ಬುರ್ಖಾಧಾರಿಗಳೂ ನಿನಗೆ ಮತ ಹಾಕಿದ್ದಾರೆ: ಯೋಗಿಗೆ ತಂದೆಯ ಕಿವಿಮಾತು
Team Udayavani, Mar 22, 2017, 11:37 AM IST
ಡೆಹಾರಾಡೂನ್ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ, 84ರ ಹರೆಯದ ನಿವೃತ್ತ ವಲಯ ಅರಣ್ಯಾಧಿಕಾರಿ, ಆನಂದ್ ಸಿಂಗ್ ಬಿಷ್ತ್ ಅವರು ತಮ್ಮ ಮಗನಿಗೆ ಕೆಲವೊಂದು ಕಿವಿಮಾತುಗಳನ್ನು ಹೇಳಿದ್ದಾರೆ.
“ಎಲ್ಲರನ್ನೂ ಸಂಭಾಳಿಸಿಕೊಂಡು ಮುನ್ನಡೆಯಬೇಕು. ಬುರ್ಖಾ ತೊಟ್ಟ ಮಹಿಳೆಯರು ಕೂಡ ನಿನಗೆ ಮತ ಹಾಕಿದ್ದಾರೆ ಎನ್ನುವುದನ್ನು ಮರೆಯಬೇಡ; ಎಲ್ಲ ಧರ್ಮೀಯರನ್ನು ನೀನು ಗೌರವಿಸಬೇಕು; ಅವರ ಹೃದಯಗಳನ್ನು ನೀನು ಪ್ರೀತಿ, ಮಮತೆ, ವಾತ್ಸಲ್ಯದಿಂದ ಗೆಲ್ಲಬೇಕು’ ಎಂದು ಆನಂದ್ ಸಿಂಗ್ ತಮ್ಮ ಮಗನಿಗೆ ಹೇಳಿದ್ದಾರೆ.
ಊರಿಗೆ ಅರಸನಾದರೂ ಹೆತ್ತವರಿಗೆ ಮಗ ಎಂಬ ನಾಣ್ಣುಡಿಯಂತೆ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವ ತಮ್ಮ ಮಗನಿಗೆ, ಓರ್ವ ಹೊಣೆಯರಿತ ತಂದೆಯಾಗಿ ಈ ಮಾತುಗಳನ್ನು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಆನಂದ್ ಸಿಂಗ್ ಬಿಷ್ತ್ ಅವರು, “ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ತ್ರಿವಳಿ ತಲಾಕ್ ವಿಷಯದಲ್ಲಿ ಅವರು ಬಿಜೆಪಿಯ ಮೇಲೆ ಭಾರೀ ಭರವಸೆಯನ್ನು ಇರಿಸಿದ್ದಾರೆ. ಎಲ್ಲ ಧರ್ಮೀಯರು ಬಿಜೆಪಿಯಲ್ಲಿ ಮತ್ತು ಆದಿತ್ಯನಾಥ್ನಲ್ಲಿ ವಿಶ್ವಾಸ ಇರಿಸಿದ್ದಾರೆ. ಅಂತೆಯೇ ಆತ ಎಲ್ಲರನ್ನೂ ಅಭಿವೃದ್ಧಿಯ ಪಥದಲ್ಲಿ ಒಯ್ಯಬೇಕಾಗಿದೆ. ಈ ಎಲ್ಲ ವಿಷಯಗಳನ್ನು ಆತ ಸದಾ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.
ಆದಿತ್ಯನಾಥ್ ಅವರ ತಂದೆ ಬಿಷ್ತ್ ಅವರು ಪತ್ನಿ ಸಾವಿತ್ರಿ ಅವರೊಂದಿಗೆ ಪೌಡಿ ಜಿಲ್ಲೆಯ ಪಂಚೂರ್ಗ್ರಾಮದಲ್ಲಿ ವಾಸವಾಗಿದ್ದಾರೆ.
“ನನ್ನ ಮಗ ಹಿಂದೂ ಧರ್ಮದ ಪ್ರಚಾರಕ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು. ಅಧಿಕಾರ ಸ್ವೀಕರಿಸಿದ ಮೊದಲನೇ ಆತ ತನ್ನ ಸಿಬಂದಿಗಳನ್ನು ಕರೆದು ಯಾವತ್ತೂ ಜನರ ಮನಸ್ಸನ್ನು ನೋಯಿಸುವ ರೀತಿಯಲ್ಲಿ ಮಾತನಾಡಕೂಡದು ಎಂದು ಹೇಳಿದ್ದಾನೆ; ಇದು ನಿಜಕ್ಕೂ ಒಳ್ಳೆಯದು’ ಎಂದು ಬಿಷ್ತ್ ಹೇಳಿದರು.
ಅಜಯ್ ಸಿಂಗ್ ಬಿಷ್ತ್ ಆಗಿ 1972ರ ಜೂನ್ 5ರಂದು ಜನಿಸಿದ್ದ ಆದಿತ್ಯನಾಥ್ ಪೌಡಿಯಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪಡೆದು ಬಳಿಕ ಕೋಟ್ವಾರ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. 1993ರಲ್ಲಿ ಗೋರಖ್ಪುರಕ್ಕೆ ತೆರಳಿ ಎಂಎಸ್ಸಿ ಪದವಿ ಪಡೆದರು. 1994ರಲ್ಲಿ ಅವರು ಸನ್ಯಾಸತ್ವವನ್ನು ಸ್ವೀಕರಿಸಿದರು. ಇದನ್ನು ಅರಗಿಸಿಕೊಳ್ಳಲು ತಮ್ಮ ಕುಟುಂಬಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಯಿತು ಎಂದು ಆದಿತ್ಯನಾಥ್ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.