ಸೈರಸ್ ಮಿಸ್ತ್ರಿ ಎದೆ ಭಾಗಕ್ಕೆ ಬಲವಾದ ಪೆಟ್ಟು; ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖ
Team Udayavani, Sep 6, 2022, 10:00 PM IST
ಮುಂಬೈ: ರಸ್ತೆ ಅಪಘಾತದಲ್ಲಿ ಅಸುನೀಗಿದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಎದೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಹೃದಯದ ಅಭಿದಮನಿ ಛಿದ್ರವಾಗಿದ್ದರಿಂದಾಗಿ ಆಂತರಿಕ ರಕ್ತ ಸೋರಿಕೆಯುಂಟಾಗಿತ್ತು ಎಂದು ಮಿಸ್ತ್ರಿ ಅವರ ಮರಣೋತ್ತರ ಪರೀಕ್ಷೆ ನಡೆಸಿರುವ ಮುಂಬೈನ ಜೆಜೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಜತೆಗೆ ಅವರ ದೇಹದಲ್ಲಿ ಹಲವು ಗಾಯಗಳಾಗಿದ್ದವು. ಅವರೊಂದಿಗೆ ಸಾವನ್ನಪ್ಪಿದ ಅವರ ಸ್ನೇಹಿತ ಜಹಂಗೀರ್ ಪಂಡೋಲೆ ಅವರಿಗೂ ಇದೇ ರೀತಿಯಲ್ಲಿ ಗಾಯಗಳಾದ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಅಂತ್ಯಕ್ರಿಯೆ: ಸೈರಸ್ ಮಿಸ್ತ್ರಿ ಅಂತ್ಯಕ್ರಿಯೆಯನ್ನು ಮುಂಬೈನ ವರ್ಲಿಯಲ್ಲಿ ನಡೆಸಲಾಯಿತು. ಉದ್ಯಮಿ ರತನ್ ಟಾಟಾ ಅವರ ಮಲತಾಯಿ ಸಿಮೋನ್ ಟಾಟಾ(92), ಟಿಸಿಎಸ್‌ನ ಮಾಜಿ ಮುಖ್ಯಸ್ಥ ಎಸ್.ರಾಮದೊರೈ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಸೀಟ್ ಬೆಲ್ಟ್ ಹಾಕದ್ದರಿಂದ ಶೇ.11 ಸಾವು
ದೇಶದಲ್ಲಿ 2020ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಪೈಕಿ ಶೇ.11 ಸಾವು ಸೀಟ್ ಬೆಲ್ಟ್ ಹಾಕದ ಕಾರಣದಿಂದ ಆಗುತ್ತಿದೆ. ಹೀಗೆಂದು ಕೇಂದ್ರ ಸರ್ಕಾರದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರ ಪಟ್ಟಿಯಲ್ಲಿ ಶೇ.69.3 ಮಂದಿ ಅತಿ ವೇಗದಿಂದ ಅಸುನೀಗಿದ್ದಾರೆ. ಶೇ.73.4 ಮಂದಿ ಅತಿ ವೇಗದ ಚಾಲನೆಯಿಂದ ಗಾಯಗೊಂಡಿದ್ದಾರೆ ಶೇ.30.1 ಸಾವು ಹೆಲ್ಮೆಟ್ ಧರಿಸದ ಕಾರಣದಿಂದಾಗಿದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.
ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಳ್ಳುವವರು ತಮಗೆ ಸೀಟ್ ಬೆಲ್ಟ್ ಅಗತ್ಯವಿಲ್ಲ ಎಂದು ತಿಳಿದುಕೊಂಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳೇ ಈ ರೀತಿಯ ಭ್ರಮೆಯಲ್ಲಿ ಪ್ರಯಾಣಿಸುವುದನ್ನು ನೋಡಿದ್ದೇನೆ. ಅದೇ ಭಾವನೆಯನ್ನು ಜನರೂ ಹೊಂದಿದ್ದಾರೆ. ಜನರ ಸಹಕಾರ ಇಲ್ಲದೆ ಅಪಘಾತ ನಿಯಂತ್ರಣ ಅಸಾಧ್ಯ.
-ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.