Cyclone Dana;120 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ : 13 ಲಕ್ಷ ಮಂದಿ ಸುರಕ್ಷಿತ ಸ್ಥಳಕ್ಕೆ
Team Udayavani, Oct 25, 2024, 6:30 AM IST
ಭುವನೇಶ್ವರ/ ಕೋಲ್ಕತಾ: ಒಡಿಶಾ ಮತ್ತು ಪಶ್ಚಿಮ ಬಂಗಾಲ ಕರಾವಳಿಗೆ ದಾನಾ ಚಂಡಮಾರುತ ಅಪ್ಪಳಿಸಲಿರುವಂತೆಯೇ 2 ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಚಂಡಮಾರುತ ಅಪ್ಪಳಿಸುವ ವೇಳೆ ಪ್ರತೀ ಗಂಟೆಗೆ 120 ಕಿ.ಮೀ. ವರೆಗೆ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಹಾನಿ ತಡೆಗಟ್ಟಲು 2 ರಾಜ್ಯ ಸರಕಾರಗಳು ಸಕಲ ಸಿದ್ಧತೆ ಕೈಗೊಂಡಿವೆ. ಬಂಗಾಲಕೊಲ್ಲಿಯಲ್ಲಿ ನೌಕಾಪಡೆಯ 2 ಹಡಗುಗಳು ರಕ್ಷಣ ಕಾರ್ಯಾಚರಣೆಗಾಗಿ ಸಿದ್ಧವಾಗಿರಿಸಲಾಗಿದೆ.
ಗುರುವಾರ ಪಶ್ಚಿಮ ಬಂಗಾಲದಲ್ಲೂ ಸ್ಥಳಾಂತರ ಆರಂಭಿಸಲಾಗಿದ್ದು, 3.5 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 2 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪುರಿಯ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಬೇಡಿ ಎಂದು ಒಡಿಶಾ ಸರಕಾರ ಭಕ್ತರಿಗೆ ಮನವಿ ಮಾಡಿದೆ. ಇದೇ ವೇಳೆ, ಚಂಡಮಾರುತದ ಪ್ರಭಾವದಿಂದಾಗಿ ಝಾರ್ಖಂಡ್‌ನಲ್ಲಿಯೂ ಧಾರಾಕಾರ ಮಳೆಯಾಗಲಿದೆ. ಹೀಗಾಗಿ ಅಲ್ಲಿಯೂ ಕೂಡ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ಒಡಿಶಾದಲ್ಲಿ ಮಳೆ ಶುರು: ಸೈಕ್ಲೋನ್ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಮಳೆ ಆರಂಭವಾಗಿದೆ. ಒಡಿಶಾದ ಬಾಲಸೋರ್, ಭದ್ರಕ್ ಮತ್ತು ಪುರಿಗಳಲ್ಲಿ ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದಿವೆ. ಪಾರಾದೀಪದಲ್ಲಿ 6.2 ಸೆಂ.ಮೀ. ಮಳೆಯಾಗಿದೆ.
ಸಹಾಯವಾಣಿ ಆರಂಭ: ಚಂಡಮಾರುತ ಕಿನಾರೆಗಪ್ಪಳಿಸಿದ ಬಳಿಕ ಸಂಭವಿಸುವ ಅಪಾಯದ ಸಮಯದಲ್ಲಿ ಸೂಕ್ತ ನಿರ್ವಹಣೆಗಾಗಿ 2 ರಾಜ್ಯಗಳಲ್ಲೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಕೋಲ್ಕತಾದಲ್ಲಿ ಆರಂಭಿಸಲಾಗಿರುವ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
7,285 ಸೈಕ್ಲೋನ್ ಸೆಂಟರ್: ಒಡಿಶಾದಲ್ಲಿ 7,285 ಸೈಕ್ಲೋನ್ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ 91 ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. 2 ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣ ಪಡೆಯ 70ಕ್ಕೂ ಹೆಚ್ಚು ತಂಡಗಳನ್ನು 2 ರಾಜ್ಯಗಳಲ್ಲಿ ನಿಯೋಜನೆ ಮಾಡಲಾಗಿದೆ. ಬಂಗಾಲ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯ 2 ಹಡಗುಗಳನ್ನು ನಿಯೋಜನೆ ಮಾಡಲಾಗಿದೆ.
ಸೈಕ್ಲೋನ್ ಹಿನ್ನೆಲೆ: 350 ರೈಲುಗಳ ರದ್ದು
ಸೈಕ್ಲೋನ್ ಹಿನ್ನೆಲೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಲ ಮೂಲಕ ಸಂಚರಿಸಲಿರುವ 350ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಹೌರಾ- ಸಿಕಂದಾರಾಬಾದ್, ಸಂಭಾಲ್ಪುರ-ಪುರಿ ಎಕ್ಸ್‌ಪ್ರೆಸ್ ಸೇರಿದಂತೆ 350ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡ ಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಕರ್ನಾಟಕದ 2 ರೈಲುಗಳೂ ರದ್ದು
ಚಂಡಮಾರುತ ಹಿನ್ನೆಲೆಯಲ್ಲಿ ಪುರಿ- ಯಶವಂತಪುರ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರಸ್, ಅ. 26ರಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಪುರಿ ಗರೀಬ್ ರಥ ಸಾಪ್ತಾಹಿಕ ಎಕ್ಸ್‌ಪ್ರೆಸ್, ಅ.27ರಂದು ಗುವಾಹಾಟಿಯಿಂದ ಹೊರಡುವ ಗುವಾ ಹಾಟಿ- ಎಸ್‌ಎಂವಿಟಿ ಬೆಂಗಳೂರು ಟ್ರೆ„-ವೀಕ್ಲಿ ಎಕ್ಸ್ ಪ್ರಸ್ ಸಂಚಾರ ರದ್ದು ಮಾಡಲಾಗಿದೆ.
ಬಂಗಾಲದಲ್ಲಿ 3.5 ಲಕ್ಷ, ಒಡಿಶಾದಲ್ಲಿ 10 ಲಕ್ಷ ಮಂದಿ ಸ್ಥಳಾಂತರ
ಪಶ್ಚಿಮ ಬಂಗಾಲದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 3.5 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲು ಸರಕಾರ ಸೂಚಿಸಿದೆ. ಸಮರೋಪಾದಿಯಲ್ಲಿ ಈ ಕೆಲಸ ಕೈಗೊಂಡಿರುವ ವಿಪತ್ತು ನಿರ್ವಹಣ ದಳ ಹಾಗೂ ಪೊಲೀಸರು, ಎಲ್ಲರನ್ನೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪೊಲೀಸರಿಗೆ ಸ್ಥಳಾಂತರಕ್ಕೆ ಸಹಕರಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಇದೇ ವೇಳೆ, ಒಡಿಶಾದ 14 ಜಿಲ್ಲೆಗಳಲ್ಲಿ 10 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಕೋಲ್ಕತಾ ವಿ.ನಿಲ್ದಾಣದಲ್ಲಿ 15 ಗಂಟೆ ಹಾರಾಟ ಸ್ಥಗಿತ
ಚಂಡಮಾರುತ ಹಿನ್ನೆಲೆಯಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.