![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 10, 2024, 8:00 AM IST
ಮುಂಬೈ: ಮುಂಬೈನಲ್ಲಿ ಶನಿವಾರ ನಡೆದ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಸಿಸ್ಕೋವಾ ಪಟ್ಟ ಗೆದ್ದುಕೊಂಡರು.
28 ವರ್ಷಗಳ ನಂತರ ಭಾರತದಲ್ಲಿ ಈ ಸ್ಪರ್ಧೆ ನಡೆದಿದ್ದು, ಕ್ರಿಸ್ಟಿನಾ 111 ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸಿದ್ದಾರೆ. ಪೊಲೆಂಡ್ ಮೂಲದ 2022ನೇ ಸಾಲಿನ ವಿಶ್ವ ಸುಂದರಿ ಕರೋಲಿನಾ ಬಿಲಾವೆಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಕ್ ಸುಂದರಿ ಕ್ರಿಸ್ಟಿನಾ ಸಿಸ್ಕೋವಾ ಸಂತಸದ ಕಂಬನಿಗರೆದು ಹರ್ಷ ವ್ಯಕ್ತ ಪಡಿಸಿದ್ದಾರೆ.
ಸಿನಿ ಶೆಟ್ಟಿಗೆ ತಪ್ಪಿದ ಪಟ್ಟ: ಪ್ರಶಸ್ತಿ ಗೆಲ್ಲಲು ಕರ್ನಾಟಕ ಮೂಲದ ಸಿನಿ ಶೆಟ್ಟಿ ವಿಫಲರಾಗಿದ್ದಾರೆ. ಅಂತಿಮ ಸುತ್ತಿನವರೆಗೂ ತೇರ್ಗಡೆಯಾಗುತ್ತಾ ಬಂದ ಅವರು, ಅಗ್ರ 8ರ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೊನೆಗೆ ನಾಲ್ವರ ಆಯ್ಕೆ ವೇಳೆ ಸಿನಿ ಶೆಟ್ಟಿ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾರಂಭ ನಡೆಯಿತು. ಲೆಬನಾನ್‌ನ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು.
Congratulations #KrystynaPyszkova from the Czech Republic
Wins the 71st #MissWorld Title 2024. #MissWorld2024 pic.twitter.com/UVjMpyTqe7— IndianActress (@INDACTRESSPIC) March 10, 2024
ಕಾನೂನು ಮತ್ತು ಬಿಸಿನೆಸ್ ಎರಡರಲ್ಲೂ ಎರಡು ಡಿಗ್ರಿ ಓದುತ್ತಿರುವ ಕ್ರಿಸ್ಟಿನಾ ಸಿಸ್ಕೋವಾ ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಸಾಮಾಜಿಕ ಮಾಧ್ಯಮದ ಪ್ರಕಾರ, ಅವರು ಕ್ರಿಸ್ಟಿನಾ ಪಿಸ್ಕೊ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.