ಇನ್ನು 3 ಹಂತದಲ್ಲಿ ಸಿಯುಇಟಿ-ಯುಜಿ ಪರೀಕ್ಷೆ: ಯುಜಿಸಿ
ಸಿಯುಇಟಿ ಜೊತೆ ನೀಟ್, ಜೆಇಇ ವಿಲೀನ ಸದ್ಯಕ್ಕಿಲ್ಲ
Team Udayavani, Mar 16, 2023, 7:40 AM IST
ನವದೆಹಲಿ: ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ)ಯನ್ನು ಈ ಬಾರಿ 3 ಹಂತದಲ್ಲಿ ನಡೆಸುವುದಾಗಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಬುಧವಾರ ತಿಳಿಸಿದೆ.
ಅಲ್ಲದೇ, ಜೆಇಇ-ನೀಟ್‌ನಂಥ ಪ್ರವೇಶ ಪರೀಕ್ಷೆಗಳನ್ನೂ ಸಿಯುಇಟಿ-ಯುಜಿಯೊಂದಿಗೆ ವಿಲೀನಗೊಳಿಸುವುದಿದ್ದರೆ ಈ ಕುರಿತು 2 ವರ್ಷಗಳ ಮುಂಚೆಯೇ ಮಾಹಿತಿ ನೀಡುತ್ತೇವೆ ಎಂದಿದೆ.
ಯುಜಿಸಿ ಅಧ್ಯಕ್ಷರಾದ ಎಂ.ಜಗದೇಶ್ ಕುಮಾರ್ ಸಂದರ್ಶನವೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ. ಜೆಇಇ-ನೀಟ್-ಸಿಯುಇಟಿ-ಯುಜಿ ಸಂಯೋಜನೆ ಕುರಿತು ಹಲವು ಗೊಂದಲಗಳು ವಿದ್ಯಾರ್ಥಿಗಳಲ್ಲಿವೆ. ಆದರೆ,ಯಾವುದೇ ಗೊಂದಲ ಬೇಡ.ಭವಿಷ್ಯದಲ್ಲಿ ಅವುಗಳನ್ನು ವಿಲೀನಗೊಳಿಸಿದರೆ ಆ ಪ್ರಕ್ರಿಯೆಗೂ 2 ವರ್ಷ ಮುಂಚಿತವಾಗಿ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ಜತೆಗೆ ಸಿಯುಇಟಿ-ಯುಜಿ ಪರೀಕ್ಷೆಯನ್ನು ಈವರೆಗೆ 2 ಹಂತದಲ್ಲಿ ನಡೆಸಲಾಗುತ್ತಿತ್ತು. ಆದರೆ, ವಿದ್ಯಾರ್ಥಿಗಳಿಗೆ ಕೆಲ ಅಡಚಣೆಯಾದ ಹಿನ್ನೆಲೆ ಇನ್ನು 3 ಹಂತಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.