ಕೋವಿಡ್‌ನ 73 ಹೊಸ ರೂಪ ಪತ್ತೆ
ಸಿಎಸ್‌ಐಆರ್, ಜೀವ ವಿಜ್ಞಾನ ಸಂಸ್ಥೆಯ ತಜ್ಞರ ಸಂಶೋಧನೆಯಲ್ಲಿ ಬಹಿರಂಗ
Team Udayavani, Aug 16, 2020, 6:30 AM IST
ಸಾಂದರ್ಭಿಕ ಚಿತ್ರ
ಭುವನೇಶ್ವರ: ವಂಶವಾಹಿ ಹಾಗೂ ಜೀನೋಮುಗಳ ಅಧ್ಯಯನ ಮಾಡುವ ಭಾರತದ ವಿಶೇಷಜ್ಞರ ತಂಡವೊಂದು ಒಡಿಶಾದಲ್ಲಿ ಕೊರೊನಾದ 73 ಹೊಸ ಸ್ವರೂಪಗಳನ್ನು ಪತ್ತೆಹಚ್ಚಿದೆ.
ಸಿಎಸ್‌ಐಆರ್ ಮತ್ತು ಜೀವ ವಿಜ್ಞಾನ ಸಂಸ್ಥೆ ಐಜಿಐಬಿರ್ ಸಂಶೋಧಕರ ತಂಡವು ಭುವನೇಶ್ವರದ ಎಸ್‌ಯುಎಂ ಆಸ್ಪತ್ರೆಯ ಜತೆಗೆ ನಡೆಸಿದ ಈ ಸಂಶೋಧನೆ ಕೊರೊನಾ ಕುರಿತು ಮತ್ತಷ್ಟು ಅರಿವು ಮೂಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
“”752 ಕ್ಲಿನಿಕಲ್ ಮಾದರಿಗಳ ಪರೀಕ್ಷೆ ಮತ್ತು 1536 ಮಾದರಿಗಳ ಅನುಕ್ರಮವನ್ನು ತಯ್ನಾರು ಮಾಡಿದ ಈ ಸಂಶೋಧನಾ ತಂಡಕ್ಕೆ ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ನ 1.112 ಮತ್ತು ಬಿ 1.99 ಎಂಬ ರೂಪಾಂತರಗಳು ಪತ್ತೆಯಾಗಿವೆ” ಎನ್ನುತ್ತಾರೆ ಈ ಸಂಶೋಧನಾ ತಂಡದ ಪ್ರಮುಖ ಮಾರ್ಗದರ್ಶಕ ಡಾ. ಜಯಶಂಕರ್ ದಾಸ್.
ಈ ರೀತಿಯಲ್ಲಿ ಕೊರೊನಾ ವೈರಸ್‌ನ ವಿಸ್ತೃತ ಗುಣವನ್ನು ಅಧ್ಯಯನ ಮಾಡುವುದರಿಂದಾಗಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ ಎಂದೂ ದಾಸ್ ಹೇಳುತ್ತಾರೆ. ಇದಷ್ಟೇ ಅಲ್ಲದೇ, ಐಎಂಎಸ್ ಮತ್ತು ಎಸ್‌ಯೂಎಂ ಸಂಸ್ಥೆಗಳ ಸಂಶೋಧಕರು ಜೀನೋಮ್ ಸೀಕ್ವೆನ್ಸ್‌ಗಳ ಮೇಲೂ ಕೆಲಸ ಮಾಡುತ್ತಿದ್ದು, ಲಘು, ಮಧ್ಯಮ ಮತ್ತು ಗಂಭೀರ ಸ್ತರದಲ್ಲಿ ರೋಗ ತೀವ್ರತೆಯನ್ನು ಅರಿತುಕೊಳ್ಳುವುದಕ್ಕಾಗಿ 500 ಜೀನೋಮುಗಳ ವಿಶ್ಲೇಷಣೆಯೂ ನಡೆದಿದೆ. ಇದರಿಂ ದಾಗಿ ಸೋಂಕು ಪ್ರಸರಣದ ಕುರಿತೂ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.