆಗೆ, ಗುಜರಾತ್‌ನಲ್ಲಿ ಬಿಜೆಪಿಯವರು ಜಿಎಸ್‌ಟಿ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಅಂದರೆ, ಚುನಾವಣೆಯಲ್ಲಿ ಅಭಿವೃದ್ಧಿ ಆಧಾರಿತ ವಿಚಾರಗಳು ಮೂಲೆ ಸೇರಿವೆ ಎಂದಿದ್ದಾರೆ.
ಇದೇ ವೇಳೆ, ಮೋದಿ ಧರ್ಮದ ಕುರಿತ ಸಿಬಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, “ಇದೊಂದು ವಿಚಿತ್ರ ಹೇಳಿಕೆ’ ಎಂದಿದ್ದಾರೆ.
ನಿಮ್ಮ ತಪ್ಪುಗಳಿಗೆ ಗುಜರಾತಿಗರೇಕೆ ಬೆಲೆ ತೆರಬೇಕು?: ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ “ಬಿಜೆಪಿಗೆ ದಿನಕ್ಕೊಂದು ಪ್ರಶ್ನೆ’ ಎಂಬ ಸರಣಿ ಆರಂಭಿಸಿರುವ ರಾಹುಲ್ ಗಾಂಧಿ, ಗುರುವಾರ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಹಾಕಿದ್ದಾರೆ. 1995ರಲ್ಲಿ ಗುಜರಾತ್‌ನ ಒಟ್ಟಾರೆ ಸಾಲ 9,183 ಕೋಟಿ ರೂ. ಇತ್ತು, 2017ರಲ್ಲಿ ಇದು 2.41 ಲಕ್ಷ ಕೋಟಿ ಆಗಿದೆ. ಅಂದರೆ, ಪ್ರತಿಯೊಬ್ಬ ಗುಜರಾತಿಗನ ಮೇಲೆ 37 ಸಾವಿರ ರೂ. ಸಾಲವಿದೆ. ನಿಮ್ಮ ಆರ್ಥಿಕ ನಿರ್ವಹಣೆಯ ಲೋಪ ಮತ್ತು ಪ್ರಚಾರಕ್ಕೆ ಗುಜರಾತಿಗರೇಕೆ ಬೆಲೆ ತೆರಬೇಕು ಎಂದು ಕೇಳಿದ್ದಾರೆ ರಾಹುಲ್.
ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಬಿಜೆಪಿ 107-110 ಸ್ಥಾನ
ಫಲೋಡಿ ಮತ್ತು ಬಿಕಾನೇರ್‌ನ ಬೆಟ್ಟಿಂಗ್ ಮಾರುಕಟ್ಟೆಯ ಬುಕಿ ಗಳ ಪ್ರಕಾರ, ಈ ಬಾರಿಯೂ ಗುಜರಾತ್‌ನಲ್ಲಿ ಗೆಲುವು ಸಾಧಿಸು ವುದು ಬಿಜೆಪಿಯೇ. ಆದರೆ, ಸೀಟುಗಳ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಖಚಿತ. ಬಿಜೆಪಿ 107ರಿಂದ 110 ಸೀಟುಗಳಲ್ಲಿ ಗೆದ್ದರೆ, ಕಾಂಗ್ರೆಸ್‌ಗೆ 70-72 ಸ್ಥಾನಗಳು ಸಿಗಲಿವೆ ಎಂದು ಬುಕಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಅದರಂತೆಯೇ, ಬೆಟ್ಟಿಂಗ್ ಕೂಡ ಸಾಗಿದೆ. ಇಲ್ಲಿ ಬಿಜೆಪಿ ದರ 50 ಪೈಸೆ ಇದ್ದರೆ, ಕಾಂಗ್ರೆಸ್‌ನದ್ದು 2 ರೂ. ಪ್ರಧಾನಿ ಮೋದಿ ಅವರ ಸರಣಿ ರ್ಯಾಲಿಗಳ ಬಳಿಕ ಈ ಟ್ರೆಂಡ್ ಕೂಡ ಬದಲಾಗುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.